ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ರಸ್ತೆ ತಡೆದು ಪ್ರತಿಭಟನೆ

|
Google Oneindia Kannada News

ಮಂಡ್ಯ, ಜುಲೈ 3: ಜೂನ್ 29 ರಂದು ಮಂಡ್ಯದ ಕೆಆರ್ ಎಸ್(ಕೃಷ್ಣರಾಜ ಸಾಗರ) ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿರುವ ಕುರಿತಂತೆ ಮಂಡ್ಯ, ಮೈಸೂರು ಭಾಗದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ತಮಿಳುನಾಡಿಗೆ ರಾತ್ರೋ ರಾತ್ರಿ ನೀರು ಬಿಟ್ಟ ಕ್ರಮವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಇಂದು(ಜುಲೈ 3) ಮಂಡ್ಯದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಸದ್ಯಕ್ಕೆ ಮಂಡ್ಯ ಭಾಗದಲ್ಲಿ ಮಳೆ ಚೇತರಿಕೆ ಕಾಣುತ್ತಿದ್ದು, ಕೆಆರ್ ಎಸ್ ಜಲಾಶಯವೂ ತುಂಬುತ್ತಿದೆ. ಇಷ್ಟು ದಿನ ಬರಗಾಲದಿಂದ ಬೇಸೆತ್ತ ರೈತರು ಜಲಾಶಯ ತುಂಬಿರುವುದನ್ನು ಕಂಡು ಸಂತಸ ಪಡುವ ಮೊದಲೇ, ತಮಿಳುನಾಡಿಗೆ 2500 ಕ್ಯೂಸೆಕ್ ನೀರನ್ನು ಹರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಮಿಳುನಾಡಿಗೆ ರಾತ್ರೋರಾತ್ರಿ ಕೆಆರ್‍ಎಸ್ ನಿಂದ ನೀರು, ರೈತರ ಪ್ರತಿಭಟನೆತಮಿಳುನಾಡಿಗೆ ರಾತ್ರೋರಾತ್ರಿ ಕೆಆರ್‍ಎಸ್ ನಿಂದ ನೀರು, ರೈತರ ಪ್ರತಿಭಟನೆ

Protest in Mandya against release of cauvery water to Tamil Nadu

ನೀರುಬಿಟ್ಟ ಪ್ರಕರಣದಲ್ಲಿ ತನ್ನ ಪಾತ್ರವೇನೂ ಇಲ್ಲ, ತನ್ನ ಅನುಮತಿ ಇಲ್ಲದೆ ಅಧಿಕಾರಿಗಳೇ ನೀರು ಬಿಟ್ಟಿದ್ದಾರೆಂದು ಸರ್ಕಾರ ಹೇಳುತ್ತಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸದ್ಯಕ್ಕೆ ಕೆ.ಆರ್.ಎಸ್.ಗೆ 17 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಮಟ್ಟ 73.65 ಅಡಿ ತಲುಪಿದೆ.

English summary
Pro Kannada organisations block road in Mandya, Karnataka protest against release of Cauvery water to Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X