ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಹಂಗಾಮು; ಕೃಷಿ ಚಟುವಟಿಕೆಗೆ ರೈತರ ತಯಾರಿ

|
Google Oneindia Kannada News

ದಾವಣಗೆರೆ, ಮೇ 06 : 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 2.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

ಮುಂಗಾರು ಹಂಗಾಮಿಗೆ ಅತಿ ಪ್ರಮುಖವಾದ ಕೃಷಿ ಪರಿಕರ, ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ವಿತರಿಸಲು ಜಿಲ್ಲೆಯಲ್ಲಿರುವ 20 ರೈತ ಸಂಪರ್ಕ ಕೇಂದ್ರಗಳು ಮೂಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ! ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!

ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳಿಗೆ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಮಾರುಕಟ್ಟೆಗೆ ಬಂದ ಹಾವೇರಿ ಆಲ್ಫಾನ್ಸೋ ಮಾವು; ರುಚಿ ನೋಡಿದ್ರಾ? ಮಾರುಕಟ್ಟೆಗೆ ಬಂದ ಹಾವೇರಿ ಆಲ್ಫಾನ್ಸೋ ಮಾವು; ರುಚಿ ನೋಡಿದ್ರಾ?

Benefits For Farmer Ahead Of Monsoon Season

ಇಲಾಖೆಯಿಂದ ವಿತರಿಸಲಾಗುವ ಪ್ರಮಾಣಿತ ಬಿತ್ತನೆ ಬೀಜಗಳನ್ನು ಬೀಜ ಬದಲಿಕೆ ಅನುಪಾತದನ್ವಯ ವಿತರಿಸಲಾಗುತ್ತದೆ ಹಾಗೂ ಬಿತ್ತನೆ ಬೀಜಗಳನ್ನು ವಿತರಿಸುವಾಗ ಸ್ವಪರಾಗ ಸ್ಪರ್ಶ ಬೆಳೆಗಳಾದ ಶೇಂಗಾ, ತೊಗರಿ, ಉದ್ದು, ಹೆಸರು, ಕಡಲೆ ಬಿತ್ತನೆ ಬೀಜಗಳನ್ನು ಒಮ್ಮೆ ಇಲಾಖೆಯಿಂದ ಪಡೆದ ರೈತರು ಮುಂದಿನ ಮೂರು ವರ್ಷಗಳ ಬಳಿಕ ಅದೇ ಬೆಳೆ, ತಳಿ ಬಿತ್ತನೆ ಬೀಜಗಳನ್ನು ಪಡೆಯಲು ಅರ್ಹರು.

ನೇರ ಮಾರುಕಟ್ಟೆ; ಲಾಕ್ ಡೌನ್ ನಡುವೆ ಲಾಭ ಕಂಡ ರೈತ ನೇರ ಮಾರುಕಟ್ಟೆ; ಲಾಕ್ ಡೌನ್ ನಡುವೆ ಲಾಭ ಕಂಡ ರೈತ

ಈ ಬೆಳೆಗಳಲ್ಲಿ ರೈತರು ತಾವು ಹಿಂದಿನ ವರ್ಷಗಳಲ್ಲಿ ಖರೀದಿಸಿ ಬಿತ್ತನೆ ಮಾಡಿ ಬೆಳೆದಂತಹ ಬೆಳೆಯ ಬೀಜಗಳನ್ನು ಮುಂದಿನ ಮೂರು ವರ್ಷಗಳವರೆಗು ಬಿತ್ತನೆ ಬೀಜಗಳಾಗಿ ಬಳಕೆ ಮಾಡಬಹುದಾಗಿದೆ. 2020ನೇ ಮುಂಗಾರು ಹಂಗಾಮಿಗೆ ಇಲಾಖೆಯಿಂದ ನೀಡಲಾದ ಮಾರ್ಗಸೂಚಿ ಪ್ರಕಾರ ಸ್ವಪರಾಗಸ್ಪರ್ಶ ಬೆಳೆಗಳಲ್ಲಿ ಈ ಹಿಂದಿನ ಮೂರು ವರ್ಷಗಳಲ್ಲಿ ಬಿತ್ತನೆ ಬೀಜ ಪಡೆದ ರೈತರಿಗೆ ಅದೇ ಬೆಳೆ, ತಳಿಗಳ ಬೀಜಗಳನ್ನು ವಿತರಿಸಲಾಗುವುದಿಲ್ಲ.

ಕಳೆದ ಮೂರು ವರ್ಷಗಳಿಂದ ರಿಯಾಯತಿ ದರದಲ್ಲಿ ಇಲಾಖೆಯಿಂದ ಖರೀದಿಸಿದ ಬಿತ್ತನೆ ಬೀಜದ ಫಲಾನುಭವಿ ರೈತರ ವಿವರಗಳು ಇಲಾಖೆಯಲ್ಲಿ ಲಭ್ಯವಿರುತ್ತದೆ. ರೈತರಿಗೆ 10 ವರ್ಷಗಳಿಂದ ಬಿಡುಗಡೆಯಾದ ಉತ್ತಮ ಬೆಳೆ ಮತ್ತು ತಳಿಯ ಬೀಜಗಳನ್ನು ವಿತರಿಸಿದ್ದು ತಾವು ಬೆಳೆದ ಬೆಳೆಯ ಬೀಜಗಳನ್ನು ಬಿತ್ತನೆಗಾಗಿ ಬಳಸಬಹುದಾಗಿರುತ್ತದೆ.

ರೈತರು ಈ ತಾಂತ್ರಿಕತೆಯನ್ನು ಬಳಸಿಕೊಂಡು ಬಿತ್ತನೆ ಮಾಡಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಸಿದ್ಧತೆ ನಡೆಯುತ್ತಿದ್ದು, ಕೃಷಿ ಚಟುವಟಿಕೆ ಆರಂಭವಾಗಿದೆ.

English summary
Here are the list of benefits for the farmers ahead of the monsoon season. Agriculture department announced several schemes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X