ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಎಸ್ಎಸ್ ಉಚಿತ ಶಾಲೆ, ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಹಾಕಿ

|
Google Oneindia Kannada News

ಮೈಸೂರು, ಏ. 2 : ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದ ಜೆಎಸ್‌ಎಸ್ ಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯದಲ್ಲಿ 2015-16ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಏ. 10ರಿಂದ ಅರ್ಜಿಗಳನ್ನು ವಿತರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಮೇ 5 ಕೊನೆಯ ದಿನ.

1 ರಿಂದ 7ನೇ ತರಗತಿವರೆಗೆ ಕನ್ನಡ ಮಾಧ್ಯಮ, 1 ಹಾಗೂ 5 ನೇ ತರಗತಿಗಳ ಇಂಗ್ಲಿಷ್ ಮಾಧ್ಯಮ, 8ನೇ ತರಗತಿಗೆ ಕನ್ನಡ, ಇಂಗ್ಲಿಷ್ ಮಾಧ್ಯಮಕ್ಕೆ ಮಾತ್ರ ಪ್ರವೇಶಾವಕಾಶವಿದೆ. ಅರ್ಜಿಗಳನ್ನು ಶಾಲಾ ಕಚೇರಿಯಿಂದ ಖುದ್ದಾಗಿ ಪಡೆಯಬಹುದು ಅಥವ ಅಂಚೆ ಮೂಲಕ ತರಿಸಿಕೊಳ್ಳಬಹುದು.

JSS school

ಯಾರು ಅರ್ಜಿ ಸಲ್ಲಿಸಬಹುದು : ಗ್ರಾಮಾಂತರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರು, ಬಡತನ ರೇಖೆಯೊಳಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಏಪ್ರಿಲ್ 10 ರಿಂದ ಅರ್ಜಿಗಳನ್ನು ವಿತರಣೆ ಮಾಡಲಾಗುತ್ತದೆ. ಮೇ.5ರೊಳಗೆ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬಹುದು. [ವಿಘ್ನಗಳ ನಡುವೆ ನಂಜನಗೂಡಿನ ರಥೋತ್ಸವ ಸಂಪನ್ನ]

ಅಂಚೆ ಮೂಲಕ ತರಿಸಿಕೊಳ್ಳಬಹುದು : ಅಂಚೆ ಮೂಲಕವೂ ಅರ್ಜಿಗಳನ್ನು ಪಡೆಯಬಹುದಾಗಿದೆ. ಅಂಚೆ ಮೂಲಕ ಅರ್ಜಿ ಪಡೆಯಲು ಇಚ್ಛಿಸುವವರು ವಿದ್ಯಾರ್ಥಿ ಪ್ರವೇಶ ಬಯಸುವ ತರಗತಿ, ವಿವರ ಹಾಗೂ ಸ್ವವಿಳಾಸವುಳ್ಳ 5 ರೂ. ಪೋಸ್ಟಲ್ ಸ್ಟ್ಯಾಂಪ್ ಹಚ್ಚಿದ ಲಕೋಟೆಯನ್ನು ಕಳುಹಿಸಬೇಕು.

ವಿಳಾಸ : ಆಡಳಿತಾಧಿಕಾರಿ, ಜೆಎಸ್‌ಎಸ್ ಸಂಸ್ಥೆಗಳು, ಸುತ್ತೂರು- 571 129, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಹೆಚ್ಚಿನ ಮಾಹಿತಿಗೆ ದೂ. 08221-232323, 232653, 232044 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

English summary
Mysuru : JSS School and Hostel run by the Suttur Math has invited applications for free admission of eligible students. Free admission is only for the students from Below Poverty Line families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X