ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ, ವಿಜಯಪುರದಲ್ಲಿ ಪೆಟ್ರೋಲ್‌, ಡೀಸೆಲ್‌ಗೆ ಬರ

|
Google Oneindia Kannada News

ಬೆಳಗಾವಿ, ಮೇ 4 : ಬಂಕ್‌ಗಳ ಮುಂದೆ ದೊಡ್ಡ ಸಾಲು, ವಾಹನ ಹೊರತೆಗೆಯಲು ಜನರ ಆತಂಕ, ವಾಹನ ಬಿಟ್ಟು ಬಸ್ಸು ಏರುತ್ತಿರುವ ಜನರು ಇದು ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಯಲ್ಲಿನ ಜನರ ಪರಿಸ್ಥಿತಿ. ಎರಡೂ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಬರ ಉಂಟಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.

ವಿಜಯಪುರದಲ್ಲಿ ಇಂಡಿಯನ್, ಭಾರತ್, ಎಚ್‍ಪಿ ಕಂಪನಿ ಸೇರಿದಂತೆ ಹಲವು ಪೆಟ್ರೋಲ್ ಬಂಕ್‌ಗಳಿವೆ. ಆದರೆ, 2 ಬಂಕ್‍ಗಳಲ್ಲಿ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದೆ. ಉಳಿದ ಎಲ್ಲಾ ಬಂಕ್‍ಗಳಲ್ಲಿ ಪೆಟ್ರೋಲ್ ಇಲ್ಲ ಎಂಬ ಬೋರ್ಡ್ ಹಾಕಲಾಗಿದೆ. [ಪೆಟ್ರೋಲ್, ಡೀಸೆಲ್ ದರ ಎಷ್ಟು ಗೊತ್ತಾ?]

petrol

ಬೆಳಗಾವಿ ನಗರದಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ಪೆಟ್ರೋಲ್ ಸಿಗದೆ ಜನರು ಪರದಾಡುತ್ತಿದ್ದಾರೆ. ಗಂಟೆಗಟ್ಟಲೇ ಸರದಿಯಲ್ಲಿ ಕಾದರೆ ಪೆಟ್ರೋಲ್ ಲಭ್ಯವಾಗುತ್ತಿದೆ. ಅದು ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರ. [ಸಂಚಾರಿ ನಿಯಮ ಪಾಲಿಸಿದರೆ ಪೆಟ್ರೋಲ್ ಬಹುಮಾನ..!]

ಬೇರೆ-ಬೇರೆ ಕಾರಣಗಳಿಂದ ವಿಜಯಪುರ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಹಲವು ಜಿಲ್ಲೆಗಳಿಗೆ ಪೆಟ್ರೋಲ್-ಡೀಸೆಲ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇನ್ನು ಒಂದು ವಾರದವರೆಗೆ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದಾರೆ.

ಪೆಟ್ರೋಲ್ ಕೊರತೆಗೆ ಕಾರಣವೇನು? : ಮಂಗಳೂರಿನ ಎಂಆರ್‌ಪಿಎಲ್‌ ಘಟಕವನ್ನು ಉನ್ನತೀಕರಿಸುವ ಕಾರ್ಯ ನಡೆಯುತ್ತಿದೆ. ಧಾರವಾಡದ ನವಲೂರು ಸಮೀಪದ ಮತ್ತು ಬೆಳಗಾವಿ ಬಳಿಯ ಘಟಕಗಳಲ್ಲಿ ವಾರ್ಷಿಕ ದುರಸ್ತಿ ಕಾರ್ಯ ನಡೆಯುತ್ತಿದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗಿದೆ.

English summary
Belagavi and Vijayapur district facing shortage of petrol and diesel for last few days. Many petrol bunks have been closed due to shortage of petrol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X