ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಬಂದ್ರೆ, ಅಂಬರೀಶ್ ಗೆ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂನ್ 21: ನಟ ಕಮ್ ರಾಜಕಾರಣಿ ಅಂಬರೀಶ್ ಅವರಿಂದ ವಸತಿ ಸಚಿವ ಸ್ಥಾನವನ್ನು ಕಿತ್ತುಕೊಂಡ ಬಳಿಕ, ಅಂಬರೀಶ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಎಲ್ಲರಿಗೂ ತಿಳಿದಿರಬಹುದು.

ಸಿದ್ದರಾಮಯ್ಯ ಅವರಿಂದ ಕಡೆಗಣಿಸಲ್ಪಟ್ಟ ಪ್ರಮುಖ ನಾಯಕರತ್ತ ಬಿಜೆಪಿ ಹಾಗೂ ಜೆಡಿಎಸ್ ಕಣ್ಣು ಹಾಕಿದೆ. ಅಂಬರೀಶ್ ಅವರು ಒಂದು ವೇಳೆ ಪಕ್ಷಕ್ಕೆ ಬಂದರೆ ಅವರಿಗೆ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ.[ಕೈ ವಿರುದ್ಧ ಹಳೇ ಮೈಸೂರಿನಲ್ಲಿ ಬಂಡಾಯದ ಕಹಳೆ]

ಬೆಂಗಳೂರಿನ ಕ್ವೀನ್ಸ್ ವೃತ್ತದ ಬಳಿ ಇರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಕಚೇರಿ ಇರಬಹುದು ಅಥವಾ ಮಂಡ್ಯದ ಸಂಜಯ್ ವೃತ್ತ ಇರಬಹುದು ಅಂಬರೀಶ್ ಅವರ ಅಭಿಮಾನಿಗಳ ಆಕ್ರೋಶ ಮುಗಿಲು ಮುಟ್ಟಿದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಂಡ್ಯದಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಬೇಕಾಗುತ್ತದೆ. [ರಮ್ಯಾಳನ್ನು ದೂಷಿಸಬೇಡಿ ಎಂದ ಅಂಬರೀಶ್]

ಬಿಜೆಪಿ ಹಾಗೂ ಜೆಡಿಎಸ್ ಈಗಾಗಲೇ ಒಂದು ಸುತ್ತು ಅಂಬರೀಶ್ ಅವರ ಮನೆ ಸುತ್ತಾ ಪ್ರದಕ್ಷಿಣೆ ಹಾಕಿವೆ. ಅಂಬರೀಶ್ ಹಾಗೂ ಶ್ರೀನಿವಾಸ್ ಪ್ರಸಾದ್ ರನ್ನು ಸೆಳೆಯಲು ದೊಡ್ಡ ಮಟ್ಟದ ಪ್ರಯತ್ನಗಳು ನಡೆದಿವೆ. ಇಬ್ಬರು ಕೂಡಾ ಜನಪ್ರಿಯ ನಾಯಕರಾಗಿದ್ದು, ಪಕ್ಷಾತೀತ ಬೆಂಬಲ ಹೊಂದಿರುವುದು ವಿಶೇಷ. ಜೊತೆಗೆ ಇಬ್ಬರು ಕೂಡಾ ಮೂಲ ಕಾಂಗ್ರೆಸ್ಸಿಗರಲ್ಲ.

ಅಂಬರೀಶ್ -ಮುಂದಿನ ನಡೆ ಬಗ್ಗೆ ಏನು ಹೇಳಿಲ್ಲ

ಅಂಬರೀಶ್ -ಮುಂದಿನ ನಡೆ ಬಗ್ಗೆ ಏನು ಹೇಳಿಲ್ಲ

ಆದರೆ, ಇಬ್ಬರು ಕೂಡಾ ಕಾಂಗ್ರೆಸ್ ತೊರೆಯುವ ಮಾತನಾಡಿಲ್ಲ, ಅಂಬರೀಶ್ ಅವರು ಸದ್ಯಕ್ಕೆ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವ ಮಾತ್ರ ಉಳಿಸಿಕೊಂಡಿದ್ದರೆ, ಶ್ರೀನಿವಾಸ ಪ್ರಸಾದ್ ಅವರು ನಂಜನಗೂಡಿನ ಶಾಸಕರಾಗಿ ಉಳಿದಿದ್ದಾರೆ. ಅಂಬರೀಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸ್ವೀಕಾರವಾದರೆ, ಮರು ಚುನಾವಣೆ ನಡೆಸಬೇಕಾಗುತ್ತದೆ, ಇದಕ್ಕೆ ಆರು ತಿಂಗಳ ಅವಕಾಶವಿರುತ್ತದೆ.

ಅಂಬರೀಶ್ ರಿಂದ ಒಕ್ಕಲಿಗ ಮತ ಸೆಳೆಯಲು ಯತ್ನ

ಅಂಬರೀಶ್ ರಿಂದ ಒಕ್ಕಲಿಗ ಮತ ಸೆಳೆಯಲು ಯತ್ನ

ಎಂಎಚ್ ಅಂಬರೀಶ್ ಅವರು ಒಕ್ಕಲಿಗ ಸಮುದಾಯದ ನಾಯಕರಾಗಿದ್ದು, ಅವರ ಮಾತಿಗೆ ಬೆಲೆ ಇದೆ. ಹೀಗಾಗಿ ಅವರನ್ನು ಸೆಳೆದರೆ ಮಂಡ್ಯ, ಮೈಸೂರು ಪ್ರದೇಶದ ಒಕ್ಕಲಿಗರ ಮತಗಳು ಸುಲಭವಾಗಿ ದಕ್ಕುವುದು ಎಂಬ ಆಲೋಚನೆಯೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಂದಿನ ಹೆಜ್ಜೆ ಇಟ್ಟಿದ್ದಾರೆ.

ಹಳೆ ಮೈಸೂರು, ಮಂಡ್ಯ ಕ್ಷೇತ್ರಗಳ ಮೇಲೆ ವಿಪಕ್ಷಗಳ ಕಣ್ಣು

ಹಳೆ ಮೈಸೂರು, ಮಂಡ್ಯ ಕ್ಷೇತ್ರಗಳ ಮೇಲೆ ವಿಪಕ್ಷಗಳ ಕಣ್ಣು

ಲಿಂಗಾಯತ ಮತಗಳು, ನಾಯಕ ಜನಾಂಗದ ಮತಗಳ ಮೇಲೆ ನಂಬಿಕೆ ಉಳಿಸಿಕೊಂಡಿರುವ ಬಿಜೆಪಿ, ಜೆಡಿಎಸ್ ನ ಭದ್ರಕೋಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಸ್ಥಾಪಿಸಲು ಈ ಕಾರ್ಯತಂತ್ರ ಅನಿವಾರ್ಯವಾಗಿದೆ.

ಜೆಡಿಎಸ್ ತನ್ನ ಭದ್ರಕೋಟೆ ಒಡೆಯಲು ಬಿಡುವುದೇ?

ಜೆಡಿಎಸ್ ತನ್ನ ಭದ್ರಕೋಟೆ ಒಡೆಯಲು ಬಿಡುವುದೇ?

ಇನ್ನೊಂದೆಡೆ ಜೆಡಿಎಸ್ ಕೂಡಾ ಪ್ರತಿತಂತ್ರ ಹೂಡುತ್ತಿದ್ದು, ಜೆಡಿಎಸ್ ಗೆ ಮರಳುವಂತೆ ಅಂಬರೀಶ್ ಗೆ ಆಹ್ವಾನ ನೀಡಿದೆ. ಎಲ್ಲವೂ ಫೋನ್ ಮೂಲಕ ಮಾತುಕತೆ ನಡೆದಿದ್ದರೂ ಮುಂದಿನ ದಿನಗಳಲ್ಲಿ ಅಧಿಕೃತ ಆಹ್ವಾನ ಅಂಬರೀಶ್ ಅವರನ್ನು ಹುಡುಕಿಕೊಂಡು ಬರುವ ನಿರೀಕ್ಷೆಯಿದೆ. ಹಳೆ ಮೈಸೂರಿನಿಂದ ಬೆಂಗಳೂರು ತನಕ ಜೆಡಿಎಸ್ ಈಗಾಗಲೇ ತಕ್ಕಮಟ್ಟಿನ ಹೊಡೆತ ಅನುಭವಿಸಿದೆ. ಚೆಲುವರಾಯಸ್ವಾಮಿ ಬಂಡಾಯದ ನಂತರ ಮಂಡ್ಯದಲ್ಲಿ ಸಮಾವೇಶ ನಡೆಸಲು ಮುಂದಾಗಿದೆ.

ಸಿದ್ದರಾಮಯ್ಯ ಅವರ ನಡೆಗೆ ತಂತ್ರ ರೂಪಿಸಬೇಕಿದೆ

ಸಿದ್ದರಾಮಯ್ಯ ಅವರ ನಡೆಗೆ ತಂತ್ರ ರೂಪಿಸಬೇಕಿದೆ

ಸಚಿವ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತ ನಾಯಕರಿಗೆ ಪ್ರಾಶಸ್ತ್ಯ ನೀಡುವ ಮೂಲಕ ಸಿದ್ದರಾಮಯ್ಯ ಅವರು ಈಗಾಗಲೆ ಪ್ರತಿಪಕ್ಷಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲು ಒಕ್ಕಲಿಗರ ನಾಯಕ ಅಂಬರೀಶ್ ಹಾಗೂ ದಲಿತ ಸಮುದಾಯದ ಶ್ರೀನಿವಾಸ್ ಪ್ರಸಾದ್ ರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ಸಿದ್ದರಾಮಯ್ಯ ಅವರ ನಡೆಗೆ ಈಗ ತಕ್ಕ ಉತ್ತರ ನೀಡಲು ಬಿಜೆಪಿ ಹಾಗೂ ಜೆಡಿಎಸ್ ಮುಂದಾಗಬೇಕ್ದಿಎ.

English summary
Will Rebel Star Ambareesh be BJP's ticket to the Vokkaliga vote in Karnataka. This crisis in the Karnataka Congress has raised some hope for both the BJP and the JD(S) who are burning the midnight oil to rope in the likes of Srinivas Prasad and Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X