ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?

ಯಾವ ರಾಶಿಗೆ ಯಾವುದು ಅದೃಷ್ಟ ರತ್ನ ಅನ್ನೋದನ್ನು ತಿಳಿಯೋದಿಕ್ಕೆ ಪ್ರಯತ್ನ ಪಟ್ಟಿರ್ತೀರಿ. ಅದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಅದೇ ರೀತಿ ಅದೃಷ್ಟ ಹರಳುಗಳ ಧಾರಣೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಕೂಡ ಇದೆ.

By ರತ್ನ ಕುಮಾರ್
|
Google Oneindia Kannada News

ಇಂಥದ್ದೊಂದು ಪ್ರಶ್ನೆ ಜ್ಯೋತಿಷಿಗಳ ಬಳಿ ಹೋದವರಿಗೆ ಬಂದೇ ಬರುತ್ತದೆ. ನಾನು ಯಾವ ರತ್ನ ಧರಿಸಬಹುದು? ಅಥವಾ ನನ್ನ ಮನೆಯಲ್ಲಿ ಈ ರತ್ನದ ಉಂಗುರ ಮಾಡಿಕೊಂಡು ಬಂದು ಬಿಟ್ಟಿದ್ದಾರೆ ಇದನ್ನು ನಾನು ಧರಿಸಬಹುದಾ? ಈ ಪ್ರಶ್ನೆಗೆ ಇಂದು ಉತ್ತರ ಕೊಡಲಾಗುತ್ತಿದೆ.

ಅದೃಷ್ಟ ರತ್ನಗಳು ಅಂತ ಯಾವುದೆಲ್ಲವನ್ನೂ ಕರೆಯುತ್ತಾರೋ ಅವುಗಳ ಧಾರಣೆ ಬಗ್ಗೆ ಅಭಿಪ್ರಾಯ ಒಂದೊಂದು ರೀತಿಯಲ್ಲಿದೆ. ಕೆಲವರು ಜನ್ಮರಾಶಿಗೆ ಅನುಗುಣವಾಗಿ ಅದೃಷ್ಟ ರತ್ನವನ್ನು ಸೂಚಿಸುತ್ತಾರೆ. ಇನ್ನೂ ಕೆಲವರು ಜಾತಕದಲ್ಲಿ ಯಾವ ಗ್ರಹದ ಪ್ರಭಾವ ಚೆನ್ನಾಗಿಲ್ಲವೋ ಅದು ಚೆನ್ನಾಗಿ ಆಗಬೇಕು ಎಂದು ಆ ನಿರ್ದಿಷ್ಟ ಗ್ರಹದ ರತ್ನವನ್ನು ಸೂಚಿಸುತ್ತಾರೆ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

ಅದೇ ರೀತಿ ಕೆಲವು ನಿರ್ದಿಷ್ಟ ದಶೆ ನಡೆಯುವಾಗ ಆ ಗ್ರಹದ ಕ್ರೂರ ಪ್ರಭಾವ ಬೀರದಿರಲಿ ಎಂದು ಆ ರತ್ನ ಧಾರಣೆ ಮಾಡುವಂತೆ ಸೂಚಿಸುತ್ತಾರೆ. ಇನ್ನು ಜಾತಕದಲ್ಲಿ ಯಾವ ಗ್ರಹವು ಉತ್ತಮವಾಗಿರುತ್ತದೋ ಅದರ ಪ್ರಭಾವ ಮತ್ತೂ ಚೆನ್ನಾಗಿರಲಿ ಎಂದು ರತ್ನ ಧಾರಣೆ ಮಾಡಲು ಸೂಚಿಸುತ್ತಾರೆ. ಈಗ ರಾಶಿಗೆ ಅನುಗುಣವಾಗಿ ರತ್ನ ಧಾರಣೆ ಬಗ್ಗೆ ತಿಳಿಸಲಾಗುವುದು.

ಮೇಷ-ವೃಶ್ಚಿಕ

ಮೇಷ-ವೃಶ್ಚಿಕ

ಈ ಎರಡೂ ರಾಶಿಯವರಿಗೆ ಕುಜ ಅಧಿಪತಿ. ಹವಳ ಧರಿಸಿದರೆ ಉತ್ತಮ. ಇನ್ನು ಹವಳವನ್ನು ಬೆಳ್ಳಿಯಲ್ಲಿ ಧರಿಸಿದರೆ ಉತ್ತಮ ಫಲ. ತ್ರಿಕೋಣದ ಆಕಾರದಲ್ಲಿ ಹವಳವನ್ನು ಆ ವ್ಯಕ್ತಿಯ ದೇಹದ ತೂಕದ ಹತ್ತನೇ ಒಂದು ಭಾಗದಷ್ಟು ತೂಕವಾದರೂ ಅ ರತ್ನ ಇರಬೇಕು ಎಂಬುದು ತಜ್ಞರ ಅಭಿಮತ. ಉದಾಹರಣೆಗೆ ಅರವತ್ತು ಕೇಜಿ ತೂಕದ ವ್ಯಕ್ತಿ, ತೂಕದ ಹತ್ತನೇ ಒಂದು ಭಾಗ. ಅಂದರೆ ಆರು ಕ್ಯಾರೆಟ್ ತೂಕದ ಹವಳವನ್ನು ಧರಿಸಿದರೆ ಉತ್ತಮ ಫಲ ನೀಡುತ್ತದೆ. ಮಂಗಳವಾರದಂದು ಉಂಗುರ ಧಾರಣೆ ಮಾಡಬೇಕು

ವೃಷಭ-ತುಲಾ

ವೃಷಭ-ತುಲಾ

ಈ ಎರಡೂ ರಾಶಿಯವರಿಗೆ ಶುಕ್ರ ಅಧಿಪತಿ. ಆದ್ದರಿಂದ ವಜ್ರ ಧರಿಸಬಹುದು. ಉಂಗುರ ಬೆರಳಿಗೆ ಚಿನ್ನ ಅಥವಾ ಪ್ಲಾಟಿನಂನಲ್ಲಿ ಮಾಡಿಸಿ, ಧರಿಸಬಹುದು. ಶುಕ್ರವಾರದಂದೇ ಉಂಗುರ ಧಾರಣೆ ಮಾಡಬೇಕು

ಮಿಥುನ-ಕನ್ಯಾ

ಮಿಥುನ-ಕನ್ಯಾ

ಈ ಎರಡೂ ರಾಶಿಗೂ ಬುಧ ಅಧಿಪತಿ. ಇವರು ಕಿರುಬೆರಳಲ್ಲಿ ಪಚ್ಚೆ ಧರಿಸಬಹುದು. ನೆನಪಿಡಿ, ಕಿರು ಬೆರಳಲ್ಲಿ ಧರಿಸಿದರೆ ಉತ್ತಮ ಫಲ. ಬುಧವಾರದಂದು ಧರಿಸಬೇಕು.

ಕರ್ಕಾಟಕ

ಕರ್ಕಾಟಕ

ಈ ರಾಶಿಗೆ ಚಂದ್ರ ಅಧಿಪತಿ. ಮುತ್ತನ್ನು ತೋರು ಬೆರಳಲ್ಲಿ ಧರಿಸಿದರೆ ಉತ್ತಮ. ಚಂದ್ರ ಮನಸ್ಸಿನ ಕಾರಕ. ಸೋಮವಾರದಂದು ಧಾರಣೆ ಮಾಡಬೇಕು.

ಸಿಂಹ

ಸಿಂಹ

ಈ ರಾಶಿಗೆ ರವಿ ಕಾರಕ. ಸ್ಟಾರ್ ರೂಬಿ ರತ್ನ ಧರಿಸಿದರೆ ಉತ್ತಮ. ಭಾನುವಾರದಂದು ಉಂಗುರ ಬೆರಳಿಗೆ ಈ ರತ್ನ ಧರಿಸಬೇಕು.

ಧನು-ಮೀನ

ಧನು-ಮೀನ

ಈ ಎರಡೂ ರಾಶಿಗೆ ಗುರು ಅಧಿಪತಿ. ಕನಕ ಪುಷ್ಯರಾಗ ಧಾರಣೆ ಮಾಡಬಹುದು. ಗುರುವಾರದಂದು ತೋರು ಬೆರಳಿಗೆ ಉಂಗುರ ಧರಿಸಬೇಕು.

ಮಕರ-ಕುಂಭ

ಮಕರ-ಕುಂಭ

ಈ ಎರಡೂ ರಾಶಿಗೆ ಶನಿ ಅಧಿಪತಿ. ನೀಲ ಧರಿಸಬಹುದು. ಶನಿವಾರದಂದು ಮಧ್ಯದ ಬೆರಳಿಗೆ ಈ ಉಂಗುರ ಧಾರಣೆ ಮಾಡಬೇಕು. ಬೆಳ್ಳಿಯಲ್ಲಿ ಧರಿಸಿದರೆ ಉತ್ತಮ.

ಎಚ್ಚರಿಕೆ

ಎಚ್ಚರಿಕೆ

ನೀಲ ಹಾಗೂ ವಜ್ರ ಧಾರಣೆ ಮಾಡುವ ಮೊದಲು ಕಡ್ಡಾಯವಾಗಿ ಜ್ಯೋತಿಷಿಗಳ ಬಳಿ ಜಾತಕ ತೆಗೆದುಕೊಂಡು ಹೋಗಿ, ಆಗುಬರುತ್ತದೋ ಇಲ್ಲವೋ ತಿಳಿದುಕೊಂಡು ಆ ನಂತರ ಮುಂದುವರಿಯಿರಿ.

ಎರಡೆರಡು ರತ್ನ ಧರಿಸಿದ್ದರೆ

ಎರಡೆರಡು ರತ್ನ ಧರಿಸಿದ್ದರೆ

ಒಂದು ವೇಳೆ ಎರಡೆರಡು ರತ್ನವನ್ನು ಧರಿಸುವ ಸಂದರ್ಭ ಬಂದರೆ ಆ ಎರಡು ಗ್ರಹಗಳು ಮಿತ್ರರೋ ಶತ್ರುಗಳೋ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಗಂಡ-ಹೆಂಡತಿ ಇಬ್ಬರೂ ಅದೃಷ್ಟ ರತ್ನ ಅಂತ ಧರಿಸಿ, ಆ ಎರಡು ಗ್ರಹಗಳು ಪರಸ್ಪರ ಶತ್ರುಗಳಾಗಿದ್ದರೆ ಆಗ ಜಗಳ ಏರ್ಪಡುವ ಸಾಧ್ಯತೆ ಇರುತ್ತದೆ.

ವಿಧಾನ

ವಿಧಾನ

ಇನ್ನು ರತ್ನ ಧಾರಣೆಗೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅದನ್ನು ಜ್ಯೋತಿಷಿಗಳ ಬಳಿ ತಿಳಿದು ಅನುಸರಿಸಿ. ಉದಾಹರಣೆಗೆ ನೀಲ ರತ್ನವನ್ನು ಕಪ್ಪು ವಸ್ತ್ರದಲ್ಲಿ, ಎಳ್ಳಿನ ಧಾನ್ಯದಲ್ಲಿಟ್ಟು ಪೂಜಿಸಿ ಆ ನಂತರವೇ ಧರಿಸಬೇಕು.

ಸರ್ಟಿಫೈಡ್ ಆಗಿರಬೇಕು

ಸರ್ಟಿಫೈಡ್ ಆಗಿರಬೇಕು

ಈ ರತ್ನಗಳ ಬೆಲೆ ಒಂದೊಂದು ಕಡೆ ಒಂದೊಂದು ಇರುತ್ತದೆ. ಅವುಗಳಿಗೆ ಪ್ರಮಾಣ ಪತ್ರ ಇದೆಯಾ ಎಂದು ಖಚಿತಪಡಿಸಿಕೊಂಡು, ಅವು ಅಸಲಿಯೇ ಎಂಬುದನ್ನು ಖಾತ್ರಿಪಡಿಸಿಕೊಂಡೇ ಧರಿಸಬೇಕು.

ಒಬ್ಬೊಬ್ಬರು ಒಂದೊಂದು ರೀತಿ

ಒಬ್ಬೊಬ್ಬರು ಒಂದೊಂದು ರೀತಿ

ಆಯಾ ದಶಾಕಾಲ, ಜಾತಕದಲ್ಲಿರುವ ಗ್ರಹದ ಸ್ಥಿತಿ ಹಾಗೂ ಜನ್ಮ ದಿನ-ಜನ್ಮ ರಾಶಿ, ಲಗ್ನ ಹೀಗೆ ವಿವಿಧ ಅಂಶಗಳನ್ನು ಗಮನಿಸಿ ರತ್ನವನ್ನು ಧರಿಸುವಂತೆ ಸೂಚನೆ ನೀಡಲಾಗುತ್ತದೆ. ಆದ್ದರಿಂದ ಈ ಬಗ್ಗೆಯೂ ಗಮನವಿರಲಿ.

English summary
According to your birth sign which is your lucky stone? To know the complete details about lucky gems, read this article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X