ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣತಂತ್ರ ಪೆರೇಡ್ ನಲ್ಲಿ ಕೊಪ್ಪಳದ ಕಿನ್ನಾಳ ಕಲೆ

By Mahesh
|
Google Oneindia Kannada News

ಈ ಬಾರಿಯ ಗಣರಾಜ್ಯೋತ್ಸವ ಕೊಪ್ಪಳ ಜಿಲ್ಲೆಯ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಪ್ರಥಮ ಬಾರಿಗೆ ಜಿಲ್ಲೆಯ ಕಿನ್ನಾಳ ಕಲೆಗೆ ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ದೊರಕಿದೆ. ರಾಜಪಥದಿಂದ ಕೆಂಪು ಕೋಟೆ ತನಕದ 8 ಕಿ.ಮೀ ದೂರ ಕರ್ನಾಟಕದ ಪ್ರತಿನಿಧಿಯಾಗಿ ಕಿನ್ನಾಳ ಕಲೆ ಸ್ತಬ್ದ ಚಿತ್ರ ಸಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆ ಕುರಿತ ಸ್ತಬ್ದ ಚಿತ್ರ ಕಳಿಸಲು ರಾಜ್ಯ ವಾರ್ತಾ ಇಲಾಖೆ ಆಯ್ಕೆ ಮಾಡಿತ್ತು. ಕಿನ್ನಾಳ ಕಲೆಯ ಸ್ತಬ್ದ ಚಿತ್ರದಲ್ಲಿ ಕಿನ್ನಾಳ ಗ್ರಾಮದ ಕಿನ್ನಾಳ ಕಲಾವಿದರಾದ ಕಿಶೋರ್ ಚಿತ್ರಗಾರ, ನೀತಾ ಚಿತ್ರಗಾರ, ಅಜೇಯ್ ಚಿತ್ರಗಾರ ಹಾಗೂ ಮಂಜುನಾಥ ಚಿತ್ರಗಾರ ಸೇರಿದಂತೆ ನಾಲ್ವರು ಕಲಾವಿದರು ಇದ್ದರು.

ಕಿನ್ನಾಳ ಅವಿನಾಶಿ ಬಣ್ಣದ ಕಲೆ ಸ್ತಬ್ದ ಚಿತ್ರದಲ್ಲಿ ಕಾಮಧೇನು, ಪೌರಾಣಿಕ ಹಸುವಿನ ಪ್ರತಿಮೆ ಮುಂಭಾಗದಲ್ಲಿದ್ದು, ದ್ವಾರಪಾಲಕರು ಎರಡು ಬದಿಯಲ್ಲಿ ಸಾಗುವ ವ್ಯವಸ್ಥೆ ಮಾಡಲಾಗಿದೆ. ನಾಡಿನ ಸಮೃದ್ಧಿಗಾಗಿ ಗ್ರಾಮದೇವತೆಯನ್ನು ಆರಾಧಿಸುವ ದೃಶ್ಯ ಸೃಷ್ಟಿಸಲಾಗಿತ್ತು.

ಕಿನ್ನಾಳ ಕಲೆ: ಕೊಪ್ಪಳ ಜಿಲ್ಲಾ ಕೇಂದ್ರದಿಂದ ಕೇವಲ 12 ಕಿ.ಮೀ. ದೂರದಲ್ಲಿದೆ ಕಿನ್ನಾಳ ಗ್ರಾಮ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಖ್ಯಾತಿ ಪ್ರಪಂಚದಾದ್ಯಂತ ಹಬ್ಬಿದೆ. ವಿವಿಧ ಬಗೆಯ ಗೊಂಬೆಗಳ ಮೂಲಕ ಒಂದು ಹೊಸ ಬಣ್ಣದ ಲೋಕವನ್ನೇ ಸೃಷ್ಟಿಮಾಡುವ ಕಿನ್ನಾಳ ಗ್ರಾಮದ ಚಿತ್ರಗಾರರಿಗೆ ದೊಡ್ಡ ಇತಿಹಾಸ ಹಾಗೂ ಪರಂಪರೆ ಇದೆ.

ನಮ್ಮ ನಾಡಿನಲ್ಲಿ ಕರಕುಶಲ ಕಲೆಗಳಿಗೆ ಶತಶತಮಾನಗಳ ರೋಚಕ ಇತಿಹಾಸವಿದೆ. ಆಧುನಿಕ ಯುಗದಲ್ಲಿಯೂ ಕಿನ್ನಾಳ ಕಲೆ ಜೀವಂತವಾಗಿದೆಯಲ್ಲದೇ, ಕಿನ್ನಾಳ ಕಲೆಯು ತನ್ನದೇಯಾದ ಮಹತ್ವದ ಸ್ಥಾನವನ್ನು ಹೊಂದಿದೆ. ಒಟ್ಟಾರೆ 14 ರಾಜ್ಯಗಳು ಹಾಗೂ ವಿವಿಧ ಇಲಾಖೆಗಳು ಸೇರಿ 19 ಸ್ತಬ್ದ ಚಿತ್ರಗಳು ಪ್ರದರ್ಶನಗೊಂಡವು. ಆಕರ್ಷಕ ಸ್ತಬ್ದ ಚಿತ್ರಗಳ ಚಿತ್ರಗಳು ಇಲ್ಲಿದೆ ನೋಡಿ

ಸ್ತಬ್ದ ಚಿತ್ರದಲ್ಲಿ ಕಲಾ ವೈಭವ ಅನಾವರಣ

ಸ್ತಬ್ದ ಚಿತ್ರದಲ್ಲಿ ಕಲಾ ವೈಭವ ಅನಾವರಣ

ಹಂಪಿಯ ವಿರೂಪಾಕ್ಷ ದೇವಾಲಯ, ಪಂಪಾಪತಿ ದೇವಾಲಯಗಳ ಛತ್ತಿನ ಮೇಲೆ ಬಣ್ಣ ಬಣ್ಣಗಳ ವಿಶೇಷ ಚಿತ್ರಕಲೆ ಮೂಡಿರುವುದು, ಕಿನ್ನಾಳ ಕಲೆಯ ವೈಶಿಷ್ಟ್ಯವನ್ನು ಬಿಂಬಿಸುತ್ತದೆ.

ಈ ಸಾಮ್ರಾಜ್ಯದಲ್ಲಿ ರಾಜಾಶ್ರಯದೊಂದಿಗೆ ತಮ್ಮ ಕಲೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಚಿತ್ರಗಾರರ ಕುಟುಂಬಗಳು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮಕ್ಕೂ ವಲಸೆ ಬಂದರು
ಸ್ತಬ್ದ ಚಿತ್ರದಲ್ಲಿ ಕಲಾ ವೈಭವ ಅನಾವರಣ

ಸ್ತಬ್ದ ಚಿತ್ರದಲ್ಲಿ ಕಲಾ ವೈಭವ ಅನಾವರಣ

ಸ್ತಬ್ದ ಚಿತ್ರದ ಆಯ್ಕೆ ಸುಲಭವಲ್ಲ: ದಿಲ್ಲಿಯಲ್ಲಿ ನಡೆಯುವ ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ಸ್ತಬ್ದ ಚಿತ್ರಕ್ಕೆ ಆಯ್ಕೆಗೊಳ್ಳುವುದು ಸುಲಭದ ಮಾತಲ್ಲ. ಅಲ್ಲದೇ ಇಡೀ ಭಾರತದಲ್ಲಿ ಕೇವಲ 14 ರಾಜ್ಯಗಳು ಮಾತ್ರ ಸ್ತಬ್ದ ಚಿತ್ರ ಸ್ಪರ್ಧೆ/ಪಥ ಸಂಚಲನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಇದಕ್ಕಾಗಿಯೇ ಕೇಂದ್ರ ರಕ್ಷಣಾ ಇಲಾಖೆಯ ಪ್ರಮುಖ ಅಧಿ ಕಾರಿಗಳನ್ನೊಳಗೊಂಡ ಆಯ್ಕೆ ಸಮಿತಿ ಇರುತ್ತದೆ.

ಆಕರ್ಷಕ ಸ್ತಬ್ದ ಚಿತ್ರ

ಆಕರ್ಷಕ ಸ್ತಬ್ದ ಚಿತ್ರ

ಎಲ್ಲ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳ ಸ್ತಬ್ದ ಚಿತ್ರಗಳ ಭಾಗವಹಿಸುವಿಕೆಯನ್ನು ಪ್ರತಿಪಾದಿಸುತ್ತವೆ. ಆಯ್ಕೆ ಸಮಿತಿಯು ಇದಕ್ಕಾಗಿ ಹತ್ತಾರು ಬಾರಿ ಸಭೆ ಸೇರಿ, ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತದೆ. ಸ್ತಬ್ದ ಚಿತ್ರದ ವಿಷಯ, ಗುಣಮಟ್ಟ, ಇತಿಹಾಸ, ಪ್ರಾಮುಖ್ಯತೆ ಇವುಗಳ ಆಧಾರದ ಮೇಲೆ ಅಂತಿಮವಾಗಿ ಸ್ತಬ್ದ ಚಿತ್ರಗಳನ್ನು ಸಮಿತಿಯು ಅಂತಿಮವಾಗಿ ಆಯ್ಕೆಗೊಳಿಸುತ್ತದೆ. ಈ ಬಾರಿ ದಕ್ಷಿಣ ಭಾರತದಿಂದ ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಮಾತ್ರ ಸ್ತಬ್ದ ಚಿತ್ರ ಪ್ರತಿನಿಧಿಸಲು ಆಯ್ಕೆಯಾಗಿವೆ.

ದೆಹಲಿಯ ಸ್ತಬ್ದ ಚಿತ್ರ

ದೆಹಲಿಯ ಸ್ತಬ್ದ ಚಿತ್ರ

ದೇಶದ ರಾಜಧಾನಿ ಸಾಂಸ್ಕೃತಿಕ ಕಲೆಗಳ ರಾಜಧಾನಿಯೂ ಹೌದು, ಲಲಿತ ಕಲೆಯ ನೆಲೆವೀಡು ಎಂದು ಸಾರುವ ಸ್ತಬ್ದ ಚಿತ್ರ

ಪಶ್ಚಿಮ ಬಂಗಾಳದ ಸ್ತಬ್ದ ಚಿತ್ರ

ಪಶ್ಚಿಮ ಬಂಗಾಳದ ಸ್ತಬ್ದ ಚಿತ್ರ

ಪಶ್ಚಿಮ ಬಂಗಾಳದ ಮಹಾನ್ ಪುರುಷ ಸ್ವಾಮಿ ವಿವೇಕಾನಂದರ 150ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಆಕರ್ಷಕ ಸ್ತಬ್ದ ಚಿತ್ರ

ಮೇಘಾಲಯ ಸ್ತಬ್ದ ಚಿತ್ರ

ಮೇಘಾಲಯ ಸ್ತಬ್ದ ಚಿತ್ರ

ವಾಂಗಲ ನೃತ್ಯ, ದಾಮಾ(drums) ರಂಗ್ (gongs) ಹಾಗೂ ಅದಿಲ್ (horns) ಮುಂತಾದ ಮೇಘಾಲಯದ ಸ್ಥಳೀಯ ವಾದ್ಯಗಳ ಒಕ್ಕೂಟ ಸಾರುವ ದೃಶ್ಯ

ಮಾಹಿತಿ ಮತ್ತು ತಂತಜ್ಞಾನ ಇಲಾಖೆ

ಮಾಹಿತಿ ಮತ್ತು ತಂತಜ್ಞಾನ ಇಲಾಖೆ

ಪೌರಾಣಿಕ ಮಯೂರ ವಾಹನದ ಮೂಲಕ ಭಾರತೀಯ ಚಿತ್ರರಂಗದಲ್ಲಿನ ಟಿಪಿಕಲ್ ಮುಹೂರ್ತ ಸಮಾರಂಭ ದೃಶ್ಯ ಸಾರುವ ಚಿತ್ರ

ಛತ್ತೀಸ್ ಗಢ

ಛತ್ತೀಸ್ ಗಢ

ರಾಜ್ಯದ ಕಲೆ, ವಾಸ್ತುಶಿಲ್ಪ, ಕೋಮು ಸಾಮರಸ್ಯ ಸಿರ್ ಪುರದ ಶಿವ, ಬುದ್ಧ ಹಗೂ ಜೈನ ದೇಗುಲ ಸಮಾಗಮ

ಕೇರಳ ಸ್ತಬ್ದ ಚಿತ್ರ

ಕೇರಳ ಸ್ತಬ್ದ ಚಿತ್ರ

ಕೇರಳದ ಪ್ರಕೃತಿ ಸೌಂದರ್ಯದ ಸ್ಥೂಲ ಚಿತ್ರಣ ಜೊತೆಗೆ ಹಿನ್ನೀರಿನಲ್ಲಿ ತೇಲುವ ಒಂದು ಬೆಡ್ ರೂಮ್ ಸೌಲಭ್ಯದ ಬೋಟ್ ಹೌಸ್

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

ಕಿನ್ನರಿ ಕನ್ಯೆ ಅಲಂಕಾರ ವಸ್ತ್ರ ಪ್ರದರ್ಶನ ಜೊತೆಗೆ ಚಿನ್ನ ಮತ್ತು ಬೆಳ್ಳಿಯಲ್ಲಿ ಅಲಂಕಾರಗೊಂಡ ದೇವರ ರಥ

ಬಿಹಾರ

ಬಿಹಾರ

ಬಿಹಾರದ ಕರ ಕುಶಲ ಕಲೆ : ಸಿಕ್ಕಿ ಹುಲ್ಲುಗಳಿಂದ ಮಾಡಲ್ಪಟ್ಟ ಆಕರ್ಷಕ 'ಕಲಶ' ಜೊತೆಗೆ ಬುಟ್ಟಿ, ಪ್ರಾಣಿಗಳು, ಆಟಿಕೆಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳ ಪ್ರದರ್ಶನ

ಒಡಿಸ್ಸಾ

ಒಡಿಸ್ಸಾ

ಒಡಿಸ್ಸಾದ ಪ್ರಸಿದ್ಧ ಜಗನ್ನಾಥ ದೇಗುಲದ ಚಂದನ ಯಾತ್ರೆ, ಭಜನೆ, ಕೀರ್ತನೆ, ಮೃದಂಗ ನಾದ, ಗಂಟಾ ನಾದದ ಹಿಮ್ಮೇಳದ ಜೊತೆ ದೇವರ ಯಾತ್ರೆ

ಭಾರತೀಯ ರೈಲ್ವೆ

ಭಾರತೀಯ ರೈಲ್ವೆ

ಪ್ರತಿ ಕೋಚ್ ಇರುವುದು ನಿಮ್ಮ ಅನುಕೂಲಕ್ಕೆ ಎಂಬ ಸಾರದೊಂದಿಗೆ ಭಾರತೀಯ ರೈಲ್ವೆ ಸ್ತಬ್ದ ಚಿತ್ರ. ಇಂಟರ್ ಸಿಟಿ ರೈಲುಗಳನ್ನು ಶೇ 50 ರಷ್ಟು ಹೆಚ್ಚಿಸಲು ಚಿಂತನೆ

ರಾಜಸ್ಥಾನ

ರಾಜಸ್ಥಾನ

ಬಂಡಿ ಚಿತ್ರಶಾಲಾದ ಪ್ರತಿಕೃತಿ, ಸಾಂಪ್ರದಾಯಿಕ ಬಂಡಿ(Bundi) ಶೈಲಿ ಚಿತ್ರಕಲೆ ಅನಾವರಣ

M/O SOCIAL JUSTICE

M/O SOCIAL JUSTICE

ಅಂಗವಿಕಲರಿಗೂ ಎಲ್ಲರಂತೆ ಬಾಳುವ ಹಕ್ಕಿದೆ ಎಂದು ಸಾರುವ ಸಾಮಾಜಿಕ ನ್ಯಾಯ ಇಲಾಖೆಯ ಸ್ತಬ್ದ ಚಿತ್ರ.

M/o TRIBAL AFFAIRS

M/o TRIBAL AFFAIRS

ಬುಡಕಟ್ಟು ಜನಾಂಗ ಕಲೆ It portrays the Tribal Art through various art forms by different tribes emphasizing their socio-economic development.

ತ್ರಿಪುರ

ತ್ರಿಪುರ

ಸಂಗ್ರಾಯ್ ಹಬ್ಬದಲ್ಲಿ ಮೊಗ್ ಮಹಿಳೆಯರು ಬಣ್ಣ ಬಣ್ಣದ ವೇಷ ಭೂಷಣ ತೊಟ್ಟು ಕೊಡೆ ಹಿಡಿದು ನರ್ತಿಸುವ ಚಿತ್ರಣ. ಮೋಗ್ ಸಮುದಾಯದ ಮಹಾಮುನಿ ಪಗೋಡಾ- ಬೌದ್ಧ ಚೈತ್ಯವನ್ನು ನೀಡಲಾಗಿದೆ.

ಅಗ್ನಿ ಕ್ಷಿಪಣಿ

ಅಗ್ನಿ ಕ್ಷಿಪಣಿ

Agni-V Missile

ಭಾರತೀಯ ವಾಯುಸೇನೆ

ಭಾರತೀಯ ವಾಯುಸೇನೆ

The tableau of Indian Air Force

Brahmos Launcher

Brahmos Launcher

Brahmos Launcher

DRDO

DRDO

DRDO

Tracked Vehicle

Tracked Vehicle

Armoured Ambulance Tracked Vehicle

Pinaka

Pinaka

Pinaka 214 MM Multi Barrel Rocket Launcher System

Mobile Integrated Network Terminal

Mobile Integrated Network Terminal

Mobile Integrated Network Terminal

Sarvatra

Sarvatra

15 Metre Sarvatra Bridging System

CBRN RECCE Vehicle

CBRN RECCE Vehicle

CBRN RECCE Vehicle

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ

ಜಗತ್ ಪ್ರಸಿದ್ಧ ಪಶ್ಮಿನಾ(Pashmina) ವಸ್ತ್ರಗಳು ಹುಟ್ಟಿದ ಬಗೆ, ವ್ಯಾಪಾರ ವಹಿವಾಟು, ತಲೆ ತಲಾಂತರ ವಹಿವಾಟು, The story of Pashmina connects different regions of the State. It has also been part of the international trade and heritage. The tableau depicts the cloned goat and the pashmina-making process.

ಜಾರ್ಖಂಡ್

ಜಾರ್ಖಂಡ್

ಡೊಕರ ಕಲೆ ಬಗ್ಗೆ ಚಿತ್ರಣ The tableau depicts the famous Dokara Art of the State. It reflects the social, economic, religious and natural life style. The front portion depicts the beautiful craft such as Elephant, Scorpion, Deer and Bull etc.

ಭಾರತೀಯ ಜಲಸೇನೆ

ಭಾರತೀಯ ಜಲಸೇನೆ

ಭಾರತೀಯ ಜಲಸೇನೆ ಸ್ತಬ್ದ ಚಿತ್ರ

English summary
A kaleidoscopic view of the country's rich cultural heritage and military prowess were on display at the 64th Republic Day parade on Saturday on the 8-km stretch from Rajpath to Red Fort.The tableau of Karnataka on the theme 'Kinnal : An Immortal Colour Craft' in the Republic Day Parade – 2013
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X