ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ದುಬೈನಿಂದ ಬಂದಿತ್ತು 16 ಚಿನ್ನದ ಬಿಸ್ಕೆಟ್

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಏ. 28 : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಲಕ್ಷ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಆಗಮಿಸಿದ ಪ್ರಯಾಣಿಕ ಸೀಟಿನ ಅಡಿಯಲ್ಲಿ 16 ಚಿನ್ನದ ಬಿಸ್ಕೆಟ್‌ಗಳನ್ನು ತೆಗೆದುಕೊಂಡು ಬಂದಿದ್ದ.

ಸೋಮವಾರ ಬೆಳಗ್ಗೆ ದುಬೈನಿಂದ ಆಗಮಿಸಿದ್ದ ಜೆಟ್‌ ಏರ್‌ವೇಸ್ ವಿಮಾನದಲ್ಲಿ ಹೈದರಾಬಾದ್ ಮೂಲದ ಮಹಮದ್ ಲಖ್‌ಮನ್ ಅಹ್ಮದ್ (29) ಆಗಮಿಸಿದ್ದು, ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ. [ಇಂದಿನ ಚಿನ್ನದ ದರ ನೋಡಿ]

Gold

1,865 ಗ್ರಾಂ ತೂಕದ ಸುಮಾರು 50 ಲಕ್ಷ ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ಅಹ್ಮದ್ ಸಾಗಾಟ ಮಾಡುತ್ತಿದ್ದರು. ತಾನು ಕೂತಿದ್ದ ಸೀಟಿನ ಅಡಿ ಚಿನ್ನವನ್ನು ಬಚ್ಚಿಟ್ಟು ಅಹ್ಮದ್ ಸಾಗಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. [24*7 ಕಾರ್ಯನಿರ್ವಹಿಸಲಿದೆ ಮಂಗಳೂರು ವಿಮಾನ ನಿಲ್ದಾಣ]

ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡ ನಂತರ ಅಹ್ಮದ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೆಯೂ ದುಬೈನಿಂದ ಬಂದಿತ್ತು : ಸೂಟ್‌ಕೇಸ್‌ ಹ್ಯಾಂಡಲ್‌ನ ಬಕಲ್ ಹೋಲ್ಡರ್‌, ಜೀನ್ಸ್‌ ಪ್ಯಾಂಟ್‌ನ ಬಟನ್‌ನಲ್ಲಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ವರ್ಷ ಬಂಧಿಸಲಾಗಿತ್ತು. ಈತ ಸಹ ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡುತ್ತಿದ್ದ.

English summary
The officials of the Customs Department seized gold weighing 1,865 gm at Mangalore International Airport on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X