ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2030ರ ಹೊತ್ತಿಗೆ 7.25 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಲಿದೆ ಜಿಡಿಪಿ

2030ರ ವೇಳೆಗೆ ಭಾರತದ ಜಿಡಿಪಿ 7.25 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ. ಈಗಿರುವ ಜಿಡಿಪಿ 2.11 ಟ್ರಿಲಿಯನ್ (2015-16) ಅಮೆರಿಕನ್ ಡಾಲರ್ ಗಾತ್ರಕ್ಕಿಂತ ಮೂರು ಪಟ್ಟು ಹೆಚ್ಚಾಗುತ್ತದೆ ಎಂಬ ಅಂದಾಜಿದೆ

|
Google Oneindia Kannada News

ನವದೆಹಲಿ, ಏಪ್ರಿಲ್ 24: ಆರ್ಥಿಕವಾಗಿ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಎಂಬ ಅಗ್ಗಳಿಕೆಯಿರುವ ಭಾರತದ ಜಿಡಿಪಿ ಗಾತ್ರವು 2.11 ಟ್ರಿಲಿಯನ್ (2015-16) ಅಮೆರಿಕನ್ ಡಾಲರ್ ನಿಂದ 2030ರ ವೇಳೆಗೆ ಮೂರು ಪಟ್ಟು ಹೆಚ್ಚಾಗಿ 7.25 ಟ್ರಿಲಿಯನ್ ಅಮೆರಿಕನ್ ಡಾಲರ್ ಆಗಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ.

ಶೇ 8ರ ಸರಾಸರಿಯಲ್ಲಿ ಮುಂದಿನ ಹದಿನೈದು ವರ್ಷಗಳ ಕಾಲ ಅಭಿವೃದ್ಧಿ ದರ ಸಾಧಿಸಿದರೆ 2030ರ ವೇಳೆಗೆ ಭಾರತದ ಜಿಡಿಪಿ 469 ಲಕ್ಷ ಕೋಟಿ ರುಪಾಯಿ ಆಗುತ್ತದೆ (ಅಂದರೆ 7.25 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟು) ಎಂದು ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯ ಹೇಳಿದ್ದಾರೆ.[ಆರ್ಥಿಕ ಸಮೀಕ್ಷೆ: ವ್ಯಾಪಾರ-ಜಿಡಿಪಿ ಪ್ರಮಾಣ, ಚೀನಾವನ್ನು ಹಿಂದಿಕ್ಕಿದ ಭಾರತ]

India's economy poised to hit $7.25 trillion by 2030: NITI Aayog

ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿ ಜತೆಗಿನ ಭಾನುವಾರದ ಸಭೆಯ ನಂತರ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ. ಪೂರ್ಣವಾದ ಸಾಕ್ಷರತೆ, ರಸ್ತೆ-ರೈಲು ಸಂಪರ್ಕ ಜಾಲದ ಅಭಿವೃದ್ಧಿಯ ಗುರಿಯನ್ನು ಹೊಂದಲಾಗಿದೆ. ಜುಲೈ 1ರಿಂದ ಜಿಎಸ್ ಟಿ ಜಾರಿಗೆ ಬರಲಿದ್ದು, ಇದರಿಂದ ದೇಶದ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಿ ಎರಡು ಸಲಹೆ ನೀಡಿದ್ದಾರೆ. ಒಂದು ಏಕಕಾಲಕ್ಕೆ ಚುನಾವಣೆ ನಡೆಸುವುದು. ಮತ್ತೊಂದು ಆರ್ಥಿಕ ವರ್ಷ. ನಮ್ಮದು ತುಂಬ ದೊಡ್ಡ ದೇಶ. ರಾಜ್ಯಗಳು ಕೂಡ ಬಹಳ ಮುಖ್ಯವಾಗುತ್ತವೆ. ರಾಜ್ಯದಿಂದಲೂ ಅಗತ್ಯ ಕೊಡುಗೆ ನೀಡಬೇಕು ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಂಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.[ಕೇಂದ್ರ ಸರಕಾರಕ್ಕೆ 2017 ಅಳಿವು-ಉಳಿವಿನ ವರ್ಷ, ಏಕೆ ಗೊತ್ತಾ?]

India's economy poised to hit $7.25 trillion by 2030: NITI Aayog

ಆರ್ಥಿಕ ವರ್ಷವನ್ನು ಏಪ್ರಿಲ್ ನಿಂದ ಮಾರ್ಚ್ ಬದಲಿಗೆ ಜನವರಿಯಿಂದ ಡಿಸೆಂಬರ್ ಗೆ ಮಾಡಲು ಸರಕಾರ ನಿರ್ಧರಿಸಿದ್ದು, ಅದಕ್ಕಾಗಿ ನೀತಿ ಆಯೋಗ ಬೆಂಬಲ ಸೂಚಿಸಿದೆ. ಅದಕ್ಕಾಗಿ ಸಮಿತಿಯೊಂದನ್ನು ರಚಿಸಿದ್ದು, ಮುಖ್ಯಸ್ಥರಾಗಿ ಮುಖ್ಯ ಆರ್ಥಿಕ ಸಲಹೆಗಾರ ಶಂಕರ್ ಆಚಾರ್ಯ ಇದ್ದಾರೆ.

ಆದರೆ, ಈ ರೀತಿ ಆರ್ಥಿಕ ವರ್ಷದ ಅವಧಿ ಬದಲಾದರೆ ಇತರೆ ಸಮಸ್ಯೆಗಳಾಗುತ್ತವೆ ಎಂದು ಅಸೋಚಾಂನಂಥ ಸಂಸ್ಥೆಗಳಿಂದ ಕಳವಳ ವ್ಯಕ್ತವಾಗಿದೆ.

English summary
Currently the fastest-growing economy of the world, India's GDP size is poised to triple from the $2.11 trillion level (2015-16) to $7.25 trillion by 2030. The optimism stems from a presumption of high growth levels India is expected to experience in the coming years, according to the government's think-tank, NITI Aayog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X