ಬೆಂಗಳೂರಿನಲ್ಲಿ ಯುವಕನ ನಾಲಗೆ ಕತ್ತರಿಸಿದ ದುಷ್ಕರ್ಮಿಗಳು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 18: ಒಡಿಶಾ ಮೂಲದ ಯುವಕನೊಬ್ಬನನ್ನು ಮನಸೋ ಇಚ್ಛೆ ಥಳಿಸಿ, ನಾಲಗೆ ಕತ್ತರಿಸಿದ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಒಡಿಶಾ ಮೂಲದ ಬಿಜು ನಾಯಕ್ (20) ಎಂಬಾತನ ನಾಲಗೆಯನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಆತನ ಮನೆಯಿಂದ ಕರೆದುಕೊಂಡು ಬಂದು ಮೊದಲಿಗೆ ಹಲ್ಲೆ ನಡೆಸಿ, ಆ ನಂತರ ಈ ದುಷ್ಕೃತ್ಯ ಎಸಗಿದ್ದಾರೆ. ಆ ಯುವಕನಿಗೆ ಸ್ಥಳೀಯವಾಗಿ ಪರಿಚಯವಿಲ್ಲದ ಕಾರಣ ರಾತ್ರಿಯಿಡೀ ನರಳಾಡಿದ್ದಾನೆ.[ಮೈಸೂರಿನಲ್ಲಿ ಅಜ್ಜಿ-ತಾತನ ಕೊಲ್ಲಲು ಮನೆಗೆ ಬೆಂಕಿಯಿಟ್ಟ ಮೊಮ್ಮಗಳು!]

Crime

ಆ ಮೇಲೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಸಿಪಿ ನಾರಾಯಣ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗಾಗಿ ಸೂಚನೆ ನೀಡಿದ್ದಾರೆ. ಈ ಘಟನೆ ಬಗ್ಗೆ ತನಿಖೆ ಮುಂದುವರಿದಿದ್ದು, ಹೀಗೆ ಮಾಡುವುದಕ್ಕೆ ಕಾರಣ ಏನು ಮತ್ತು ಏಕಾಗಿ ಮಾಡಿದರು ಎಂಬುದು ಸದ್ಯದ ಪ್ರಶ್ನೆಯಾಗಿದೆ. ತಪ್ಪಿತಸ್ಥರ ಶೀಘ್ರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

English summary
Biju Nayak, 20 year young man's tongue cut out the perpetrators at Immadihalli, Whitefield police station limit on Friday night.
Please Wait while comments are loading...