ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ : ನರಭಕ್ಷಕ ಹುಲಿ ಇನ್ನೂ ಸಿಕ್ಕಿಲ್ಲ

|
Google Oneindia Kannada News

ಬೆಳಗಾವಿ, ಡಿ. 26 : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದಲ್ಲಿ ಮಹಿಳೆಯನ್ನು ಕೊಂದಿದ್ದ ಹುಲಿಯನ್ನು ಹಿಡಯುವ ಕಾರ್ಯಾಚರಣೆ ಎರಡನೇ ದಿನವೂ ಮುಂದುವರೆದಿದೆ. ಬೆಂಗಳೂರಿನಿಂದ ಐವರು ಶಾರ್ಪ್‌ ಶೂಟರ್‌ಗಳು ಆಗಮಿಸಿದ್ದು, ಹುಲಿಯನ್ನು ಗುಂಡಿಕ್ಕಿ ಕೊಳ್ಳಲು ಸಿದ್ಧವಾಗಿದ್ದಾರೆ.

ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದ ಬಳಿ ಅಂಜನಾ (23) ಎಂಬ ಮಹಿಳೆಯನ್ನು ಹುಲಿ ಕೊಂದು ಹಾಕಿತ್ತು. ನಂತರ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು, ಹುಲಿಯನ್ನು ಹಿಡಿಯುವಂತೆ ಒತ್ತಾಯಿಸಿದ್ದರು.

 tiger

ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಹುಲಿ ಕಾಣಿಸಿಕೊಂಡಿರಲಿಲ್ಲ. ಶುಕ್ರವಾರ ಬೆಳಗ್ಗೆ ಒಲಿಮನಿ ಬಳಿ ಹುಲಿ ಮತ್ತೆ ಪ್ರತ್ರಕ್ಷವಾಗಿದ್ದು, ಅದನ್ನು ಹಿಡಯುವ ಕಾರ್ಯಾಚರಣೆ ನಡೆಯುತ್ತಿದೆ. ಬೆಂಗಳೂರಿನಿಂದ ಬಂದಿರುವ ಐವರು ಶಾರ್ಪ್ ಶೂಟರ್ಸ್ ಹುಲಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. [ಚಿಕ್ಕಮಗಳೂರು ಹುಲಿಗೆ ಬೆಳಗಾವಿಯಲ್ಲೂ ಮಹಿಳೆ ಬಲಿ]

ಹುಲಿಯನ್ನು ಕೊಲ್ಲಲು ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪಿಗೆ ಪಡೆದಿದ್ದಾರೆ. ಆದ್ದರಿಂದ ಜೀವಂತವಾಗಿ ಹಿಡಿಯಲು ಸಾಧ್ಯವಾಗದಿದ್ದರೆ, ಗುಂಡು ಹಾರಿಸಿ ಕೊಂದು ಹಾಕಲು ನಿರ್ಧರಿಸಲಾಗಿದೆ. ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ, ಖಾನಾಪುರ ಶಾಸಕ ಅರವಿಂದ ಪಾಟೀಲ ಮುಂತಾದವು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. [ಮೈಸೂರಿನಲ್ಲಿ ಸೆರೆಸಿಕ್ಕಿ ನರಭಕ್ಷಕ ಹುಲಿ]

English summary
Shoot-at-sight order for Belagavi tiger that killed a 23-year-old woman in Jamboti village of Belagavi district Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X