ಪ್ರೊ. ನಂಜುಂಡಸ್ವಾಮಿಗೆ ಬಸವಶ್ರೀ ಪ್ರಶಸ್ತಿ

ಸಮಾಜ ಸುಧಾರಕರು, ಹೊಸ ಹಾದಿಯ ಹರಿಕಾರನ್ನು ಗುರುತಿಸಿ 1997ರಿಂದ ಪ್ರತಿ ವರ್ಷವೂ ಚಿತ್ರದುರ್ಗದ ಶ್ರೀಮಠವೂ ಬಸವಶ್ರೀ ಪ್ರಶಸ್ತಿ ನೀಡುತ್ತಾ ಬಂದಿದೆ.
ಅಣ್ಣಾ ಹಜಾರೆ, ಮೇಧಾ ಪಾಟಕ್, ಸ್ನಾಮಿ ಅಗ್ನಿವೇಶ್, ಶಬನಾ ಆಜ್ಮಿ, ಕಿರಣ್ ಬೇಡಿ,ದಲೈಲಾಮಾ, ಸುಭಾಷ್ ಪಾಲೇಕರ್, ಕಾಂತ್ರಿಕಾರಿ ಹೋರಾಟಗಾರ ಗದ್ದರ್, ಪಿ,ಟಿ,ಉಷಾ, ಡಾ. ಎಚ್ ಸುದರ್ಶನ್, ಶ್ರೀಲಂಕಾದ ಸಮಾಜಿಕ ಕಾರ್ಯಕರ್ತ ಆರ್ಯರತ್ನೆ ಸೇರಿದಂತೆ 14ಕ್ಕೂ ಹೆಚ್ಚು ಜನರಿಗೆ ಈ ಪ್ರತಿಷ್ಥಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದೇ ಮೊದಲ ಬಾರಿಗೆ ಮರಣೋತ್ತರ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರೈತ ಚಳವಳಿಯ ಸಂಸ್ಥಾಪಕ, ನಾಡು ಕಂಡ ಶ್ರೇಷ್ಠ ಕಾನೂನು ತಜ್ಞ, ಸಮಾಜವಾದಿ, ಮಾಜಿ ಶಾಸಕ ಪ್ರೊ. ನಂಜುಂಡ ಸ್ವಾಮಿ ಅವರಿಗೆ ಈ ಬಾರಿ ಪ್ರಶಸ್ತಿ ನೀಡಲಾಗುತ್ತಿದೆ.
1989 ರಿಂದ 94 ರ ಅವಧಿಯಲ್ಲಿ ಪಕ್ಷೇತರರಾಗಿ ವಿಧಾನ ಸಭೆ ಸದಸ್ಯರಾಗಿದ್ದ ನಂಜುಂಡ ಸ್ವಾಮಿ ಅವರು ನೇರ, ನಿಷ್ಠುರ ಮಾತಿಗೆ ಹೆಸರಾಗಿದ್ದರು.












Click it and Unblock the Notifications