ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಿ ಎನ್ಎಸ್ ಮೇಘರಿಕ್

By Mahesh
|
Google Oneindia Kannada News

ಬೆಂಗಳೂರು, ಜುಲೈ 31: ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಆಯುಕ್ತರನ್ನು ನೇಮಿಸಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ. ಎಂಎನ್ ರೆಡ್ಡಿ ಅವರಿಗೆ ಡಿಜಿಪಿಯಾಗಿ ಬಡ್ತಿ ನೀಡಲಾಗಿದೆ. ಎನ್.ಎನ್ ಮೇಘರಿಕ್ ಅವರು ನೂತನ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.

ಬಿಬಿಎಂಪಿ ಚುನಾವಣೆ ಮುಗಿಯುವವರೆಗೂ ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡದೇ. ಹಾಲಿ ಇರುವ ಸ್ಥಾನದಲ್ಲೇ ಮುಂದುವರೆಸಬೇಕು ಎಂದು ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚಿಸಿತ್ತು. ಹೀಗಾಗಿ ಗೊಂದಲಕ್ಕೆ ಬಿದ್ದಿದ್ದ ಸರ್ಕಾರ ಕೊನೆಗೂ ಧೈರ್ಯ ಮಾಡಿ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶಕ್ಕೆ ಅಂಕಿತ ಹಾಕಿದೆ.

ಬೆಂಗಳೂರು ನಗರಕ್ಕೆ ನೂತನ ಪೊಲೀಸ್ ಆಯುಕ್ತರನ್ನು ನೇಮಕ ಮಾಡುವ ಸಂಬಂಧ ಸರ್ಕಾರ ಗೊಂದಲದಲ್ಲಿ ಸಿಲುಕಿ ಬೆಳಗ್ಗೆ ಇಂದ ಸಂಜೆ ತನಕ ಚರ್ಚೆ ನಡೆಸಿದ್ದು ವಿಶೇಷ. ಹಾಲಿ ಆಯುಕ್ತರನ್ನೇ ಮುಂದುವರೆಸಬೇಕೇ ಅಥವಾ ಹೊಸಬರನ್ನು ನೇಮಕ ಮಾಡಬೇಕೇ ಎಂಬುದರ ಬಗ್ಗೆ ಕೊನೆಗೂ ನಿರ್ಣಯ ಹೊರ ಬಿದ್ದಿದೆ.

NS Megharik
ಎನ್.ಎಸ್. ಮೇಘರಿಕ್ ಅವರು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ವರ್ಗವಾಗಿದ್ದರೆ, ಎಂಎನ್ ರೆಡ್ಡಿ ಅವರಿಗೆ ಅಗ್ನಿಶಾಮಕ ದಳ ವಿಭಾಗದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್(ಡಿಜಿಪಿ) ಆಗಿ ಬಡ್ತಿ ನೀಡಲಾಗಿದೆ.

ಪ್ರಮುಖ ಅಧಿಕಾರಿಗಳ ಬದಲಾದ ಹುದ್ದೆಗಳ ವಿವರ:
* ಆಡಳಿತ ವಿಭಾಗದ ಎಡಿಜಿಪಿಯಾಗಿ ಪ್ರವೀಣ್ ಸೂದ್
* ಆಂತರಿಕ ಭದ್ರತೆ ಎಡಿಜಿಪಿಯಾಗಿ ಟಿ ಸುನೀಲ್ ಕುಮಾರ್
* ನಾಗರೀಕ ಹಕ್ಕು ವಿಭಾಗದ ಎಡಿಜಿಪಿ ಭಾಸ್ಕರ್ ರಾವ್
* ರೈಲ್ವೆ ವಿಭಾಗದ ಎಡಿಜಿಪಿ ಪಾಂಡೆ
* ಕೆಎಸ್ ಆರ್ ಪಿ ಎಡಿಜಿಪಿ ಡಾ. ಎಸ್ ಪರಮಶಿವಮೂರ್ತಿ
* ಕಂಪ್ಯೂಟರ್ ವಿಭಾಗದ ಎಡಿಜಿಪಿ ರವೀಂದ್ರನಾಥ್
* ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಮೋಹನ್
*ಸಿಐಡಿ ಡಿಜಿಪಿ ಕಿಶೋರ್ ಚಂದ್ರ.

1987ರ ಐಪಿಎಸ್ ಬ್ಯಾಚಿನ ಅಧಿಕಾರಿಯಾದ ರಾಜಸ್ಥಾನ ಮೂಲದ ಮೇಘರಿಕ್ ಅವರು ಈ ಮುಂಚೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಡಿಜಿಪಿಯಾಗಿದ್ದರು, ಇದಕ್ಕೂ ಮುನ್ನ ಸಿಐಡಿ ಹಾಗೂ ಕ್ರೈಂ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿಯಾಗಿ ಕೂಡಾ ಕಾರ್ಯ ನಿರ್ವಹಿಸಿದ್ದರು.

English summary
ADGP Megharikh succeeds MN Reddi as Bengaluru Police Commissioner. Karnataka Government led by Siddaramaiah today(July 31) promoted MN Reddi as Director General of Police. Megharikh, a 1987 batch officer from Rajasthan, is Additional Director General of Police (Law and Order) at present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X