ಸ್ಥಳೀಯರ ಹೆಗಲೇರಿದ ಸಿಇಒ ಪ್ರಕರಣ: ಸ್ಥಳೀಯರ ಸ್ಪಷ್ಟನೆ
ಚರಂಡಿ ದಾಟುವಾಗ ದೇವಪ್ಪ ಹಾಗೂ ನರಸಿಂಹಲು ಎಂಬುವರ ಹೆಗಲೇರಿದ್ದ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ವಿವಾದಕ್ಕೀಡಾಗಿದ್ದರು. ಇದೀಗ, ಅವರನ್ನು ಹೆಗಲ ಮೇಲೆ ಹೊತ್ತೊಯ್ದಿದ್ದವರೇ ಅವರ ನೆರವಿಗೆ ಬಂದಿದ್ದಾರೆ.
ರಾಯಚೂರು, ಮಾರ್ಚ್ 25: ಅಧಿಕಾರಿಗಳ ಜತೆಗೆ ಕಾರ್ಯ ನಿಮಿತ್ತ ಕಾಲ್ನಡಿಗೆಯಲ್ಲಿ ಸುತ್ತಾಡುವಾಗ ಚರಂಡಿಯೊಂದನ್ನು ದಾಟುವ ವೇಳೆ ಸ್ಥಳೀಯರ ಹೆಗಲೇರಿ ಚರಂಡಿ ದಾಟುವ ಮೂಲಕ ವಿವಾದ ಎಳೆದುಕೊಂಡಿದ್ದ ರಾಯಚೂರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುರ್ಮಾ ರಾವ್ ಅವರ ಬೆಂಬಲಿಗೆ ಸ್ಥಳೀಯರು ಬಂದಿದ್ದಾರೆ.
ಕುರ್ಮ ರಾವ್ ಅವರು, ಚರಂಡಿ ದಾಟುವಾಗ ದೇವಪ್ಪ ಹಾಗೂ ನರಸಿಂಹಲು ಎಂಬುವರ ಹೆಗಲೇರಿದ್ದರು. ಈಗ, ಇದೇ ದೇವಪ್ಪ ಹಾಗೂ ನರಸಿಂಹಲು ಅವರು ಟಿವಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ತಾವೇ ಸ್ವಯಂ ಪ್ರೇರಿತರಾಗಿ ಅಧಿಕಾರಿಯನ್ನು ಹೆಗಲ ಮೇಲೆ ಹೊತ್ತೊಯ್ದಿರುವುದಾಗಿ ತಿಳಿಸಿದ್ದಾರೆ.[ಚರಂಡಿ ದಾಟಲು ಸ್ಥಳೀಯರ ಹೆಗಲೇರಿದ ರಾಯಚೂರು ಜಿ.ಪಂ ಸಿಇಒ]

ದೇವಪ್ಪ ಅವರು ಸಾಕ್ಷರತಾ ಪ್ರೇಕರರಾಗಿದ್ದರೆ, ನರಸಿಂಹಲು ಅವರು ಗ್ರಾಪಂ ಸದಸ್ಯರಾಗಿದ್ದಾರೆ. ಈ ಇಬ್ಬರೂ ರಾಯಚೂರು ಜಿಲ್ಲೆಯ ಅತ್ಕೂರು ಗ್ರಾಮದವರು.
ಇದೀಗ ಖಾಸಗಿ ಟಿವಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ಈ ಇಬ್ಬರೂ, ''ಕುರ್ಮ ರಾವ್ ಅವರು ತಮ್ಮನ್ನು ಚರಂಡಿ ದಾಟಿಸಬೇಕೆಂದು ಯಾರಲ್ಲೂ ಕೇಳಲಿಲ್ಲ. ಅವರಿಗೆ ತೊಂದರೆಯಾಗಬಾರದೆಂದು ಅವರ ಮೇಲಿನ ಅಭಿಮಾನದಿಂದ ಖುದ್ದು ತಾವೇ ಅವರನ್ನು ಹೊತ್ತುಕೊಂಡು ಚರಂಡಿ ದಾಟಿಸಿದ್ದೆವು'' ಎಂದು ಹೇಳಿಕೊಂಡಿದ್ದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications