• search
For Quick Alerts
ALLOW NOTIFICATIONS  
For Daily Alerts

  ದುಬೈ, ಯುಎಇನಲ್ಲಿ ಅಣ್ಣಾಬಾಂಡ್ ಬಿಡುಗಡೆ

  |
  Kannada Movie Anna Bond Release
  ಕರ್ನಾಟಕ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿರುವ ಪುನೀತ್ ರಾಜ್ ಕುಮಾರ್ ಅಭಿನಯ ಹಾಗೂ ಸೂರಿ ನಿರ್ದೇಶನದ 'ಅಣ್ಣಾಬಾಂಡ್' ಚಿತ್ರವು ಇಂದಿನಿಂದ (ಮೇ 03, 2012) 'ದುಬೈ' ಮತ್ತು 'ಯುಎಇ'ನಲ್ಲೂ ಪ್ರದರ್ಶನ ಕಾಣುತ್ತಿದೆ. ದುಬೈ ಮತ್ತು ಯುನೈಟೆಡ್ ಅರಬ್ ಎಮಿರೇಟ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ಅಲ್ಲಿನ ಕನ್ನಡಿಗರ ಕುತೂಹಲವನ್ನು ತಣಿಸಲಿದೆ.

  ಈ ಮೊದಲು ಮೇ 1 ರಂದೇ ವಿದೇಶಗಳಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತಾದರೂ ಎರಡು ದಿನ ತಡವಾಗಿ ಅಲ್ಲಿ ಬಿಡುಗಡೆ ಕಾಣುತ್ತಿದೆ. ಅಲ್ಲಿನ 3 ಚಿತ್ರಮಂದಿರಗಳಲ್ಲಿ ಅಣ್ಣಾಬಾಂಡ್ ಪ್ರದರ್ಶನವಾಗಲಿದ್ದು ಅಲ್ಲಿರುವ ಕನ್ನಡಿಗರಿಗೆ ವೀಕೆಂಡಿನಲ್ಲಿ (ದುಬೈನಲ್ಲಿ ಶುಕ್ರವಾರ ವಾರದ ರಜಾ ದಿನ) ಹಬ್ಬದೂಟ ಕಾದಿದೆ. ಚಿತ್ರವಿಮರ್ಶೆ ಓದಿ...

  ಪುನೀತ್ ರಾಜ್ ಕುಮಾರ್, ಪ್ರಿಯಾಮಣಿ ಹಾಗೂ ನಿಧಿ ಸುಬ್ಬಯ್ಯ ಮುಖ್ಯ ಭೂಮಿಕೆಯಲ್ಲಿರುವ ಅಣ್ಣಾಬಾಂಡ್ ಚಿತ್ರದಲ್ಲಿ ರಂಗಾಯಣ ರಘು, ಅವಿನಾಶ್ ಹಾಗೂ ನೀನಾಸಂ ಸತೀಶ್ ಪ್ರಮುಖ ಪೋಷಕವರ್ಗದಲ್ಲಿದ್ದಾರೆ. ಸತ್ಯ ಹೆಗಡ ಕೆಮರಾ ಹಾಗೂ ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ರಾಘವೇಂದ್ರ ರಾಜ್ ಕುಮಾರ್ ಈ ಚಿತ್ರದ ನಿರ್ಮಾಪಕರು.

  ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
  ಶೇಖರ್- 055 5304576
  ಸಂಜೀವ್- 055 6544989
  ಗಂಗಾಧರ್- 050 4586228
  ಶ್ರೀನು- 055 3133563
  ರಾಜಣ್ಣ- 055 5441337
  ಜಗನ್ನಾಥ್ ಬಳ್ಳಾರಿ (ಮೊಬೈಲ್)- 055 6675350
  (ಒನ್ ಇಂಡಿಯಾ ಕನ್ನಡ)

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Good news for Kannada Movie Lovers. First time in Dubai and UAE, Puneeth Rajkumar's Anna Bond Releasing on 03 May 2012. For details, please contact under mentioned contact numbers.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more