IRCTC Vaishno Devi Tour Package : ಕೈಗೆಟುಕುವ ದರದಲ್ಲಿ "ಮಾತಾ ವೈಷ್ಣೋದೇವಿ" ಟೂರ್‌ ಪ್ಯಾಕೇಜ್, ದರದ ವಿವರಗಳನ್ನು ತಿಳಿಯಿರಿ

ಐಆರ್‌ಸಿಟಿಸಿಯು ವೈಷ್ಣೋ ದೇವಿಗೆ ಭೇಟಿ ನೀಡಲು ಬಯಸುವವರಿಗೆ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಹಾಗಾದರೆ ಪ್ಯಾಕೇಜ್‌ನ ದರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಗಮನಿಸಿ.

ನವದೆಹಲಿ, ಫೆಬ್ರವರಿ, 22: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್‌ ಅನ್ನು ಘೋಷಣೆ ಮಾಡುತ್ತಿದೆ. ಇದೀಗ ಮತ್ತೆ ಐಆರ್‌ಸಿಟಿಸಿಯು ವೈಷ್ಣೋ ದೇವಿಗೆ ಭೇಟಿ ನೀಡಲು ಬಯಸುವ ಪ್ರಯಾಣಿಕರಿಗೆ ಉತ್ತಮ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಹಾಗಾದರೆ ಈ ಪ್ರವಾಸ ಪ್ಯಾಕೇಜ್‌ ಅನ್ನು ಹೇಗೆ ಪಡೆಯುವುದು? ಯಾವಾಗ ಆರಂಭವಾಗುತ್ತದೆ? ಎಷ್ಟು ಹಣವನ್ನು ಪಾವತಿಸಬೇಕಾಗುತ್ತದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಭಾರತೀಯ ರೈಲ್ವೆಯ ಪ್ರವಾಸೋದ್ಯಮ ವಿಭಾಗವಾದ ಐಆರ್‌ಸಿಟಿಸಿಯು ವೈಷ್ಣೋ ದೇವಿಗೆ ಭೇಟಿ ನೀಡಲು ಬಯಸುವ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್‌ 5 ಹಗಲು ಮತ್ತು ನಾಲ್ಕು ರಾತ್ರಿಯ ಪ್ರವಾಸವನ್ನು ಒಳಗೊಂಡಿದೆ. ಈ ಯಾತ್ರೆ ಮಾಡಲು ಬಯಸುವವರು 8,375 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.

IRCTC Tour Package: Vaishno Devi tour package announcement, Check Price details

ಮಾರ್ಚ್ 2ರಿಂದ ಪ್ರವಾಸ ಆರಂಭ

ಈ ಪ್ರವಾಸವು ಮಾರ್ಚ್ 2, 2023 ರಿಂದ ಪ್ರಾರಂಭವಾಗಲಿದೆ. ಪ್ರಯಾಣಿಕರಿಗೆ ಪೂರಕ ಆಹಾರ, ಸಾರಿಗೆ ಮತ್ತು ವಸತಿ ಸೌಕರ್ಯವನ್ನು ಕೂಡ ನೀಡಲಾಗುತ್ತದೆ. ಪ್ರಯಾಣಿಕರು ವಾರಣಾಸಿಯಿಂದ 12237/12238 ನಂಬರ್‌ನ ರೈಲು ಹತ್ತಬಹುದಾಗಿದೆ. ಮತ್ತು ಪ್ರಯಾಣದ ಸಮಯದಲ್ಲಿ ಉಪಹಾರ ಮತ್ತು ಊಟವನ್ನು ಕೂಡ ಸವಿಯಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ಪ್ರವಾಸಿಗರು ತಂಗಲು ಹೋಟೆಲ್ ಮತ್ತು ಕ್ಯಾಬ್ ವ್ಯವಸ್ಥೆಯನ್ನು ಸಹ ಒದಗಿಸಲಾಗುತ್ತದೆ.

ಪ್ರವಾಸ ಪ್ಯಾಕೇಜ್‌ನ ದರದ ವಿವರ

ಸಿಂಗಲ್‌ ಶೇರಿಂಗ್‌ ಆಕ್ಯುಪೆನ್ಸಿಗೆ ಪ್ಯಾಕೇಜ್‌ನ ಬೆಲೆ ರೂಪಾಯಿ 14,270, ಡಬಲ್ ಶೇರಿಂಗ್ ಆಕ್ಯುಪೆನ್ಸಿಗೆ 9,285 ರೂಪಾಯಿ ಆಗಿರುತ್ತದೆ. ಕೊಠಡಿಯನ್ನು ಹಂಚಿಕೊಳ್ಳುವ ಮೂರು ಜನರಿಗೆ 8,375 ರೂಪಾಯಿ ಆಗುತ್ತದೆ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಹಾಸಿಗೆ ಸಹಿತ ತೆಗೆದುಕೊಂಡರೆ 7,275 ರೂಪಾಯಿ, ಮತ್ತು ಹಾಸಿಗೆ ಇಲ್ಲದೆ 6,780 ರೂಪಾಯಿ ನೀಡಬೇಕಾಗುತ್ತದೆ.

ಪ್ರವಾಸ ಪ್ಯಾಕೇಜ್‌ ಪಡೆಯುವ ವಿವರ

ಈ ಪ್ಯಾಕೇಜ್ ಅನ್ನು ಬುಕ್ ಮಾಡಲು ಆಸಕ್ತರು IRCTC ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಈ ಪ್ಯಾಕೇಜ್‌ ಮಾತಾ ವೈಷ್ಣೋ ದೇವಿ ಯಾತ್ರಾ ಸ್ಥಳಕ್ಕೆ ತಲುಪಲು ಅನುಕೂಲಕರವಾಗಿದೆ. ಮತ್ತು ಪ್ರಯಾಣಿಕರಿಗೆ ಯಾವುದೇ ಹೊರೆಯಾಗದಂತೆ ಪ್ಯಾಕೇಜ್‌ ಅನ್ನು ಘೋಷಿಸಲಾಗಿದೆ. ಈ ಮಾರ್ಗವನ್ನು ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

IRCTC Tour Package: Vaishno Devi tour package announcement, Check Price details

ವಸತಿ ಮತ್ತು ಊಟದ ಬಗ್ಗೆ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಹೀಗೆ ಮಾತಾ ವೈಷ್ಣೋ ದೇವಿಗೆ ಯಾವುದೇ ತೊಂದರೆ ಇಲ್ಲದೇ ಪ್ರಯಾಣವನ್ನು ಮಾಡಬಹುದಾಗಿದೆ. ಕೈಗೆಟುಕುವ ದರದಲ್ಲಿ ಪ್ಯಾಕೇಜ್‌ ಅನ್ನು ಘೋಷಿಸಲಾಗಿದ್ದು, ಹೆಚ್ಚಿನ ಪ್ರಯಾಣಿಕರು ಈ ಯಾತ್ರಾ ಸ್ಥಳದ ಆಧ್ಯಾತ್ಮಿಕ ಮಹತ್ವವನ್ನು ಅನುಭವಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+