ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಕ್ಕರೆ ಕಾರ್ಖಾನೆ 2 ಗೋದಾಮುಗಳು ಅಧಿಕಾರಿಗಳ ವಶ

By Vanitha
|
Google Oneindia Kannada News

ವಿಜಯಪುರ, ಜೂ, 27 : ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರ ಬಾಕಿ ಪಾವತಿಸದ ಕಾರಣ 2 ಸಕ್ಕರೆ ಕಾರ್ಖಾನೆಗಳ ಗೋದಾಮುಗಳನ್ನು ಶುಕ್ರವಾರ ತಹಶೀಲ್ದಾರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಸಕ್ಕರೆ ಕಾರ್ಖಾನೆಯ ಮಾಲೀಕರು ಮತ್ತು ಕಬ್ಬು ಬೆಳೆಗಾರರ ನಡುವೆ ಹಣದ ಬಾಕಿ ವಿಚಾರದಲ್ಲಿ ಸಣ್ಣ ಪುಟ್ಟ ಸಂಘರ್ಷಗಳು ನಡೆಯುತ್ತಲೇ ಇದ್ದವು. ಸಕ್ಕರೆ ಕಾರ್ಖಾನೆಗಳು ರೈತರಿಗೆ ಸುಮಾರು 163.53 ಕೋಟಿ ಹಣವನ್ನು ಪಾವತಿ ಮಾಡಬೇಕಿತ್ತು. ಕೋಟಿಗಟ್ಟಲೇ ಸಾಲಹೊತ್ತಿರುವ ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರ ಮನವಿಗಳಿಗೆ ಸಮ್ಮತ್ತಿಸುತ್ತಿರಲಿಲ್ಲ ಹಾಗೂ ಅಧಿಕಾರಗಳ ಆದೇಶವನ್ನು ನಿರ್ಲಕ್ಷಿಸಿದ್ದರು [ಹಾವೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ರೈತ]

Officials seize warehouses of two sugar factories that have pending dues

ಈ ಹಿನ್ನೆಲೆಯಲ್ಲಿ ಸರ್ಕಾರ ಆಜ್ಞೆಯನ್ನು ಗಣನೆಗೆ ತೆಗೆದುಕೊಂಡ ಕಬ್ಬು ಅಭಿವೃದ್ಧಿ ಆಯುಕ್ತ ಮತ್ತು ಸಕ್ಕರೆ ಜಿಲ್ಲಾ ಆಡಳಿತಗಾರರು ಮನಲಿ ಮತ್ತು ಕೆಪಿಆರ್ ಎಂಬ 2 ಸಕ್ಕರೆ ಗೋದಾಮಿನ ಮಾಲೀಕರ ಮೇಲೆ ತಮ್ಮ ಹಿಡಿತ ಸಾಧಿಸಿದ್ದಾರೆ.

ಇದನ್ನು ಪರಿಶೀಲಿಸಿದ ತಹಶೀಲ್ದಾರ್ ಬಿಲ್ ಪಾವತಿ ಮಾಡಬೇಕೆಂದು ಮಿಲ್ ಮಾಲೀಕರ ವಿರುದ್ಧ ಹಿಂದೆ ಹಲವು ಬಾರಿ ನೋಟೀಸ್ ಜಾರಿ ಮಾಡಿದ್ದರು. ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕಾರಣ ಜೂ. 18 ರಂದು ಕೊನೆಯ ನೋಟೀಸ್ ಕಳುಹಿಸಿದ್ದಾರೆ. ಇದಕ್ಕೆ ಸ್ಪಂದಿಸದ ಕಾರಣ ಅಧಿಕಾರಗಳು ಮಿಲ್ ಮೇಲೆ ದಾಳಿ ನಡೆಸಿದ್ದಾರೆ.

English summary
The sugar factories seized district administration officer on Friday. The factory owners are not paid amount like 163.56 crore to cane farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X