Shivamogga Airport: ಶಿವಮೊಗ್ಗದಿಂದ ನವದೆಹಲಿ, ಶಿರಡಿ, ಮುಂಬೈ, ಅಹಮದಾಬಾದ್‌ಗೆ ವಿಮಾನ ಸೇವೆ ಆರಂಭಕ್ಕೆ ಬೇಡಿಕೆ

Shivamogga Airport: ಸೋಗಾನೆಯಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೆಚ್ಚು ಭಾಗಗಳಿಗೆ ವಿಮಾನ ಸೇವೆ ಇಲ್ಲ ಎನ್ನುವ ಕೊರಗು ಇತ್ತು. ಆದರೆ ಇದೀಗ ಇದೇ ವಿಮಾನ ನಿಲ್ದಾಣದಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನ ಆರಂಭಿಸುವಂತೆ ಬೇಡಿಕೆ ಇಡಲಾಗಿದೆ. ಹಾಗಾದರೆ, ಯಾವ್ಯಾವ ಮಾರ್ಗಗಳಿಗೆ ಬೇಡಿಕೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ವಿಮಾನ ನಿಲ್ದಾಣದಿಂದ ದೇಶದ ಪ್ರಮುಖ ನಿಲ್ದಾಣಗಳಿಗೆ ವಿಮಾನ ಸಂಚಾರ ಆರಂಭಿಸುವಂತೆ ಬೇಡಿಕೆ ಬರುತ್ತಿದೆ. ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರು ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ಏರ್‌ ಲೈನ್ಸ್‌, ಸ್ಪೆತ್ರೖಸ್‌ ಜೆಟ್‌ ಏರ್‌ಲೈನ್ಸ್‌ ಮತ್ತು ಸ್ಟಾರ್‌ ಏರ್‌ಲೈನ್ಸ್‌ ಸಂಸ್ಥೆಗಳು ಬೆಂಗಳೂರು, ಚೆನ್ನೈ, ಹೈದ್ರಾಬಾದ್‌, ತಿರುಪತಿ, ಗೋವಾಕ್ಕೆ ಪ್ರತಿದಿನ ವಿಮಾನ ಹಾರಾಟ ನಡೆಯುತ್ತಿದೆ. ಈ ಮೂಲಕ ಪ್ರಯಾಣಿರ ಸಮಯವನ್ನು ಉಳಿತಾಯ ಆಗುತ್ತಿದೆ.

Demand for Direct Flights Service from Shivamogga to New Delhi Shirdi Mumbai and Ahmedabad

ಈಗಾಗಲೇ ಶಿವಮೊಗ್ಗದಿಂದ 5 ಕಡೆಗಳಿಗೆ ವಿಮಾನ ಸೇವೆ ಆರಂಭ ಆಗಿದ್ದು, ಜನಮನ್ನಣೆ ಪಡೆದುಕೊಂಡಿವೆ. ಇನ್ನು ಇದರ ನಡುವೆಯೇ ಇದೀಗ ದೇಶದ ಬೇರೆ ಬೇರೆ ನಗರಗಳಿಗೆ ವಿಮಾನ ಸೇವೆ ಆರಂಭ ಮಾಡುವಂತೆ ಎಂದು ಸಂಸದರು ಎಂದು ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಉಡಾನ್‌ ಯೋಜನೆಯಡಿ ಶಿವಮೊಗ್ಗ-ನವದೆಹಲಿ-ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸಲು ಅನುಮತಿ ಕೋರಲಾಗಿದೆ. ಅಲ್ಲದೆ, ಮಂಬೈ -ಶಿವಮೊಗ್ಗ, ಶಿರಡಿ -ಶಿವಮೊಗ್ಗ-ಶಿರಡಿ, ಬೆಂಗಳೂರು -ಶಿವಮೊಗ್ಗ-ಮುಂಬೈ-ಅಹಮದಾಬಾದ್‌ ಮಾರ್ಗಗಳು ಹೆಚ್ಚಿನ ಸಾಮರ್ಥ್ಯ ಹೊಂದಿವೆ ಎಂದು ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಸ್ಥಳಗಳಿಗೆ ಆರ್‌ಸಿಎಸ್‌ ಉಡಾನ್‌ ಯೋಜನೆಯಡಿ ಅವಕಾಶ ಕಲ್ಪಿಸುವಂತೆ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು 2023 ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದರು. ಇನ್ನು ಈ ವಿಮಾನ ನಿಲ್ದಾಣವನ್ನು ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣವು ಕನಿಷ್ಠ ವೆಚ್ಚದಲ್ಲಿ ನಿರ್ಮಿಸಿದ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಇಲ್ಲಿ ವಿಮಾನಗಳು ರಾತ್ರಿ ಇಳಿಯುವಂತಹ ಸುಧಾರಿತ ಸೌಲಭ್ಯಗಳನ್ನು ಹೊಂದಿದೆ.

500 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಲ್ಲಿ 3.50 ಕಿಲೋ ಮೀಟರ್‌ ರನ್‌ ವೇ, ಕಾಂಪೌಂಡ್‌, ಕಾಂಪೌಂಡ್‌ಗೆ ಹೊಂದಿಕೊಂಡಂತೆ ರಸ್ತೆಗಳು, ನಿಲ್ದಾಣಕ್ಕೆ ಒಂದು ಕಿಲೋ ಮೀಟರ್‌ ಸಂಪರ್ಕ ರಸ್ತೆ, ವಿಮಾನಗಳು ನಿಲುಗಡೆ ಆಗುವಂತಹ ಏಪ್ರಾನ್‌, 100 ಕೆ.ವಿ. ಸಾಮಥ್ಯದ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕ, ಉಪ ವಿದ್ಯುತ್‌ ಘಟಕ, ಕೊಳಚೆ ನೀರು ಶುದ್ಧೀಕರಣ ಘಟಕ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+