Arecanut & Copra Price: ಕುಸಿತ ಕಂಡ ಅಡಿಕೆ ಧಾರಣೆ: ಕೊಬ್ಬರಿ ಬೆಲೆ ಎಷ್ಟಿದೆ ತಿಳಿಯಿರಿ

ಅಡಿಕೆ ಧಾರಣೆ ಸದ್ಯ ಪ್ರತಿ ದಿನ ಏರಿಳಿತ ಕಾಣುತ್ತಿದೆ. ಸೋಮವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಅಲ್ಪ ಕುಸಿತ ಕಂಡಿದೆ. 55 ಸಾವಿರ ರೂಪಾಯಿಗೆ ತಲುಪಿದ್ದ ಕ್ವಿಂಟಾಲ್ ರಾಶಿ ಅಡಿಕೆ ಬೆಲೆ ಇದೀಗ ಶಿವಮೊಗ್ಗ ಮಾರುಕಟ್ಟೆಯಲ್ಲಿ 52199 ರೂಪಾಯಿಗೆ ಕುಸಿತ ಕಂಡಿದೆ. ಇನ್ನೂ ಕೆಲವು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ 54599 ರೂಪಾಯಿವರೆಗೆ ಮಾರಾಟವಾಗಿದೆ.

ಸೋಮವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಕನಿಷ್ಠ₹42,079 ಇದ್ದರೆ ಗರಿಷ್ಠ ಧಾರಣೆ ₹52,199 ಕ್ಕೆ ಮಾರಾಟವಾಗಿದೆ. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ ₹52,012 ಮುಟ್ಟಿತ್ತು. ಸಿದ್ದಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ 54,599 ರೂಪಾಯಿಗೆ ಮಾರಾಟವಾಗಿದೆ.

Arecanut Prices Experience Slight Fall: Kobbari (Copra) Latest Price In Karnataka

ಸಾಗರ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಕ್ವಿಂಟಾಲ್‌ಗೆ ಗರಿಷ್ಠ ₹23,869 ಗೆ ಮಾರಾಟವಾಗಿದೆ. ಸಿದ್ದಾಪುರದಲ್ಲಿ ರಾಶಿ ಕೆಂಪಡಕೆ ದರ 50 ಸಾವಿರ ರೂಪಾಯಿಗಿಂತ ಕಡಿಮೆ ದರಕ್ಕೆ ಕುಸಿದಿದೆ. ಗರಿಷ್ಠ ದರ 49,599ಕ್ಕೆ ಮಾರಾಟವಾಗಿದೆ.

ಆಗಸ್ಟ್ 14 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಕೆ.ಆರ್.ಪೇಟೆ ಬೇರೆ ₹7,861 ₹7,861 ₹7,861
2 ಪುತ್ತೂರು ಬೇರೆ ₹4,500 ₹7,300 ₹5,900
3 ತಿಪಟೂರು ಕೊಬ್ಬರಿ ₹8,000 ₹9,531 ₹9,200
4 ಹುಳಿಯಾರು ಬಾಲ್ ₹9,100 ₹9,400 ₹9,322
5 ತುರುವೇಕೆರೆ ಕೊಬ್ಬರಿ ₹9,400 ₹9,500 ₹9,400
6 ತುಮಕೂರು ಬೇರೆ ₹3,950 ₹4,800 ₹4,200

ಕೊಬ್ಬರಿ ಧಾರಣೆ ಹೇಗಿದೆ?

ಸದ್ಯ ಕೊಬ್ಬರಿ ದರ ಸ್ಥಿರತೆ ಕಾಯ್ದುಕೊಂಡಿದ್ದ 9 ಸಾವಿರದಿಂದ 10 ಸಾವಿರ ರೂಪಾಯಿಗಳ ಮಧ್ಯದಲ್ಲಿ ಏರಿಳಿತ ಕಾಣುತ್ತಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರಿನಲ್ಲಿ ಸೋಮವಾರ ಕೊಬ್ಬರಿ ಧಾರಣೆ ಕನಿಷ್ಠ 8000 ಸಾವಿರ ರೂಪಾಯಿ ಇದ್ದರೆ, ಗರಿಷ್ಠ 9531 ರೂಪಾಯಿ ಆಗಿತ್ತು. ಹುಳಿಯಾರು ಮಾರುಕಟ್ಟೆಯಲ್ಲಿ ಗರಿಷ್ಠ ದರ 9400 ರೂಪಾಯಿ ಆಗಿತ್ತು.

ತುರುವೇಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 9,400 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 9,500 ಇತ್ತು. ಕೆಆರ್ ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ 7861 ರೂಪಾಯಿ ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಕೋಕಾ ₹12,500 ₹25,000 ₹22,500
2 ಬಂಟ್ವಾಳ ಹೊಸ ವೆರೈಟಿ ₹27,500 ₹44,500 ₹42,000
3 ಚನ್ನಗಿರಿ ರಾಶಿ ₹43,021 ₹52,012 ₹50,091
4 ಕಾರ್ಕಳ ಹೊಸ ವೆರೈಟಿ ₹30,000 ₹45,000 ₹35,000
5 ಕುಮಟಾ ಕೋಕಾ ₹20,869 ₹33,599 ₹31,899
6 ಕುಮಟಾ ಫ್ಯಾಕ್ಟರಿ ₹14,569 ₹23,400 ₹22,169
7 ಮಡಿಕೇರಿ ಕಚ್ಚಾ ₹43,480 ₹43,480 ₹43,480
8 ಪುತ್ತೂರು ಕೋಕಾ ₹11,000 ₹25,000 ₹18,000
9 ಪುತ್ತೂರು ಹೊಸ ವೆರೈಟಿ ₹34,000 ₹44,500 ₹39,250
10 ಪುತ್ತೂರು ಹೊಸ ವೆರೈಟಿ ₹34,000 ₹44,500 ₹39,250
11 ಸಾಗರ ಸಿಪ್ಪೆಗೋಟು ₹13,899 ₹23,869 ₹22,288
12 ಸಾಗರ ಕೆಂಪು ಗೋಟು ₹32,399 ₹37,899 ₹36,299
13 ಸಾಗರ ರಾಶಿ ₹36,599 ₹49,499 ₹48,699
14 ಶಿವಮೊಗ್ಗ ಬೆಟ್ಟೆ ₹50,200 ₹53,899 ₹52,200
15 ಶಿವಮೊಗ್ಗ ಸರಕು ₹57,119 ₹81,009 ₹69,200
16 ಶಿವಮೊಗ್ಗ ರಾಶಿ ₹42,079 ₹52,199 ₹50,019
17 ಸಿದ್ದಾಪುರ ರಾಶಿ ₹45,169 ₹49,599 ₹48,699
18 ಶಿರಸಿ ರಾಶಿ ₹47,898 ₹50,569 ₹48,780
19 ಯಲ್ಲಾಪುರ ರಾಶಿ ₹47,230 ₹54,599 ₹50,899
20 ಯಲ್ಲಾಪುರ ಚಾಲಿ ₹40,799 ₹42,869 ₹41,499
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+