ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋಟು ರದ್ದು: ಚಿಲ್ಲರೆ ವ್ಯಾಪಾರ ಏನಾಗಿದೆ?

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 22: ನೋಟು ಬದಲಾವಣೆಯಿಂದ ರಾಜ್ಯದಲ್ಲಿ ಎಲ್ಲ ವ್ಯಾಪಾರಗಳೂ ತಗ್ಗವೆ ಹಾಗೆಯೇ ಚಿಲ್ಲರೆ ವ್ಯಾಪಾರಿಗಳ ಗತಿ ಚಿಂತಾಜನಕವಾಗಿದೆ.

ಅಣ್ಣಾ.. ಒಂದು ಬೀಡ ಕೋಡು ಎಂದು 2000 ನೋಟನ್ನು ನೀಡಿದರೆ ಅವನ ಸ್ಥಿತಿ ಹೇಗಾಗಬೇಡ, ಚಿಲ್ಲರೆ ಕೊಡಿ ಇಲ್ಲವೆ ಮನೆಗೆ ಹೋಗಿ ಎಂದು ಸಾರಾಸಗಟಾಗಿ ಹೇಳಿಬಿಡುತ್ತಾರೆ. ಚಿಲ್ಲರೆಯ ಕಾರಣದಿಂದಾಗಿಯೇ ವ್ಯಾಪಾರ ತಗ್ಗಿದೆ.

ಸಿಗರೇಟು, ಬನ್, ಟೀ , ಪಾನ್ ಪರಾಕ್ ಹೀಗೆ ಸಣ್ಣ ಪುಟ್ಟ ವಸ್ತ್ರಗಳನ್ನು ಇಷ್ಟುಕೊಂಡು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ನ. 8ರಿಂದ ಸರಿಯಾಗಿ ವ್ಯಾಪಾರವನ್ನೇ ಮಾಡಿಲ್ಲ. ದಿನಕ್ಕೆ ಸಾವಿರಾರು ರುಪಾಯಿಗಳನ್ನು ನೋಡುತ್ತಿದ್ದ ಚಿಲ್ಲರೆ ವ್ಯಾಪಾರಿಗಳೂ ಕೂಡ ನೂರು ಇನ್ನೂರು ರುಪಾಯಿಗೆ ಇಳಿದಿದ್ದಾರೆ.[ನೋಟು ನಿಷೇಧದಿಂದ ಶೇ.70ರಷ್ಟು ಇಳಿಮುಖವಾದ ಅಪರಾಧಗಳು]

small traders business down in bengaluru

ವ್ಯಾಪಾರವಾಗದವರು ಬೇರೆ ಯಾವುದಾದರೂ ವ್ಯಾಪಾರ ಶುರುಮಾಡಬೇಕು ಹಾಕಿದ ಬಂಡವಾಳ ಕೈಗಿಟ್ಟುತ್ತಿಲ್ಲ ಎಂದು ಬೇರೆ ಯೋಚನೆಗೆ ಮುಂದಾಗಿದ್ದಾರೆ.

ಸುಮಾರಾಗಿ ಸಂಜೆ ಹೊತ್ತಿಗೆ ಚಿಲ್ಲರೆ ಅಂಗಡಿಯಲ್ಲಿ ರು 400-500 ನೋಡುತ್ತಿದ್ದ ಆರ್.ಟಿ.ನಗರದ ರಾಜಣ್ಣ ಸಂಜೆಯಾದರೂ ಸರಿಯಾಗಿ ರು 200 ವ್ಯಾಪಾರ ಆಗುತ್ತಿಲ್ಲ ಎನ್ನುತ್ತಾರೆ. ಕೊಟ್ಟರೆ ರು 500 ಹಳೇ ನೋಟನ್ನೇ ಕೊಡುತ್ತಾರೆ ಚಿಲ್ಲರೆ ಕೇಳುತ್ತಾರೆ. ಕೆಲವು ದಿನ ಕ್ಯೂನಲ್ಲಿ ನಿಂತು ಚಿಲ್ಲರೆ ತರುವುದು ಹಳೇ ನೋಟುಗಳನ್ನು ಪಡೆಯುವುದು ಮಾಡುತ್ತಿದ್ದೆ ಆದರೆ ಎಷ್ಟುದಿನ ಅಂತ ಹಾಗೆ ಮಾಡುವುದು ಎನ್ನುತ್ತಾರೆ ರಾಜಣ್ಣ.

ಇದು ಬೆಂಗಳೂರಿನ ಒಂದು ಕಥೆಯಲ್ಲ ರಾಜ್ಯದ ಎಲ್ಲ ಜಿಲ್ಲೆ ಎಲ್ಲ ನಗರಗಳ ಚಿಲ್ಲರೆ ವ್ಯಾಪಾರಿಗಳು ಒಂದಿಲ್ಲೊಂದು ರೀತಿ ಚಿಲ್ಲರೆ, ಹೊಸನೋಟು, ಹಳೇ ನೋಟಿನ ಜಾಲದಲ್ಲಿ ಸಿಲುಕಿ ವ್ಯಾಪಾರನ್ನು ಕಳೆದುಕೊಳ್ಳುತ್ತಿದ್ದಾರೆ.

English summary
What deadly-looking ads couldn't do, demonstration seems to have achieved.According to paan-walas and other traders in the city , business down to earth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X