Delhi Election Results 2025: ಬೂತ್ ಮತಗಳ ವಿವರ, 17ಸಿ ಅಪ್ಲೋಡ್‌ಗೆ EC ನಕಾರ: ಅರವಿಂದ್ ಕೇಜ್ರಿವಾಲ್ ಗರಂ
ದೆಹಲಿ, ಜನವರಿ 08: ದೆಹಲಿ ರಾಜ್ಯ ವಿಧಾನಸಭಾ ಚುಣಾವಣೆ ಮುಗಿದು ಇಂದು ಶನಿವಾರ ಮತ ಎಣಿಕೆ ನಡೆಯುತ್ತಿದೆ. ಆದರೆ ಚುನಾವಣೆ ಆಯೋಗವು ಸಾಕಷ್ಟು ಭಾರಿ ವಿನಂತರಿಸಿದರೂ ಸಹಿತ ಪ್ರತಿ ವಿಧಾನಸಭೆಯಲ್ಲಿ ಪ್ರತಿ ಬೂತ್‌ಗೆ ಚಲಾವಣೆಯಾದ ಮತಗಳ ಸಂಖ್ಯೆಯನ್ನು ಮತ್ತು ಫಾರ್ಮ್ 17C ಅನ್ನು ಅಪ್‌ಲೋಡ್ ಮಾಡಲು ನಿರಾಕರಿಸಿದೆ. ಈ ಕುರಿತು ಮಾಜಿ ಸಿಎಂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಆಕ್ರೋಶ ಹೊರ ಹಾಕಿದ್ದಾರೆ.
ಇಂದು ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಇದಕ್ಕ ಮುನ್ನ ಚುನಾವಣೆ ಆಯೋಗವು ಎಎಪಿ ಮನವಿ ನಿರಾಕರಿಸಿದೆ. ಬೂತ್ ಮತಗಳ ಸಂಖ್ಯೆಯ ವಿವರ, ಫಾರ್ಮ್ 17C ಅನ್ನು ಅಪ್‌ಲೋಡ್ ಮಾಡಬೇಕು. ಆದರೆ ಮಾಡದೇ ನಮ್ಮ ಮನವಿಗೆ ಬೆಲೆ ಕೊಡುತ್ತಿಲ್ಲ ಎಂದು ಅವರು ದೂರಿದ್ದಾರೆ.

ಆದ್ದರಿಂದ ಮತಗಳ ಸಂಖ್ಯೆ, ಫಾರ್ಮ್ ಅನ್ನು ಆಮ್ ಆದ್ಮಿ ಪಕ್ಷವು ತನ್ನ ಈ http://transparentelections.in ವೆಬ್‌ಸೈಟ್ ಅನ್ನು ರಚಿಸಿದೆ. ಇಲ್ಲಿ ದೆಹಲಿಯ ಪ್ರತಿ ವಿಧಾನಸಭೆಯ ಎಲ್ಲಾ ಫಾರ್ಮ್ 17C ಅನ್ನು ಅಪ್‌ಲೋಡ್ ಮಾಡಲಿದೆ. ಈ ಫಾರ್ಮ್ ಪ್ರತಿ ಬೂತ್‌ನಲ್ಲಿ ಚಲಾವಣೆಯಾದ ಮತಗಳ ಎಲ್ಲಾ ವಿವರಗಳನ್ನು ಮತದಾರರು, ಸಾರ್ವಜನಿಕರು, ಅಭ್ಯರ್ಥಿಗಳು ನೋಡಬಹುದು ಎಂದು ಅವರು ತಿಳಿಸಿದ್ದಾರೆ.
ಇಂದು ಮತ ಎಣಿಕೆ ನಡೆಯುವ ಎಲ್ಲ ವಿಧಾನಸಭೆ ಮತ್ತು ಪ್ರತಿ ಬೂತ್ ಮತಗಳ ಡೇಟಾವನ್ನು ಕೋಷ್ಟಕ ರೂಪದಲ್ಲಿ ನೀಡುತ್ತೇವೆ. ಇದರಿಂದ ಪ್ರತಿಯೊಬ್ಬ ಮತದಾರರಿಗೆ ಆಯಾ ಬೂತ್‌ಗಳ ಮಾಹಿತಿ ಲಭ್ಯವಾಗುವಂತೆ ಮಾಡಲಿದ್ದೇವೆ. ಪಾರದರ್ಶಕತೆಯ ಹಿತದೃಷ್ಟಿಯಿಂದ ಚುನಾವಣಾ ಆಯೋಗ ಮಾಡಬೇಕಿದ್ದ ಕೆಲಸ ಮಾಡುತ್ತಿಲ್ಲ. ಹೀಗಾಗಿ ಆಯೋಗದ ನಿರಾಕರಣೆ ಬೆನ್ನಲ್ಲೆ ನಾವು ಈ ಕೆಲಸ ಮಾಡುತ್ತಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ಅವರು ತಿಳಿಸಿದ್ದಾರೆ.
ಹಿಂದಿನಿಂದಲೇ ಎಎಪಿ, ಕಾಂಗ್ರೆಸ್ ಕೇಂದ್ರ ಸರ್ಕಾರಿ ಅಧೀನದ ಸಂಸ್ಥೆಗಳ ವಿರುದ್ಧ ಕಿಡಿ ಕಾರುತ್ತಿವೆ. ದೆಹಲಿ ಚುನಾವಣೆ ವೇಳೆ ಮತ ಯಂತ್ರಗಳ ಕುರಿತು ಆರೋಪಗಳು, ಅನುಮಾನಗಳು ವ್ಯಕ್ತವಾಗಿದ್ದವು. ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೆ ಬೂತ್ ಮತಗಳ ವಿವರ ನೀಡಲು ನಿರಾಕರಿಸಿದೆ ಎಂಬ ಆರೋಪ ಚುನಾವಣೆ ಆಯೋಗದ ವಿರುದ್ಧ ಕೇಳಿ ಬಂದಿದೆ.
ಇಂದು ಶನಿವಾರ ಫೆಬ್ರವರಿ 8ರಂದು ದೆಹಲಿ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ. ಒಟ್ಟು 70 ಕ್ಷೇತ್ರಗಳಿಗೆ ಏಕಕಾಲದಲ್ಲಿ ಕಳೆದ ಬುಧವಾರ ಚುನಾವಣೆ ನಡೆದಿತ್ತು. 699 ಮಂದಿ ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳ ಪ್ರಕಾರ, ಬಹುತೇಕ ಸಂಸ್ಥೆಗಳು ದೆಹಲಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. ಈ ಬಗ್ಗೆ ಅಧಿಕೃತ ಮಾಹಿತಿ ಇಂದು ಗೊತ್ತಾಗಲಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications