• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ನಾವೆಲ್ಲ ಸೇರಿ ಝೊಮ್ಯಾಟೊ ಡೆಲಿವರಿ ಬಾಯ್ ನ ಅನ್ನ ಕಿತ್ಕೊಬಾರ್ದಿತ್ತು'

By ಹೆಬ್ಬುಲಿ ರಮ್ಮಿ ಖಾರ್ವಿ
|

ಝೊಮ್ಯಾಟೊ ಡೆಲಿವರಿ ಬಾಯ್ ವೊಬ್ಬರ ವಿಡಿಯೋ ವೈರಲ್ ಹಾಗೂ ಆ ನಂತರದ ಬೆಳವಣಿಗೆ ಬಗ್ಗೆ ಫೇಸ್ ಬುಕ್ ನಲ್ಲಿ ಮಾಡಿದ್ದ ಪೋಸ್ಟ್ ಅನ್ನು ಪ್ರಕಟಿಸಲಾಗುತ್ತಿದೆ. ಇದು ಲೇಖಕರ ಅಭಿಪ್ರಾಯವೇ ಹೊರತು ಇದಕ್ಕೆ ಒನ್ ಇಂಡಿಯಾ ಕನ್ನಡ ಜವಾಬ್ದಾರ ಅಲ್ಲ- ಸಂಪಾದಕ

***

ನಿನ್ನೆ ಒಬ್ರು Zomato ಡೆಲಿವರಿಯವರು ಅವರ ಪಾರ್ಸೆಲ್ ನಿಂದ ಊಟ ಕದ್ದು ತಿಂದರು ಎಂದು ಬಂದಿರೋ ವಿಡಿಯೋನ Social networkನಲ್ಲಿ ಜನ ಶೇರ್ ಮಾಡಿದ್ದೇ ಮಾಡಿದ್ದು. ಅಷ್ಟಕ್ಕೂ ಆ ವ್ಯಕ್ತಿಯೇ ಸ್ಪಷ್ಟನೆ ಕೊಟ್ಟಿದ್ದಾರೆ: ನಾನು ತಿಂದಿರೊ ಊಟ ಅದು‌ ಕಸ್ಟಮರ್ cancel ಮಾಡಿದ ಐಟಮ್. ಆಗ ನಂಗೆ ಬೇರೆ ಒಂದು ಆರ್ಡರ್ ಬಂತು. ಹಾಗಾಗಿ ತಿಂದು ನಾನದನ್ನು ಅಲ್ಲೇ ಇಟ್ಟೆ ಎಂದು.

ನನ್ನಲ್ಲಿ ನಿನ್ನೆಯಿಂದ ಈ ವಿಷಯದಲ್ಲಿ ಅವ ತಪ್ಪೇ ಮಾಡಿದ್ದಾನೆ ಎಂದು ವಾದ ಮಾಡಿದವರಿಗೆ ಒಂದು ಸ್ಪಷ್ಟನೆ. Online food ಪ್ಯಾಕೆಟ್ ಪ್ಯಾಕ್ ಮಾಡಿಯೇ ಕಳಿಸ್ತಾರೆ. ಕೆಲವು ರೈಸ್ ಐಟಮ್ ಗಳು ಮಾತ್ರ ಪ್ಲಾಸ್ಟಿಕ್ ಡಬ್ಬದಲ್ಲಿ ಬರ್ತವೆ. ಒಂದು ವೇಳೆ ಅದರಲ್ಲಿ ಸಣ್ಣ ವ್ಯತ್ಯಾಸ ಆದರೂ ಕಸ್ಟಮರ್ ಗೆ ಗೊತ್ತಾಗುತ್ತದೆ. ಆಗ ಅವನು ಕಂಪ್ಲೇಂಟ್ ಮಾಡ್ಬಹುದು.

ಅರ್ಧಂಬರ್ಧ ತಿಂದು ಆಹಾರ ಡೆಲಿವರಿ ಮಾಡ್ತಿದ್ದ ಝೊಮಾಟೊ ನೌಕರ ಅಮಾನತು

ಅದು ಬಿಟ್ಟು ಅವ ಕದ್ದೇ ತಿಂದದ್ದು ಎಂದು ಪ್ರೂ ಮಾಡೋದಲ್ಲ. ಅಲ್ಲಿನ ಪರಿಸ್ಥಿತಿ ಹಾಗಿರ್ಬಹುದು. ಒಂದು ವೇಳೆ ಅವ ಕದ್ದು ತಿಂದಿದ್ರೂ ಅದಕ್ಕೆ ಕ್ಷಮೆ ಇತ್ತು. ಯಾಕಂದ್ರೆ ಅವ ಕೋಟಿ ಕೋಟಿ ನುಂಗಿದ್ದಲ್ವಲ್ಲ.

ಕೆಲವು ತಿಂಗಳ ಹಿಂದೆ ಕೇರಳದಲ್ಲಿ ಮಹಾನ್ ಮಾನವತಾವಾದಿ ಮುಖವಾಡ ಹಾಕಿದ ಕಮ್ಯುನಿಸ್ಟರು ಮಧು ಎಂಬ ಮನುಷ್ಯನನ್ನು ಹೊಡೆದು ಕೊಂದದ್ದು, ಕದ್ದು ಊಟ ಮಾಡಿದ ಎಂದು ಆ ವೀಡಿಯೋ ಶೇರ್ ಮಾಡಿ ನಮ್ಮ ಜನ‌ ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ಅವನನ್ನು ಕೊಲ್ಬಾರ್ದಿತ್ತು ಎಂದು. ಹಾಗಾದರೆ ಈ ವಿಡಿಯೋ ಶೇರ್ ಮಾಡುವವರಿಗೂ ಆ ಹೊಡೆದು ಕೊಂದವರಿಗೂ ಏನೂ ವ್ಯತ್ಯಾಸ ಇಲ್ಲ.

ಇದು ಕೂಡಾ ಯಾರೋ ಒಬ್ಬ ಮಾಡಿದ ವಿಡಿಯೋದಿಂದ ಆ ಊಟ ಮಾಡಿದ ವ್ಯಕ್ತಿ ಎಷ್ಟು ಮಾನಸಿಕ ಹಿಂಸೆ ಅನುಭವಿಸುವಂತಾಯಿತು. ಅವರು ಕೊಡೋ ಚಿಲ್ಲರೆ ಸಂಬಳಕ್ಕೆ ಆ ಬಿಸಿಲಲ್ಲಿ ಹತ್ತೇ ನಿಮಿಷಕ್ಕೆ ನಿಮಗೆ ಆಹಾರ ತಲುಪಿಸ್ತಾರಲ್ವ ಅವರಿಗೆ ನಾವು ಕೊಡೋ ಉಡುಗೊರೆ ಇದು.

'ಡಾಮಿನೋಸ್ ಪಿಜ್ಜಾಸ್ ನಲ್ಲಿ ಆಗ ನಾನು ಹಾಗೆ ಮಾಡಿದ್ದೆ'

ಮಲಯಾಳಂನಲ್ಲಿ Ustad hotel ಅಂತ ಒಂದು ಸಿನಿಮಾ ಇದೆ. ನೋಡಿ. ಅದ್ರಲ್ಲಿ ಒಬ್ಬ ಹಸಿವು ತಾಳಲಾರದೆ ತಾನು ಮಾಡಿದ ಮಲವನ್ನೇ ತಿಂತಾನೆ. ಅದನ್ನು ಕೇಳೋದಕ್ಕೆ ಅಸಹ್ಯ. ಅದು ಸಿನಿಮಾ ಮಾತ್ರ ಅಲ್ಲ, ನಿಜ ಕೂಡಾ. ಈಗಲೂ ಇದೆಯಂತೆ ಅದು ನಮ್ಮ ಭಾರತದಲ್ಲಿ.

ಅಷ್ಟಕ್ಕೂ ಅ ವ್ಯಕ್ತಿ ಅಪರಾಧಿಯೇನೂ ಅಲ್ಲ. ಅವ ಊಟ ಮಾಡಿದ್ದಷ್ಟೇ. ಜಗತ್ತಿನಲ್ಲಿ ನೀನು ಯಾವ ವಸ್ತು ಕೊಟ್ಟರೂ ಜನ ಸಾಕು ಅನ್ನಲ್ಲ. ಆದ್ರೆ ಊಟ ಹಾಗಲ್ಲ. ಹೊಟ್ಟೆ ತುಂಬಿದ ಮೇಲೆ ಸಾಕು ಅಂತೀವಿ. ಅದೇ ಅದರ ವಿಶೇಷತೆ. ಆದ್ರೆ ನಾವಿನ್ನೊಬ್ರಿಗೆ ಊಟ ಕೊಡ್ಬೇಕು. ಅದನ್ನು ಕಿತ್ಕೊಳ್ಳೊದಕ್ಕೆ ಹೋಗ್ಬಾರ್ದು.

ಈಗ ಈ ವಿಡಿಯೋದಿಂದ ಅವನ ಅನ್ನವನ್ನೇ ಕಿತ್ಕೊಂಡಿದ್ದೇವೆ ನಾವುಗಳು.

English summary
We should not did this to Zomato delivery boy, this is the reaction of a reader to Zomato delivery boy video news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X