ಮಧುಮೇಹ ಚಿಕಿತ್ಸೆಗೆ ಕೇಜ್ರಿವಾಲ್ ಮತ್ತೆ ಬೆಂಗಳೂರಿಗೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚಿಕಿತ್ಸೆಗಾಗಿ ಮತ್ತೊಮ್ಮೆ ಬೆಂಗಳೂರಿಗೆ ಬರಲಿದ್ದಾರೆ. ಅವರ ರಕ್ತದಲ್ಲಿ ಸಕ್ಕರೆ ಅಂಶ ವಿಪರೀತ ಹೆಚ್ಚಾಗಿರುವುದರಿಂದ ಉದ್ಯಾನ ನಗರಿಯಲ್ಲಿ ದೀರ್ಘ ಕಾಲದ ಚಿಕಿತ್ಸೆ ಪಡೆಯಲಿದ್ದಾರೆ.

Subscribe to Oneindia Kannada

ಬೆಂಗಳೂರು, ಫೆಬ್ರವರಿ 5: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಚಿಕಿತ್ಸೆಗಾಗಿ ಮತ್ತೊಮ್ಮೆ ಬೆಂಗಳೂರಿಗೆ ಬರಲಿದ್ದಾರೆ. ಅವರ ರಕ್ತದಲ್ಲಿ ಸಕ್ಕರೆ ಅಂಶ ವಿಪರೀತ ಹೆಚ್ಚಾಗಿರುವುದರಿಂದ ಉದ್ಯಾನ ನಗರಿಯಲ್ಲಿ ದೀರ್ಘ ಕಾಲದ ಚಿಕಿತ್ಸೆ ಪಡೆಯಲಿದ್ದಾರೆ.

ಫೆಬ್ರವರಿ 7 ರಂದು ದೆಹಲಿ ಬಿಡಲಿರುವ ಕೇಜ್ರಿವಾಲ್ ಅಲ್ಲಿಂದ ನೇರ ಬೆಂಗಳೂರಿಗೆ ಬರಲಿದ್ದಾರೆ. ಇಲ್ಲಿ 10 -12 ದಿನಗಳ ಕಾಲ ಻ಅವರು ಸಕ್ಕರೆ ಕಾಯಿಲೆಗೆ ಚಿಕಿತ್ಸೆ ಪಡೆಯಲಿದ್ದಾರೆ. ನಂತರ ದೆಹಲಿಗೆ ವಾಪಾಸಾಗಲಿದ್ದಾರೆ. [ಗೋವಾ: ಭಾಷಣದಲ್ಲಿ ಲಂಚದ ಪ್ರಸ್ತಾಪ; ಕೇಜ್ರಿವಾಲ್ ಮೇಲೆ ಎಫ್ಐಆರ್]

Arvind Kejriwal undergo treatment in Bengaluru

ಪಂಜಾಬ್ ಮತ್ತು ಗೋವಾದಲ್ಲಿ ಇತ್ತೀಚೆಗೆ ಕೇಜ್ರಿವಾಲ್ ಆಕ್ರಮಣಕಾರಿ ಮತ ಪ್ರಚಾರ ನಡೆಸಿದ್ದರು. ಎರಡೂ ರಾಜ್ಯಗಳಲ್ಲಿ ಶನಿವಾರ ಚುನಾವಣೆ ಅಂತ್ಯವಾಗಿರುವುದರಿಂದ ಅವರೀಗ ನಿರಾಳವಾಗಿ ಸ್ವಲ್ಪ ದಿನಗಳ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಹಿಂದೆ ಕೆಮ್ಮಿನ ಚಿಕಿತ್ಸೆಗಾಗಿ ಕೇಜ್ರಿವಾಲ್ ಜಿಂದಾಲ್ ಆಸ್ಪತ್ರೆಯಲ್ಲಿ ಸುಮಾರು 15 ದಿನಗಳನ್ನು ಕಳೆದಿದ್ದರು. [ಅರವಿಂದ್ ಕೇಜ್ರಿವಾಲ್ ಪರಮಾಪ್ತನನ್ನು ಬಂಧಿಸಿದ ಸಿಬಿಐ]

English summary
Delhi Chief Minister Arvind Kejriwal will be arriving in Bengaluru for treatment, as his blood sugar levels are reportedly high.
Please Wait while comments are loading...