ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ, 4 ಪಿವಿಆರ್ ಟಿಕೆಟ್ ಗೆಲ್ಲಿ!

By Mahesh
|
Google Oneindia Kannada News

ಬೆಂಗಳೂರು, ಜ.19: ನಗರವಾಸಿಗಳ ಮುಂದೆ ಒಂದು ಅರ್ಥಪೂರ್ಣ ಸಮೀಕ್ಷೆಯನ್ನು ಎಂಐಟಿಯ ವಿದ್ಯಾರ್ಥಿ ಹಾಗೂ ಐಐಎಂ-ಬಿ ಹಮ್ಮಿಕೊಂಡಿದೆ. ವಾಟರ್ ಟ್ಯಾಂಕರ್ ಬೆಲೆ ತಾರತಮ್ಯದ ಬಗ್ಗೆ ಕೂಲಂಕುಷ ಮಾಹಿತಿ ಕಲೆ ಹಾಕಲು 'ನೀವು ಕುಡಿಯುವ ನೀರಿಗೆ ಎಷ್ಟು ಬೆಲೆ ತೆರುತ್ತಿದ್ದೀರಾ? ಎಂಬ ಪ್ರಶ್ನೆಯೊಂದಿಗೆ ಸಮೀಕ್ಷೆ ಆರಂಭಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ನೀರಿನ ಬಳಕೆ ಸ್ವರೂಪಗಳನ್ನು ಮತ್ತು ನೀರಿನ ಟ್ಯಾಂಕರ್ ಉದ್ಯಮದ ಕ್ರಿಯಾಶೀಲತೆಯನ್ನು ಉತ್ತಮವಾಗಿ ತಿಳಿಯಲು ಉತ್ಸುಕರಾಗಿದ್ದೇವೆ.ನಾವು ನಿಮ್ಮ ಬೆಂಬಲ ಮತ್ತು ನಿಮ್ಮ ಉತ್ತರಗಳನ್ನು ಮಹತ್ತರವಾಗಿ ಪ್ರಶಂಸಿಸುತ್ತೇವೆ. ಎಲ್ಲಾ ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು ಎಂದು ಸಮೀಕ್ಷೆ ಪುಟದಲ್ಲಿ ಹೇಳಲಾಗಿದೆ.

Massachusetts Institute of Technology (MIT)ಯ ನಗರ ಅಧ್ಯಯನ ಹಾಗೂ ಯೋಜನೆ ವಿಭಾಗದ ವಿದ್ಯಾರ್ಥಿ ಅನಿರುದ್ಧ್ ರಾಜಶೇಖರ್ ಹಾಗೂ ಬೆಂಗಳೂರಿನ ಐಐಎಂನ ನ್ಯೂ ರಿಯಲ್ ಎಸ್ಟೇಟ್ ಯೋಜನೆ ನಡೆಸುತ್ತಿರುವ ಈ ಸಮೀಕ್ಷೆಯಿಂದ ನಗರದ ಕುಡಿಯುವ ನೀರಿನ ಸಮಸ್ಯೆಗೆ ಒಂದು ಪರಿಹಾರ ಕಾಣುವ ಸಾಧ್ಯತೆಯಿದೆ.

A Survey on Water tanker prices in Bangalore

ನೀವು ಆನ್ ಲೈನ್ ಅರ್ಜಿಯಲ್ಲಿ ತುಂಬಿದ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ಸಮೀಕ್ಷೆಯ ಅಂತಿಮ ವರದಿಯನ್ನು ಮಾತ್ರ ಎಂಐಟಿ, ಐಐಎಂ ಬೆಂಗಳೂರು ಹಾಗೂ ಸಿಟಿಜನ್ ಮ್ಯಾಟರ್ಸ್ ವೆಬ್ ತಾಣದಲ್ಲಿ ಪ್ರಕಟಿಸಲಾಗುತ್ತದೆ.

ಈ ಸಮೀಕ್ಷೆಯಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳುವಂತೆ ಮಾಡಲು ಅದೃಷ್ಟವಂತರಿಗೆ ಪಿವಿಆರ್ ನಲ್ಲಿ ಸಿನಿಮಾ ನೋಡುವ ಅವಕಾಶ ಲಭ್ಯವಾಗಲಿದೆ. ಫೆ.20, 2015ರಂದು ಸಮೀಕ್ಷೆ ಮುಕ್ತಾಯಗೊಳ್ಳಲಿದ್ದು ಅಂದೇ ಮೂವರು ಲಕ್ಕಿ ಡ್ರಾ ವಿಜೇತರಿಗೆ ತಲಾ ನಾಲ್ಕು ಪಿವಿಆರ್ ಟಿಕೆಟ್ ವಿತರಿಸಲಾಗುತ್ತದೆ.

ಅರ್ಜಿ ತುಂಬಲು ಇಲ್ಲಿ ಕ್ಲಿಕ್ ಮಾಡಿ
ಗೃಹ ಉಪಯೋಗಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸುವ ನೀರಿನ ದರಕಗಳನ್ನು ನವೆಂಬರ್ 2014ರಲ್ಲಿ ಏರಿಕೆ ಮಾಡಲಾಗಿತ್ತು.[ಕಾವೇರಿ ನೀರಿನ ದರ ಏರಿಕೆ ಶಾಕ್]

ರಾಜ್ಯದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ 1,800 ಹಳ್ಳಿಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ 5.2ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್ ‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. [ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ]

ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದರೆ 1800-425-8666 ಸಂಖ್ಯೆಗೆ ಶುಲ್ಕರಹಿತವಾಗಿ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
A student from MIT’s department of urban studies and planning and IIM Bangalore’s New Real Estate initiative are conducting a study to map out water tanker prices in Bangalore to understand the dynamics of the water tanker industry. Their hope is to provide policy recommendations that might improve water access in Bangalore. Their hope is to provide policy recommendations that might improve water access in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X