ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಯುವಕನ ಇಂಗ್ಲೀಷ್ ಕಲಿಕೆಯ ಸಾಧನೆಯ ಕಥೆ!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜುಲೈ 15 : ಇಂಗ್ಲೀಷ್ ಜಗತ್ತಿನ ಸರ್ವಮಾನ್ಯ ಭಾಷೆ. ಇತ್ತೀಚೆಗಂತೂ ಈ ಭಾಷೆ ಬರಲ್ಲಾ ಅಂದ್ರೆ ನಿಮ್ಮನ್ನು ಯಾವುದೋ ಅನ್ಯಗ್ರಹದಿಂದ ಬಂದವರಥರಾ ನೋಡ್ತಾರೆ. ಕೈಯಲ್ಲಿ ಎಷ್ಟೇ ಡಿಗ್ರಿಗಳಿದ್ದರೂ ಇಂಗ್ಲೀಷ್‍ ಕಮ್ಯೂನಿಕೇಷನ್‌ ಸ್ಕಿಲ್ ಇಲ್ಲಾ ಅಂದ್ರೆ ನಿಮಗೆ ಕೆಲಸ ಸಿಗಲ್ಲ.

ಇಂಗ್ಲೀಷ್‍ ಅಂದ್ರೆ ಮಾರು ದೂರ ಓಡುತ್ತಿದ್ದರು ಕೋಚಿಂಗ್‍ ಕ್ಲಾಸ್ ಸೇರಿಕೊಂಡು ಅರಳು ಹುರಿದಂತೆ ಮಾತನಾಡುವ ಕಾಲವಿದು. ನಾವೀಗ ಹೇಳಹೊರಟಿರುವುದು ಇಂತಹ ಒಬ್ಬ ಸಾಧಕರ ಕಥೆಯನ್ನು. ನೀನು ಇಂಗ್ಲೀಷ್ ಕಲಿಯೋಲ್ಲಾ ಎಂದು ಟೀಕಿಸಿದವರಿಗೆ ಸಾಧನೆಯ ಮೂಲಕವೇ ಉತ್ತರ ಕೊಟ್ಟಿದ್ದಾರೆ ಮಂಗಳೂರಿನ ಈ ಯುವಕ.

ಇವರು ಹಿಸ್ರಾರ್, ಮಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ಹೆಸರು ಮಾಡಿರೋ ಸಂಸ್ಥೆ 'ಹಿಸ್ರಾರ್‌ ಇವೆಂಟ್ಸ್‍ ಆಂಡ್ ಸೆಲೆಬ್ರೇಷನ್ಸ್‌ನ' ಸ್ಥಾಪಕ. ಇವರು ಈ ಮಟ್ಟಕ್ಕೆ ಏರಿರುವ ಹಿಂದೆ ಬಹಳ ದೊಡ್ಡ ಸಾಹಸದ ಕಥೆ ಇದೆ.

Hisrar success secrets of learning English

ಹಿಸ್ರಾರ್ ಹುಟ್ಟಿದ್ದು ಮಂಗಳೂರಿನಲ್ಲಿ. ಶಿಕ್ಷಣವನ್ನು ಪಡೆದಿದ್ದು ಇಲ್ಲೇ. ಶಿಕ್ಷಣವನ್ನು ಪಡೆದಿದ್ದು ನಗರದಲ್ಲಾದರೂ ಶಾಲೆಯಲ್ಲಿ ಇವರಿಗೆ ಇಂಗ್ಲೀಷ್‍ ಕಲಿಯುವ ಅವಕಾಶ ಲಭಿಸಿರಲಿಲ್ಲ. ಒಂದು ಹಂತದ ಶಿಕ್ಷಣ ಮುಗಿಯುವಷ್ಟರಲ್ಲಿ ಮನೆ ಮಂದಿ ಇವರನ್ನು ವಿದೇಶಕ್ಕೆ ಕಳಿಸಿದ್ರು. ಅಲ್ಲಿಗೆ ಹೋದ ಕೆಲ ದಿನಗಳಲ್ಲೇ ಇವರು ಜ್ವರಕ್ಕೆ ತುತ್ತಾದರು. ಅಲ್ಲಿದ್ದ ಜನರು ನೀನು ಇನ್ನು ಇಲ್ಲಿದ್ರೆ ಆಗೋದಿಲ್ಲಾ ಎಂದು ಅವರನ್ನು ಊರಿಗೆ ವಾಪಸ್ ಕಳಿಸಿದರು.

ಊರಿಗೆ ಮರಳಿದ ಕೆಲವು ದಿನಗಳಲ್ಲಿ ಇವರ ತಂದೆ ತೀರಿಕೊಂಡರು. ಮನೆಯ ಎಲ್ಲಾ ಜವಾಬ್ದಾರಿ, ಸಾಲ ಇವರ ಹೆಗಲ ಮೇಲೆ ಬಿತ್ತು. ಜವಾಬ್ದಾರಿ ನಿರ್ವಹಣೆಗಾಗಿ ಅಲ್ಲಿ-ಇಲ್ಲಿ ಕೆಲಸ ಹುಡುಕಲು ಆರಂಭಿಸಿದರು. ಆದರೆ, ಇಂಗ್ಲೀಷ್ ತಿಳಿದಿಲ್ಲ ಅಂತ ಎಲ್ಲೂ ಕೆಲಸ ಕೊಡಲಿಲ್ಲ.

ಮುಂದೇನು ಎಂದು ಆಲೋಚಿಸುತ್ತಿದ್ದ ಹಿಸ್ರಾರ್ ಅವರಿಗೆ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ನಡೆಸುತ್ತಿದ್ದ ಶಿಕ್ಷಕರ ಪರಿಚಯವಾಗುತ್ತದೆ. ಅವರು ಇವರಿಗೆ ಧೈರ್ಯತುಂಬಿ, ನಾನು ನಿನಗೆ ಇಂಗ್ಲೀಷ್ ಹೇಳಿಕೊಡ್ತೇನೆ ಅಂತಾ ಸಮಾಧಾನ ಮಾಡ್ತಾರೆ. ಶುಲ್ಕ ಪಾವತಿ ಮಾಡಲು ಹಣವಿಲ್ಲ ಅಂದಾಗ ಕಂತುಗಳಲ್ಲಿ ಕಟ್ಟು ಎಂದು ಪಾಠ ಆರಂಭಿಸುತ್ತಾರೆ.

Hisrar success secrets of learning English

ಹೀಗೆ ಇಂಗ್ಲೀಷ್ ಕಲಿಯುವ ಹೊತ್ತಿಗೆ ಲಂಡನ್‍ನ ಟ್ರಿನಿಟಿ ಕಾಲೇಜ್ ಆಫ್‌ ಕಮ್ಯುನಿಕೇಷನ್‌ ಸ್ಕಿಲ್ಸ್ ಮಂಗಳೂರಿನಲ್ಲಿ ಒಂದು ಪರೀಕ್ಷೆ ನಡೆಸಿ ಪ್ರತಿಭಾವಂತರನ್ನು ಗುರುತಿಸುವ ಕೆಲಸಕ್ಕೆ ಮುಂದಾಗುತ್ತದೆ. ಸ್ಪೀಕಿಂಗ್ ಕೋರ್ಸ್ ಕಲಿಯುತ್ತಿದ್ದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುತ್ತದೆ.

'ನಾನು ಕೂಡಾ ಪರೀಕ್ಷೆ ಬರೆಯುತ್ತೇನೆ' ಎಂದು ಹಿಸ್ರಾರ್ ಹೇಳಿದರು. ಇವರ ಮಾತು ಕೇಳಿ ಅಲ್ಲಿದ್ದ ಇತರರು ಮತ್ತು ಶಿಕ್ಷಕರು ಬಿದ್ದು ಬಿದ್ದು ನಕ್ಕಿದ್ದರು. ನೀನು ಪರೀಕ್ಷೆ ಬರೀತೀಯಾ? ಎಂದು ತಮಾಷೆ ಮಾಡಿದ್ದರು. ಅಂತೂ ಧೈರ್ಯ ಮಾಡಿ ಹಿಸ್ರಾರ್‍ ಪರೀಕ್ಷೆ ಬರೆದರು.

ಕೆಲ ಸಮಯದ ಬಳಿಕ ಲಂಡನ್‌ನಿಂದ ಇವರ ಸ್ಪೀಕಿಂಗ್ ಕೋರ್ಸ್ ಸೆಂಟರ್‌ಗೆ ಕರೆ ಬಂದಿತು. ಕರೆ ಸ್ವೀಕರಿಸಿದ ಸಂಸ್ಥೆಯ ಮುಖ್ಯಸ್ಥರಿಗೆ ಅಚ್ಚರಿ ಆಗಿತ್ತು. ಏಕೆಂದರೆ ಪರೀಕ್ಷೆ ಬರೆದ ಅಷ್ಟೂ ವಿದ್ಯಾರ್ಥಿಗಳ ಪೈಕಿ ಬೆಸ್ಟ್ ಕಮ್ಯುನಿಕೇಶನ್‌ ಸರ್ಟಿಫಿಕೇಟ್ ಪಡೆದಿದ್ದು ಹಿಸ್ರಾರ್ ಮಾತ್ರ, ವಿತ್ ಡಿಸ್ಟಿಂಕ್ಷನ್‍ನಲ್ಲಿ.

ಅಲ್ಲಿಂದ ಹಿಸ್ರಾರ್ ಜೀವನವೇ ಬದಲಾಯಿತು. ನೀನ್ಯಾಕೆ ವಿದ್ಯಾರ್ಥಿಗಳಿಗೆಲ್ಲಾ ಮೋಟಿವೇಷನ್ ಸ್ಪೀಚ್ ಕೊಡಬಾರದು ಎಂದು ಸ್ನೇಹಿತರು ಸಲಹೆ ಕೊಟ್ಟರು. ಇವರು ಕೂಡಾ ನಗರದ ಕಾಲೇಜುಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿದರು.

ಎಲ್ಲರೂ ಸಂತೋಷದಿಂದ ಒಪ್ಪಿಗೆ ಕೊಟ್ಟರು. ಹೀಗೆ ವಿದ್ಯಾರ್ಥಿಗಳಿಗೆ ಮೋಟಿವೇಟಿಂಗ್ ಸ್ಪೀಚ್ ನಡೆಸಿ, ಎಷ್ಟೋ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಇವರು. ಸುಮಾರು 6000 ವಿದ್ಯಾರ್ಥಿಗಳಿಗೆ ಈವರೆಗೆ ಮೋಟಿವೇಷನ್ ನೀಡಿದ ಹೆಗ್ಗಳಿಕೆ ಇವರದ್ದು.

ವಿದ್ಯಾರ್ಥಿಗಳಿಗೆ ಸ್ಫೂರ್ತಿತುಂಬುವ ಜೊತೆಗೆ ಪಾರ್ಟ್‍ಟೈಂ ಕೆಲಸ ಮಾಡಿ ಆರ್ಥಿಕ ಸ್ವಾವಲಂಬನೆಗೂ ಹಿಸ್ರಾರ್ ಅವಕಾಶ ಮಾಡಿ ಕೊಡುತ್ತಿದ್ದಾರೆ. ತಮ್ಮದೇ 'ಹಿಸ್ರಾರ್‌ ಇವೆಂಟ್ಸ್‍ ಆಂಡ್ ಸೆಲೆಬ್ರೇಷನ್ಸ್‌ನ' ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ, ತರಬೇತಿಯ ಜೊತೆಗೆ ಆಕರ್ಷಕ ಸಂಭಾವನೆಯನ್ನೂ ನೀಡುತ್ತಿದ್ದಾರೆ.

ಇವರ ಸಂಸ್ಥೆಯಲ್ಲಿ ಮುಕ್ಕಾಲು ಭಾಗ ಇರುವುದು ವಿದ್ಯಾರ್ಥಿಗಳೇ ಎನ್ನುವುದು ಮತ್ತೊಂದು ವಿಶೇಷ. ಇಂಗ್ಲೀಷ್‍ ಹಾಗೆ ಹೀಗೆ ಅಂತಾ ಭಯಪಡ್ತಾಇದ್ದವರು ಈಗ ಈ ಮಟ್ಟಕ್ಕೆ ಬೆಳೆದಿರುವುದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಮನಸ್ಸಿದ್ರೆ ಏನು ಬೇಕಾದ್ರೂ ಸಾಧಿಸಬಹುದು ಎನ್ನುವುದಕ್ಕೆ ಹಿಸ್ರಾರ್ ಮಾದರಿ.

English summary
If you wish you could speak English. success stori of Mangaluru man Hisrar who learned Engalish.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X