ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್‌ 1ರಿಂದ ಪೀಣ್ಯ ಬಸ್ ಮೆಜೆಸ್ಟಿಕ್‌ನಲ್ಲಿ ಲಭ್ಯ

|
Google Oneindia Kannada News

ಬೆಂಗಳೂರು, ಫೆ. 24 : ಪೀಣ್ಯದಿಂದ ಸಂಚಾರ ನಡೆಸುತ್ತಿರುವ ಕೆಎಸ್ಆರ್‌ಟಿಸಿ ಬಸ್ಸುಗಳು ಮಾರ್ಚ್ 1ರಿಂದಲೇ ಮೆಜೆಸ್ಟಿಕ್‌ಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಬಸವೇಶ್ವರ ಬಸ್ ನಿಲ್ದಾಣದಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದೆ. ಮೆಜೆಸ್ಟಿಕ್‌ಗೆ ನಿಲ್ದಾಣ ಸ್ಥಳಾಂತರ ಮಾಡಬೇಕು ಎಂಬ ಚರ್ಚೆ ಕೆಲವು ದಿನಗಳಿಂದ ನಡೆದಿತ್ತು.

ಪೀಣ್ಯದಲ್ಲಿ ಸುಮಾರು 40 ಕೋಟಿ ರೂ.ವೆಚ್ಚ ಮಾಡಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಆದರೆ, ಈ ಬಸವೇಶ್ವರ ಬಸ್ ನಿಲ್ದಾಣ ನಗರದಿಂದ ದೂರವಿರುವುದರಿಂದ ಪ್ರಯಾಣಿಕರು ಅತ್ತ ತೆರಳದೇ ಖಾಸಗಿ ಬಸ್ಸುಗಳನ್ನು ಅವಲಂಬಿಸಿದ್ದರು. ಇದರಿಂದ ಕೆಎಸ್ಆರ್‌ಟಿಸಿಗೆ ನಷ್ಟ ಉಂಟಾಗಿತ್ತು. [ಪೀಣ್ಯ ನಿಲ್ದಾಣ ಸ್ಥಳಾಂತರ : ಸಚಿವರು ಹೇಳುವುದೇನು?]

ವೇಗದೂತ ಬಸ್ಸುಗಳು ಪೀಣ್ಯದಿಂದ ಸಂಚಾರ ನಡೆಸುವುದಿಂದ ಈಶಾನ್ಯ ಮತ್ತು ವಾಯುವ್ಯ ಸಾರಿಗೆ ಸಂಸ್ಥೆಗಳಿಗೆ ಸುಮಾರು 11 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಕೆಲವು ದಿನಗಳ ಹಿಂದೆ ಚರ್ಚೆ ನಡೆದಿತ್ತು. ಬಸ್ ನಿಲ್ದಾಣವನ್ನು ಮೆಜೆಸ್ಟಿಕ್‌ಗೆ ಪುನಃ ಸ್ಥಳಾಂತರ ಮಾಡುವ ಚಿಂತನೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದರು. [ಸಚಿವರೇ ದುಡ್ಡಂದ್ರೆ ಜೆರಾಕ್ಸ್ ಪೇಪರಾ?]

ಸದ್ಯದ ಮಾಹಿತಿ ಪ್ರಕಾರ, ಬಸ್ ನಿಲ್ದಾಣ ಮೆಜೆಸ್ಟಿಕ್‌ಗೆ ಸ್ಥಳಾಂತರಗೊಂಡರೂ, ಎಲ್ಲಾ ಬಸ್ಸುಗಳು ಪೀಣ್ಯ ನಿಲ್ದಾಣದ ಮೂಲಕವೇ ತೆರಳಲಿವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳು ಪೀಣ್ಯ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ಮುಂದೆ ಸಾಗುವ ವ್ಯವಸ್ಥೆ ಮಾಡಲು ಕೆಎಸ್ಆರ್‌ಟಿಸಿ ಚಿಂತನೆ ನಡೆಸಿದೆ.

ಮತ್ತೆ ಮೆಜೆಸ್ಟಿಕ್‌ಗೆ ಬಸ್ ನಿಲ್ದಾಣ ಸ್ಥಳಾಂತರ

ಮತ್ತೆ ಮೆಜೆಸ್ಟಿಕ್‌ಗೆ ಬಸ್ ನಿಲ್ದಾಣ ಸ್ಥಳಾಂತರ

ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಪುನಃ ಮೆಜೆಸ್ಟಿಕ್‌ಗೆ ಸ್ಥಳಾಂತರಗೊಳ್ಳಲಿದೆ. ಪೀಣ್ಯ ನಿಲ್ದಾಣವನ್ನು ಮೆಜೆಸ್ಟಿಕ್‌ಗೆ ಸ್ಥಳಾಂತರ ಮಾಡುವ ಕುರಿತು ಕೆಲವು ದಿನಗಳಿಂದ ಚರ್ಚೆ ನಡೆದಿತ್ತು. ಎಲ್ಲವೂ ಅಂದುಕೊಡಂತೆ ಆದರೆ, ಮಾರ್ಚ್ 1ರಿಂದ ಪೀಣ್ಯದಿಂದ ಸಂಚರಿಸುವ ಬಸ್ಸುಗಳು ಮೆಜೆಸ್ಟಿಕ್‌ನಿಂದ ಸಂಚಾರ ಆರಂಭಿಸಲಿವೆ.

ಯಾವ ಬಸ್ಸುಗಳು ಸಂಚಾರ ನಡೆಸುತ್ತಿವೆ

ಯಾವ ಬಸ್ಸುಗಳು ಸಂಚಾರ ನಡೆಸುತ್ತಿವೆ

2014ರ ಸೆಪ್ಟೆಂಬರ್‌ 10ನಲ್ಲಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ ಆರಂಭವಾಗಿತ್ತು. ಚಿತ್ರದುರ್ಗ, ಸಿರಿಗೆರೆ, ದಾವಣಗೆರೆ, ಹರಿಹರ, ಹರಪನಹಳ್ಳಿ, ಹೂವಿನಹಡಗಲಿ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ಹಾವೇರಿ,
ಬಳ್ಳಾರಿ, ಹೊಸಪೇಟೆ, ಗಜೇಂದ್ರಗಡ, ಬೀಳಗಿ, ಮಂತ್ರಾ­ಲಯ, ರಾಯದುರ್ಗ, ದೇವ­ದುರ್ಗ, ಕುಷ್ಠಗಿ, ರಾಯಚೂರು ಮುಂತಾದ ಕಡೆ ಸಾಗುವ ವೇಗದೂತ ಬಸ್ಸುಗಳು ಇಲ್ಲಿಂದ ಸಂಚಾರ ನಡೆಸುತ್ತಿವೆ.

ಸಾರಿಗೆ ಸಂಸ್ಥೆಗಳಿಗೆ ನಷ್ಟವಂತೆ

ಸಾರಿಗೆ ಸಂಸ್ಥೆಗಳಿಗೆ ನಷ್ಟವಂತೆ

ಬಸವೇಶ್ವರ ಬಸ್ ನಿಲ್ದಾಣದಿಂದ ಉತ್ತರ ಕರ್ನಾಟಕ ಭಾಗದ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಇದರಿಂದ ಈಶಾನ್ಯ, ವಾಯುವ್ಯ ಸಾರಿಗೆ ಸಂಸ್ಥೆ ಸೇರಿದಂತೆ ಕೆಎಸ್‌ಆರ್‌ಟಿಸಿಗೆ ಮೂರು ತಿಂಗಳಿನಲ್ಲಿ ಸುಮಾರು 6 ರಿಂದ 7 ಕೋಟಿ ರೂ. ನಷ್ಟ ಉಂಟಾಗಿದೆ ಎಂಬುದು ಇಲಾಖೆ ಅಧಿಕಾರಿಗಳ ವಾದ, ಆದ್ದರಿಂದ ನಿಲ್ದಾಣ ಸ್ಥಳಾಂತರ ಮಾಡಿ ಎಂಬ ಬೇಡಿಕೆ ಇಟ್ಟಿದ್ದರು.

ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?

ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?

ಪೀಣ್ಯಕ್ಕೆ ಬಸ್ ನಿಲ್ದಾಣ ಸ್ಥಳಾಂತರವಾದ ನಂತರ ಸಾರಿಗೆ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದೆ. ಆದ್ದರಿಂದ ನಿಲ್ದಾಣವನ್ನು ಮೆಜೆಸ್ಟಿಕ್‌ಗೆ ಬಸ್ ನಿಲ್ದಾಣವನ್ನು ಸ್ಥಳಾಂತರ ಮಾಡುವಂತೆ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದರು.

ಎಲ್ಲಾ ಬಸ್ಸುಗಳು ಪೀಣ್ಯಕ್ಕೆ ಹೋಗಬೇಕು

ಎಲ್ಲಾ ಬಸ್ಸುಗಳು ಪೀಣ್ಯಕ್ಕೆ ಹೋಗಬೇಕು

ಸದ್ಯದ ಮಾಹಿತಿ ಪ್ರಕಾರ ಬಸ್ ನಿಲ್ದಾಣ ಮೆಜೆಸ್ಟಿಕ್‌ಗೆ ಸ್ಥಳಾಂತರಗೊಂಡರೂ, ಎಲ್ಲಾ ಬಸ್ಸುಗಳು ಪೀಣ್ಯ ನಿಲ್ದಾಣದ ಮೂಲಕವೇ ತೆರಳಲಿವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳು ಪೀಣ್ಯ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ಮುಂದೆ ಸಾಗುವ ವ್ಯವಸ್ಥೆ ಮಾಡಲು ಕೆಎಸ್ಆರ್‌ಟಿಸಿ ಚಿಂತನೆ ನಡೆಸಿದೆ.

ಸಂಪರ್ಕ ಸಾರಿಗೆ ಬಂದ್?

ಸಂಪರ್ಕ ಸಾರಿಗೆ ಬಂದ್?

ಪೀಣ್ಯಕ್ಕೆ ನಿಲ್ದಾಣ ಸ್ಥಳಾಂತರ ಮಾಡಿದ ನಂತರ ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ಸಂಪರ್ಕ ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಿತ್ತು. ಬಿಎಂಟಿಸಿ ಸಹ ಪೀಣ್ಯ ನಿಲ್ದಾಣಕ್ಕೆ ನಗರದ ಹಲವು ಬಡಾವಣೆಗಳಿಂದ ಬಸ್ ಸಂಪರ್ಕ ಕಲ್ಪಿಸಿತ್ತು. ನಿಲ್ದಾಣ ಮೆಜೆಸ್ಟಿಕ್‌ಗೆ ಸ್ಥಳಾಂತರಗೊಂಡರೆ ಸಂಪರ್ಕ ಸಾರಿಗೆ ವ್ಯವಸ್ಥೆ ಬಂದ್ ಆಗುವ ಸಾಧ್ಯತೆ ಇದೆ.

English summary
The Karnataka State Road Transport Corporation (KSRTC) may shift Peenya Basaveshwara bus stand to Majestic from March 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X