ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರನ ಬಂಧನ: ವೋಡಾಫೋನ್ ವಿರುದ್ಧ ಎಫ್ ಐಆರ್

By Mahesh
|
Google Oneindia Kannada News

ಬೆಂಗಳೂರು, ಜ.28: ನಗರದಲ್ಲಿ ತಲೆ ಮರೆಸಿಕೊಂಡಿದ್ದ ಬೋಡೋ ಉಗ್ರ ಸಂಜುಗೆ ಸಿಮ್ ಕಾರ್ಡ್ ಮಾರಾಟ ಮಾಡಿದ ತಪ್ಪಿಗೆ ವೋಡಾಫೋನ್ ಸಂಸ್ಥೆ ಪರಿತಪಿಸುವಂತಾಗಿದೆ. ವೋಡಾಫೋನ್ ಸಂಸ್ಥೆ ವಿರುದ್ಧ ಬೆಂಗಳೂರು ಕ್ರೈಂ ಬ್ರ್ಯಾಂಚ್ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ದಾಖಲಿಸಿಕೊಂಡಿದೆ.

ರಾಜಧಾನಿಯಲ್ಲಿ ತಲೆಮರೆಸಿಕೊಂಡಿದ್ದ ಬೋಡೋ ಉಗ್ರ ಸಂಜು ಅಕ್ರಮವಾಗಿ ಸಿಮ್‌ ಕಾರ್ಡ್‌ ಮಾರಾಟ ಮಾಡಿದ ಆರೋಪದ ಮೇಲೆ ಕೆಲವು ಸಿಮ್ ಮಾರಾಟಗಾರರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಬೆಂಗಳೂರಿನಲ್ಲಿ ಹಬ್ಬುತ್ತಿರುವ ನಕಲಿ ಸಿಮ್ ಹಾಗೂ ಪ್ರೀ ಅಕ್ಟಿವೇಟೆಡ್ ಸಿಮ್ ಜಾಲವನ್ನು ತುಂಡರಿಸಲು ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.ಈ ಬಗ್ಗೆ ಲೇಖನ ಸದ್ಯದಲ್ಲೆ ನಿರೀಕ್ಷಿಸಿ...

ಈ ಹಿಂದಿನ ಕಥೆ: ಜನವರಿ 26ರ ಸೋಮವಾರ ಸಿಸಿಬಿ ಪೊಲೀಸರ ತಂಡ ಎಲೆಕ್ಟ್ರಾನಿಕ್ ಸಿಟಿ ಬಳಿಯ ನೀಲಾದ್ರಿ ನಗರದ 8ನೇ ಕ್ರಾಸ್‌ನ ಮನೆಯ ಮೇಲೆ ದಾಳಿ ನಡೆಸಿ ಸಂಜುವನ್ನು ಬಂಧಿಸಿದ್ದರು. ಪೊಲೀಸರು ದಾಳಿ ನಡೆಸುವಾಗ ಶಂಕಿತ ಉಗ್ರ ಸಂಜು ಮನೆಯಲ್ಲಿ ಅಡಗಿದ್ದ. [ಆದಿವಾಸಿಗಳ ಕೊಂದು ಬೆಂಗಳೂರಲ್ಲಿ ಅಡಗಿದ್ದ ಉಗ್ರ]

Bangalore police files case against Vodafone

ಸಂಜುವನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ ಮೊಬೈಲ್ ಫೋನ್‌ ಅನ್ನು ವಶಪಡಿಸಿಕೊಂಡಿದ್ದರು. ಕರ್ನಾಟಕದಲ್ಲಿಯೇ ವೋಡಾಫೋನ್‌ ಸಿಮ್ ಅನ್ನು ಸಂಜು ಖರೀದಿ ಮಾಡಿದ್ದ, ಈತನ ಹೆಸರಿನಲ್ಲಿದ್ದ ಪಾನ್ ಕಾರ್ಡ್‌ ಅನ್ನು ಎಂದು ಪೊಲೀಸರು ವಶಪಡಿಸಿಕೊಂಡಿದ್ದರು. [ಅಸ್ಸಾಂ ದಾಳಿಯ ಪ್ರಮುಖ ಸೂತ್ರಧಾರ ಸಂಜು]

ಸಿಮ್ ಕಾರ್ಡ್ ಪಡೆಯಲು ಸಂಜು ನಕಲಿ ವಿಳಾಸ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಿಮ್ ಕಾರ್ಡ್ ನೀಡುವಾಗಲೂ ವಿಳಾಸದ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಸಂಗ್ರಹಿಸಿಲ್ಲ. ಆದ್ದರಿಂದ ನಕಲಿ ವಿಳಾಸ ಎಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಷನಲ್‌ ಡೆಮಾಕ್ರಟಿಕ್‌ ಫ್ರಂಟ್‌ ಆಫ್ ಬೋಡೋಲ್ಯಾಂಡ್‌ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಆದ ಸಂಜು, ಬಾಂಗ್ಲಾದೇಶದಲ್ಲಿ ಎಕೆ-47 ಸೇರಿದಂತೆ ಮತ್ತಿತರ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತರಬೇತಿ ಪಡೆದುಕೊಂಡಿದ್ದ. ಅಸ್ಸಾಂನಲ್ಲಿ ಮಾರಣಹೋಮ ನಡೆದ ಬಳಿಕ ಬಂಧನದ ಭೀತಿಯಿಂದ ಸಂಜು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ.

English summary
Bangalore city police have filed a case against Vodafone India Bengaluru division and 7 distributes in city, in an alleged pre-activated SIM card fraud case. Recently CCB police arrested Sanju Bordoloi banned terrorist organization National Democratic Front of Bodoland member near Electronic City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X