ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ದಸರಾದಲ್ಲಿ ಹುಟ್ಟಿಕೊಂಡ ಜಾತಿ ಸಂಘರ್ಷ

|
Google Oneindia Kannada News

ಮೈಸೂರು, ಸೆ.5 : ಎಲ್ಲಾ ಧರ್ಮದವರು ಗೌರವಿಸುವ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಹೊಸದೊಂದು ವಿವಾದ ಕೇಳಿಬಂದಿದೆ. ಜಂಬೂ ಸವಾರಿಯ ದಿನದಂದು ಆನೆಗೆ ಅಂಬಾರಿ ಕಟ್ಟುವ ಕೆಲಸ ಮಾಡುವ ಅಕ್ರಂ ಅವರನ್ನು ಅಂಬಾರಿ ಕಟ್ಟುವ ಕಾಯಕದಿಂದ ದೂರವಿಡಬೇಕು ಎಂದು ಹಲವು ಸಂಘಟನೆಗಳು ಒತ್ತಾಯಿಸಿವೆ.

ಮೈಸೂರು ಕನ್ನಡ ವೇದಿಕೆಯ ಬಾಲಕೃಷ್ಣ ಮತ್ತು ಕನ್ನಡ ಚಳವಳಿ ಮುಖಂಡ ಮುಗೂರು ನಂಜುಡಸ್ವಾಮಿ ಅರಣ್ಯ ಇಲಾಖೆಯ ನೌಕರರಾದ ಅಕ್ರಂ ಶೂ ಹಾಕಿಕೊಂಡು ಅಂಬಾರಿ ಕಟ್ಟುವ ಕಾಯಕದಲ್ಲಿ ತೊಡಗುತ್ತಾರೆ. ಹಾಗೆಯೇ ಆನೆ ಮೇಲೆ ಹತ್ತಿ ಅಂಬಾರಿ ಕಟ್ಟುತ್ತಾರೆ ಎಂದು ಆರೋಪಿಸಿದ್ದಾರೆ.

Dasara

ಚಾಮುಂಡೇಶ್ವರಿ ದೇವಿಯ ವಿಗ್ರಹವಿರುವ ಅಂಬಾರಿ ಹಿಂದುಗಳಿಗೆ ಪವಿತ್ರವಾದದ್ದು, ಅಕ್ರಂ ಶೂ ಹಾಕಿಕೊಂಡು ಅಂಬಾರಿ ಕಟ್ಟುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಆದ್ದರಿಂದ ಅಂಬಾರಿ ಕಟ್ಟುವಾಗ ಅಕ್ರಂ ಅವರನ್ನು ದೂರವಿಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ನಂಜುಡಸ್ವಾಮಿ ಮತ್ತು ಬಾಲಕೃಷ್ಣ ದೂರು ನೀಡಿದ್ದಾರೆ. ಸಿಎಂ ಕಚೇರಿ ಈ ಕುರಿತ ದೂರನ್ನು ಡಿಎಫ್ಒ ದೇವರಾಜ್ ಅವರಿಗೆ ವರ್ಗಾಯಿಸಲಾಗಿದೆ. ದೂರಿನ ಬಗ್ಗೆ ಹೇಳಿಕೆ ನೀಡಿರುವ ದೇವರಾಜ್ ಅಕ್ರಂ ಅವರನ್ನು ಅಂಬಾರಿ ಕಟ್ಟುವ ಕೆಲಸದಿಂದ ದೂರವಿಡುತ್ತೇವೆ ಎಂದು ಹೇಳಿದ್ದಾರೆ.

ದಸರಾ ಮಹೋತ್ಸವ ಯಾವುದೇ ತೊಂದರೆ ಆದದಂತೆ ಯಶಸ್ವಿಯಾಗಿ ನಡೆಯಲು ಬೇರೆ ಸಹಾಯಕರನ್ನು ಬಳಸಿಕೊಂಡು ಅಂಬಾರಿ ಕಟ್ಟಲಾಗುವುದು. ಈ ಬಾರಿ ಅಂಬಾರಿ ಕಟ್ಟುವಾಗ ಅಕ್ರಂ ಅವರನ್ನು ಬಳಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನುರಿತ ಕೆಲಸಗಾರರಾದ ಅಕ್ರಂ ಅವರನ್ನು ಅಂಬಾರಿ ಕಟ್ಟುವ ಕೆಲಸದಿಂದ ದೂರವಿಡುವುದು ಅರಣ್ಯ ಇಲಾಖೆಗೂ ತಲೆನೋವಾಗಿದೆ. ಆದರೆ, ಇಂತಹ ಕ್ರಮ ಅನಿವಾರ್ಯವಾಗಿದೆ.

ದಸರಾ ಉತ್ಸವದಲ್ಲಿ ಕಳೆದ 14 ವರ್ಷಗಳಿಂದ ಅಕ್ರಂ ಅಂಬಾರಿ ಕಟ್ಟುವ ಕಾಯಕ ಮಾಡಿಕೊಂಡು ಬರುತ್ತಿದ್ದಾರೆ. ಉತ್ತಮವಾಗಿ ಕೆಲಸ ಮಾಡಿದ್ದಕ್ಕಾಗಿ, ಅವರು ಸರ್ಕಾದದಿಂದ ಬಹುಮಾನವನ್ನು ಪಡೆದಿದ್ದರು. ಆದರೆ, ಈ ಬಾರಿಯ ದಸರಾದಿಂದ ಅವರು ದೂರ ಉಳಿಯಲಿದ್ದಾರೆ.

ಅಕ್ರಂ ಬೇಸರ : ಬರಿಗಾಲಿನ ಮೇಲೆಯೇ ಆನೆಯನ್ನು ಹತ್ತುವುದು ಕಷ್ಟ. ಶೂ ಹಾಕಿಕೊಂಡು ನಾನು ಹೇಗೆ ಆನೆಯ ಮೇಲೆ ಹತ್ತುತ್ತೇನೆ. ನಾನು ಅಂಬಾರಿ ಬಿಗಿಯುವಾಗ ಎಂದೂ ಶೂ ಧರಿಸಿಲ್ಲ, ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಅಕ್ರಂ ಬೇಸರ ವ್ಯಕ್ತಪಡಿಸಿದ್ದಾರೆ.

ದಸರಾ ಉತ್ಸವ ಯಶಸ್ವಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ನಾನು ಪ್ರಾರ್ಥಿಸುತ್ತೇನೆ. ದಸರಾ ನಡೆಯುವಾಗ ನಾನು ಮಾಂಸಾಹಾರ ಸೇವಿಸುವುದಿಲ್ಲ. ಸೋನಪ್ಪ ಮತ್ತು ಭೋಜ ಅವರಿಂದ ನಾನು ಹಗ್ಗ ಬಿಗಿಯುವ ಕೆಲಸ ಕಲಿತಿದ್ದೆ. ಈ ಬಾರಿ ನನಗೆ ಅವಕಾಶ ನೀಡದಿರುವುದು ಬೇಸರ ತಂದಿದೆ ಎಂದು ಅಕ್ರಂ ಹೇಳಿದ್ದಾರೆ.

English summary
The 400-year-old Dasara festivities celebrated with gaiety across religions to mark the victory over evil is likely to run into a controversy. Some organizations and a few individuals have objected to Akram, an employee of forest department, from tying the golden howdah with the presiding deity Chamundeshwari’s idol on the elephants
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X