ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಳಿವಾಡದ ಕುಖ್ಯಾತ ಸರಗಳ್ಳ ಪೊಲೀಸರ ಬಲೆಗೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 23 : ಸುಮಾರು ಎರಡೂವರೆ ತಿಂಗಳಿನಿಂದ ಮಹಾನಗರದಲ್ಲಿ 27ಕ್ಕೂ ಹೆಚ್ಚು ಸರಗಳ್ಳತನ ಮಾಡಿದ್ದ ಆರೋಪಿಯೋರ್ವನನ್ನು ಹಿಡಿಯಲು ಹುಬ್ಬಳ್ಳಿ ಪೊಲೀಸರು ಶನಿವಾರ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಸರಗಳ್ಳತನ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದ ವಿಶ್ವನಾಥ ಸೋಮಪ್ಪ ಕೋಳಿವಾಡ (26) ಬಂಧಿತ ಆರೋಪಿಯಾಗಿದ್ದಾನೆ. [ಚಿತ್ರಗಳು : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲುಗಳ ಡಿಕ್ಕಿ]

Habitual chain snatcher arrested in Hubballi

ಈತನಿಂದ 20 ಲಕ್ಷ ರೂ. ಮೌಲ್ಯದ 750 ಗ್ರಾಂ ಬಂಗಾರದ ಆಭರಣ ಮತ್ತು 1.50 ಲಕ್ಷ ರು ಮೌಲ್ಯದ ಹೀರೋ ಕಂಪನಿಯ ಕೆಂಪು ಬಣ್ಣದ ಹಂಕ್ ಬೈಕ್, ಕಪ್ಪು ಬಣ್ಣದ ರಾಯಲ್ ಎನ್‌ಫೀಲ್ಡ್ ಹಾಗೂ ಹೋಂಡಾ ಕಂಪನಿಯ ಕಪ್ಪು ಬಣ್ಣದ ಸ್ಟನ್ನರ್ ಬೈಕ್ ವಶಪಡಿಸಿಕೊಂಡಿದ್ದಾರೆ.

Habitual chain snatcher arrested in Hubballi

ಆರೋಪಿ ವಿಶ್ವನಾಥನಿಂದ ಕದ್ದ ಬಂಗಾರ ಖರೀದಿಸುತ್ತಿದ್ದ ನಗರದ ವ್ಯಾಪಾರಸ್ಥರಾದ ವೆಂಕಟೇಶ ನಾರಾಯಣಸಾ ಕಬಾಡೆ, ಹನುಮಂತಸಾ ವಿಠಲಸಾ ಮೆಹರವಾಡೆ ಎಂಬುವವರನ್ನು ಕೂಡ ಬಂಧಿಸಲಾಗಿದೆ.

Habitual chain snatcher arrested in Hubballi

ಪೊಲೀಸರ ಬಲೆಗೆ ಬಿದ್ದ ಕಳ್ಳ : ಖತರ್ನಾಕ್ ಸರಗಳ್ಳತನ ಮಾಡುತ್ತಿದ್ದ ವಿಶ್ವನಾಥ ಕೇವಲ ಸಂಜೆಯ ಹೊತ್ತಷ್ಟೇ ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಸರಗಳ್ಳತನ ಮಾಡುತ್ತಿದ್ದ. ಜಾಣತನದಿಂದ ಸಿಸಿ ಟಿವಿ ಕ್ಯಾಮರಾ ಇರದ ಪ್ರದೇಶದಲ್ಲಿ ಕಳ್ಳತನ ಮಾಡುತ್ತಿದ್ದ.

Habitual chain snatcher arrested in Hubballi

ಪೊಲೀಸರ ಭಾರೀ ತಲೆನೋವಾಗಿದ್ದ ಸರಗಳ್ಳತನ ತಡೆಯಲು ಹುಬ್ಬಳ್ಳಿ ಪೊಲೀಸರು ತಂಡವನ್ನು ರಚಿಸಿ ಆತನನ್ನು ಹಿಡಿಯಲು ಹೊಂಚು ಹಾಕಿದ್ದರು. ಈ ಹಿಂದೆ ಸರಗಳ್ಳತನ ಮಾಡುತ್ತಿದ್ದ ರೀತಿಯಲ್ಲಿ ಇತ್ತೀಚಿನ ಸರಗಳ್ಳತನ ಪ್ರಕರಣಗಳು ಹೊಂದಾಣಿಕೆಯಾಗುತ್ತಿದ್ದವು. ಇದರಿಂದ ಸಂಶಯಗೊಂಡ ಪೊಲೀಸರು ವಿಶ್ವನಾಥನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ನಂತರ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ.
English summary
A habitual chain snatcher, who was wanted in as many as 27 cases, has been nabbed by Hubballi police on Saturday. Rs 20 lakh worth golden jewellery has been confiscated from the accused Vishwanath Somappa Koliwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X