Get Updates
Get notified of breaking news, exclusive insights, and must-see stories!

ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ವ್ಯಕ್ತಿಯ ಕೊಲೆ

ನವದೆಹಲಿ, ಮೇ 25: ವ್ಯಕ್ತಿಯನ್ನು ಗುಂಡಿಟ್ಟು ಕೊಂದು, ಆತನ ಕುಟುಂಬದ ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ದೆಹಲಿಗೆ ಅರವತ್ತೆಂಟು ಕಿಲೋಮೀಟರ್ ದೂರದ ಉತ್ತರ ಪ್ರದೇಶದ ಜೇವರ್ ನಲ್ಲಿ ಗುರುವಾರ ಘಟನೆ ನಡೆದಿದೆ.

ನಾಲ್ವರು ಪುರುಷರು ಹಾಗೂ ನಾಲ್ವರು ಮಹಿಳೆಯರಿದ್ದ ಕುಟುಂಬ ಕಾರಿನಲ್ಲಿ ಜೇವರ್ ನಿಂದ ಬುಲಂದ್ ಶಹರ್ ಗೆ ತೆರಳುತ್ತಿತ್ತು. ಅಲ್ಲಿನ ಆಸ್ಪತ್ರೆಯಲ್ಲಿ ಸಂಬಂಧಿಕರೊಬ್ಬರು ದಾಖಲಾಗಿದ್ದರು. ಅವರನ್ನು ನೋಡಲು ತೆರಳುತ್ತಿದ್ದರು. ಲೋಹದಂಥ ವಸ್ತುವೊಂದು ಕಾರಿಗೆ ಬಡಿದು, ರಾತ್ರಿ ಒಂದು ಗಂಟೆ ಸುಮಾರಿಗೆ ನಿಂತಿದೆ.

Man Shot Dead, 4 Women Allegedly Gang-Raped On Highway Near Delhi

ಏನಾಗಿದೆ ಎಂದು ತಿಳಿಯಲು ಕುಟುಂಬದ ಕೆಲವರು ಕಾರಿನಿಂದ ಇಳಿದಿದ್ದಾರೆ. ಆಗ ಶಸ್ತ್ರಸಜ್ಜಿತ ಆರು ಮಂದಿ ಕಾರನ್ನು ಸುತ್ತುವರೆದಿದ್ದಾರೆ. ಮಹಿಳೆಯರನ್ನು ಹೊರಗೆಳೆದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆ ನಂತರ ಅವರ ಬಳಿಯಿದ್ದ ವಸ್ತುಗಳನ್ನು ದೋಚಿದ್ದಾರೆ. ಮಹಿಳೆಯರನ್ನು ರಕ್ಷಿಸಲು ಯತ್ನಿಸಿದ ನಲವತ್ತೈದು ವರ್ಷದ ವ್ಯಕ್ತಿಯನ್ನು ಗುಂಡಿಟ್ಟು ಕೊಂದಿದ್ದಾರೆ.

ಲೋಹದಂಥ ವಸ್ತು ಕಾರಿಗೆ ತಾಗಿದಾಗಲೇ ನಾವು ಪೊಲೀಸರಿಗೆ ಕರೆ ಮಾಡಿದೆವು. ಆದರೆ ಅವರು ತಡವಾಗಿ ಬಂದರು ಎಂದು ಕುಟುಂಬದವರು ಹೇಳಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ. ಆದರೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬುದು ವೈದ್ಯಕೀಯ ಪರೀಕ್ಷೆ ನಂತರ ಗೊತ್ತಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+