ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರೀ ಕುತೂಹಲ ಮೂಡಿಸಿದ್ದ ನಂಜನಗೂಡಿನ ಕೊರೊನಾ ಪ್ರಕರಣ ರಹಸ್ಯ ಬಯಲು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 26: ಮೈಸೂರು ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗಿದ್ದು, ನಂಜನಗೂಡಿನ 35 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಇರುವುದಾಗಿ ತಿಳಿದುಬಂದಿತ್ತು. ಆದರೆ ಈ ವ್ಯಕ್ತಿ ಬೇರೆ ಯಾವುದೇ ದೇಶಕ್ಕೆ ಹೋಗದೇ ಇದ್ದರೂ ಕೊರೊನಾ ಸೋಂಕು ತಗುಲಿದ್ದು ಭಾರೀ ಕುತೂಹಲ ಮೂಡಿಸಿತ್ತು. ಅದು ಹೇಗೆ ಈತನಲ್ಲಿ ಕೊರೊನಾ ಸೋಂಕು ಕಂಡುಬಂದಿತು ಎಂಬ ಪ್ರಶ್ನೆಯೇ ಎಲ್ಲರನ್ನೂ ಕಾಡಿತ್ತು.

ನಂಜನಗೂಡಿನ ಕೈಗಾರಿಕಾ ಪ್ರದೇಶದ ಔಷಧಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈ ಸೋಂಕಿತ ವ್ಯಕ್ತಿಯ ಸೋಂಕಿನ ಮೂಲದ ಸುಳಿವು ಸಿಕ್ಕಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ...

 ನಂಜನಗೂಡು ಮೂಲದ ವ್ಯಕ್ತಿಗೆ ಕೊರೊನಾ; ಮೈಸೂರಿನಲ್ಲಿ 3 ಕೇಸ್ ನಂಜನಗೂಡು ಮೂಲದ ವ್ಯಕ್ತಿಗೆ ಕೊರೊನಾ; ಮೈಸೂರಿನಲ್ಲಿ 3 ಕೇಸ್

 ಹೊರದೇಶಕ್ಕೆ ಹೋಗಿಲ್ಲ, ಆದರೂ ಕೊರೊನಾ ಹೇಗೆ?

ಹೊರದೇಶಕ್ಕೆ ಹೋಗಿಲ್ಲ, ಆದರೂ ಕೊರೊನಾ ಹೇಗೆ?

ಸೋಂಕಿಗೆ ಒಳಪಟ್ಟಿರುವ ಈ ವ್ಯಕ್ತಿ ಯಾವುದೇ ಬೇರೆ ದೇಶಕ್ಕೆ ಹೋದವರಲ್ಲ. ಆದರೂ ಇವರಿಗೆ ಸೋಂಕು ತಗುಲಿತ್ತು. ಕೆಲಸದಲ್ಲಿ ದಿನನಿತ್ಯ ಹಲವರೊಂದಿಗೆ ಸಂಪರ್ಕದಲ್ಲಿರಬೇಕಾಗಿತ್ತು. ಕೆಲಸದ ನಿಮಿತ್ತ ವೈದ್ಯರೊಂದಿಗೆ ಸಂಪರ್ಕವೂ ಇತ್ತು. ಈ ಎಲ್ಲವನ್ನೂ ಪರಿಶೀಲಿಸಿ ಸೋಂಕಿನ ಮೂಲ ಯಾವುದು ಎನ್ನುವುದನ್ನು ಪತ್ತೆ ಹಚ್ಚುವ ಕೆಲಸ ನಡೆದಿತ್ತು. ಆದರೆ ಮೂಲ ಹಾಗೂ ನಿಖರ ಕಾರಣ ಮಾತ್ರ ತಿಳಿದುಬಂದಿರಲಿಲ್ಲ.

ಸಂಪರ್ಕದಲ್ಲಿದ್ದ ಏಳು ಮಂದಿಗೆ ಹೋಂ ಕ್ವಾರಂಟೈನ್

ಸಂಪರ್ಕದಲ್ಲಿದ್ದ ಏಳು ಮಂದಿಗೆ ಹೋಂ ಕ್ವಾರಂಟೈನ್

ಈಗಾಗಲೇ ಆಸ್ಪತ್ರೆಯಲ್ಲಿ ಈ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡುತ್ತಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದ್ದಾರೆ. ಈತ ಏಳು ಜನರ ಜೊತೆ ಪ್ರಾಥಮಿಕವಾಗಿ ಸಂಪರ್ಕ ಹೊಂದಿರುವುದು ತಿಳಿದುಬಂದಿದ್ದು, ಆ ಏಳು ಮಂದಿಗೂ ಹೋಂ ಕ್ವಾರಂಟೈನ್ ‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಯನ್ನು ಸದ್ಯ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಆಸ್ಟ್ರೇಲಿಯಾ ಸ್ನೇಹಿತನೊಂದಿಗೆ ಸಂಪರ್ಕ

ಆಸ್ಟ್ರೇಲಿಯಾ ಸ್ನೇಹಿತನೊಂದಿಗೆ ಸಂಪರ್ಕ

ನಂಜನಗೂಡಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಸ್ನೇಹಿತ ಆಸ್ಟ್ರೇಲಿಯಾದಿಂದ ಬಂದಿದ್ದು, ಆತ ಇವರ ಕೋಣೆಯಲ್ಲಿ ಸ್ವಲ್ಪ ದಿನಗಳ ಹಿಂದೆ ಉಳಿದುಕೊಂಡಿದ್ದ ಎಂಬ ಮಾಹಿತಿ ಲಭಿಸಿದೆ. ಕೊರೊನಾ ತಗುಲಲು ಇದೇ ಕಾರಣ ಎಂದು ಅಂದಾಜಿಸಲಾಗಿದೆ. ಹೀಗಾಗಿ ವಿದೇಶದ ಸಂಪರ್ಕದಲ್ಲಿಲ್ಲದಿದ್ದರೂ ಅದು ಹೇಗೆ ಈ ವ್ಯಕ್ತಿಗೆ ಕೊರೊನಾ ತಾಗಿತು ಎಂಬ ಗೊಂದಲಕ್ಕೂ ತೆರೆ ಬಿದ್ದಿದೆ.

ಕಗ್ಗಂಟಾದ ಸಂಪರ್ಕಿತ ವ್ಯಕ್ತಿಗಳ ಲೆಕ್ಕಾಚಾರ

ಕಗ್ಗಂಟಾದ ಸಂಪರ್ಕಿತ ವ್ಯಕ್ತಿಗಳ ಲೆಕ್ಕಾಚಾರ

ಈತನಿಗೆ ಕೊರೊನಾ ಸೋಂಕು ತಗುಲಬಹುದಾದ ಯಾವುದೇ ಕಾರಣಗಳೂ ಇಲ್ಲದ್ದರಿಂದ ಮುಂಜಾಗ್ರತಾ ಕ್ರಮವನ್ನೂ ವಹಿಸಲಾಗಿರಲಿಲ್ಲ. ಆದರೆ ಇದೀಗ ಸೋಂಕು ದೃಢಪಟ್ಟಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಈತ ಸಂಪರ್ಕದಲ್ಲಿರಬಹುದಾದ ವ್ಯಕ್ತಿಗಳ ಲೆಕ್ಕಾಚಾರವೂ ಸ್ಪಷ್ಟವಾಗುವುದು ಸವಾಲಿನ ಕೆಲಸವೇ ಆಗಿದೆ. ಅಂದಾಜಿನ ಮೂಲಕ ಕೆಲವರನ್ನು ಗುರುತಿಸಬಹುದಾಗಿದ್ದು, ಗುರುತಿಸುವಿಕೆ ಕೆಲಸವೂ ಕಗ್ಗಂಟಾಗಲಿದೆ.

ಮೈಸೂರಿನಲ್ಲಿ ಒಟ್ಟು ಮೂರು ಪ್ರಕರಣ

ಮೈಸೂರಿನಲ್ಲಿ ಒಟ್ಟು ಮೂರು ಪ್ರಕರಣ

ನಂಜನಗೂಡಿನ ಈ ವ್ಯಕ್ತಿಯೂ ಸೇರಿ ಒಟ್ಟು ಜಿಲ್ಲೆಯಲ್ಲಿ ಮೂರು ಕೊರೊನಾ ಪ್ರಕರಣ ದಾಖಲಾಗಿದೆ. ಮೊದಲು ದುಬೈನಿಂದ ಇಲ್ಲಿಗೆ ಬಂದಿದ್ದ 35 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಇದೇ ಮೊದಲ ಪ್ರಕರಣವಾಗಿತ್ತು. ನಂತರ ಮಾರ್ಚ್ 23 ರಂದು ದುಬೈನಿಂದ ಬಂದಿದ್ದ ಕೇರಳ ಮೂಲದ ವ್ಯಕ್ತಿಗೆ ಸೋಂಕು ಇರುವುದು ಕಂಡುಬಂದಿತ್ತು. ಇದೀಗ ನಂಜನಗೂಡು ನಿವಾಸಿಯಲ್ಲಿ ಈ ಸೋಂಕು ಕಂಡುಬಂದಿದ್ದು, ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಎರಡು ಮೂರು ದಿನಗಳ ಅಂತರದಲ್ಲೇ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೂ ಕಾರಣವಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಕಷ್ಟದ ದಿನಗಳು ಎದುರಾಗುವ ಕಾರಣದಿಂದ ಜಿಲ್ಲಾಡಳಿತ ಕಟ್ಟೆಚ್ಚರ ಸೂಚಿಸಿದೆ. ಲಾಕ್ ಡೌನ್ ಗೆ ಜನರು ಸಹಕರಿಸಿ, ತಮ್ಮ ತಮ್ಮ ಮನೆಯಲ್ಲೇ ಇದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದೆ.

English summary
One More Coronavirus Positive Case Reporte In Mysuru Total 3 Affected In District
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X