US Military: ಇರಾನ್ ಕಡೆಗೆ ನುಗ್ಗುತ್ತಿರುವ ಅಮೆರಿಕದ ಬೃಹತ್ ಸೇನೆ, ಟ್ರಂಪ್ ಹೇಳಿಕೆ ನಂತರ ತಲ್ಲಣ
ಅಮೆರಿಕ ಮತ್ತು ಇರಾನ್ ನಡುವೆ ಪರಿಸ್ಥಿತಿ ಇನ್ನೇನು ತಣ್ಣಗೆ ಆಗಿದೆ ಬಿಡು ಅನ್ನುವಷ್ಟರಲ್ಲೇ ಮತ್ತೆ ಇಬ್ಬರೂ ಕದನಕ್ಕೆ ಸಜ್ಜಾದಂತೆ ಕಾಣುತ್ತಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷರು ಇರಾನ್ ವಿರುದ್ಧ ಈಗ ಸಾಕಷ್ಟು ಆಕ್ರೋಶಗೊಂಡಿದ್ದು ಯಾವುದೇ ಸಮಯದಲ್ಲಿ ಎರಡೂ ದೇಶಗಳ ನಡುವೆ ಬೃಹತ್ ಯುದ್ಧ ಆರಂಭ ಆಗುವ ಲಕ್ಷಣ ಗೋಚರಿಸುತ್ತಿದೆ. ಒಂದು ಕಡೆ ಇರಾನ್ ಕೆಲವು ದಿನಗಳ ಹಿಂದಷ್ಟೇ ಆಂತರಿಕ ಪ್ರತಿಭಟನೆಗೆ ಸಿಲುಕಿ ಒದ್ದಾಡಿ ಈಗಿನ್ನೂ ಸುಧಾರಿಸಿಕೊಳ್ಳುತ್ತಿದೆ, ಆದರೆ ಇದೇ ಸಮಯದಲ್ಲಿ ಇಸ್ರೇಲ್ ವಿರುದ್ಧ ಹೇಳಿಕೆಯನ್ನೂ ನೀಡಿದೆ. ಹೀಗೆ ಇರಾನ್ ಹೇಳಿಕೆ ನೀಡಿದ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಕೆರಳಿದ್ದು, ದೊಡ್ಡ ಮಟ್ಟದ ಸೈನಿಕ ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ಮುಗಿಯದ ತಿಕ್ಕಾಟ ನಡೆಯುತ್ತಲೇ ಇದೆ, ಸಣ್ಣ ಸಣ್ಣ ವಿಚಾರಕ್ಕೆ ಕೂಡ ಯುದ್ಧ ಮಾಡುವ ಮಾತನ್ನು ಎರಡೂ ದೇಶಗಳು ಹೇಳುತ್ತಲೇ ಬರುತ್ತಿವೆ. ಪದೇ ಪದೇ ಇರಾನ್ ದೇಶದ ಸರ್ವಾಧಿಕಾರಿ ಖಮೇನಿ ಇಸ್ರೇಲ್ ವಿರುದ್ಧ ಕದನಕ್ಕೆ ಸಜ್ಜಾಗಿರುವ ಹೇಳಿಕೆ ನೀಡುತ್ತಿರುವುದು, ಅಮೆರಿಕ ಆಡಳಿತವನ್ನು ಕೆರಳಿಸಿದೆ. ಏಕೆಂದರೆ ಇಸ್ರೇಲ್ ಮತ್ತು ಅಮೆರಿಕ ನಡುವೆ ಅವಿನಾಭಾವ ಬಂಧ ಇದ್ದು, ಎರಡೂ ದೇಶಗಳು ಒಟ್ಟಿಗೆ ಸಾಗುತ್ತಿವೆ. ಇಂತಹ ವಾತಾವರಣದಲ್ಲಿ ದಿಢೀರ್ ಇಸ್ರೇಲ್ ಮೇಲೆ ದಾಳಿಗೆ ನಾವು ಸಿದ್ಧ ಎಂಬಂತೆ ಇರಾನ್ ಹೇಳಿಕೆ ನೀಡಿದ್ದೇ ಇದೀಗ ಕಿಚ್ಚು ಹೊತ್ತಿಸಿದೆ.

ಭೀಕರ ಕದನಕ್ಕೆ ಸಜ್ಜಾದ ಅಮೆರಿಕ?
ಹೌದು ಅಮೆರಿಕ ಸೇನೆ ಭಾರಿ ದೊಡ್ಡ ಪ್ರಮಾಣದಲ್ಲಿ ಇದೀಗ ಇರಾನ್ ಕಡೆಗೆ ಹೊರಟಿದೆ. ಡೊನಾಲ್ಡ್ ಟ್ರಂಪ್ ಅವರ ಆದೇಶದ ಹಿನ್ನೆಲೆಯಲ್ಲಿ ಇದೀಗ ಅಮೆರಿಕ ಸೇನೆಯ ಬೃಹತ್ ಸೇನಾ ಹಡಗು ಹಾಗೂ ಯುದ್ಧ ವಿಮಾನಗಳು, ಇಸ್ರೇಲ್ ರಕ್ಷಣೆಗೆ ಹಾಗೂ ಇರಾನ್‌ಗೆ ಎಚ್ಚರಿಕೆ ನೀಡಲು ಅತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೊಂದು ಘೋರ ಯುದ್ಧ ನಡೆಯುವ ಆತಂಕ ಆವರಿಸಿ ಭಯ ಮೂಡಿದೆ. ಅದರಲ್ಲೂ ಇರಾನ್ ಮೇಲೆ ಸೇನಾ ಕಾರ್ಯಾಚರಣೆ ಇಲ್ಲ ಎಂದಿದ್ದ ಅಮೆರಿಕದ ಅಧ್ಯಕ್ಷರು ಇದೀಗ ಮನಸ್ಸು ಬದಲಿಸಿ ಯುದ್ಧ ನಡೆಸಲು ನಿರ್ಧಾರ ಕೈಗೊಂಡಂತೆ ಕಾಣುತ್ತಿದೆ. ಹೀಗೆ ಎರಡೂ ದೇಶಗಳ ನಡುವಿನ ಬಿಗುವಿನ ವಾತಾವರಣ ಆತಂಕ ಸೃಷ್ಟಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಚರ್ಚೆಗೆ ವೇದಿಕೆ ಒದಗಿಸಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications