ಅಮೆರಿಕಾದಲ್ಲಿ ಮಂಜನ ಹೆಂಡತಿಯ ಕಣ್ಣೀರು
ಅವನಿಗೆ ಬೆಳಗ್ಗೆ ಹೊತ್ತು ಎದ್ದೇ ಗೊತ್ತಿಲ್ಲ. ಬೇಗಬೇಗ ಎದ್ದು ಕೆಲಸಕ್ಕೆ ಹೋಗಬೇಕು, ಸಂಪಾದನೆ ಮಾಡಬೇಕು, ಸಂಸಾರ ತೂಗಿಸಬೇಕು ಎನ್ನುವ ಜಸ್ಟ್ ಒಂದು ಕಲ್ಪನೆ ಕೂಡಾ ಅವನ ಜನ್ಮಕುಂಡಲಿಯಲ್ಲಿ ಬರೆದಿಲ್ಲ. ಯಾವಗಲೋ ಮಲಗಿದ, ಯಾವಾಗಲೋ ಎದ್ದರೆ ಎದ್ದ. ಎದ್ದ ನಂತರ ಕಾಫಿ ಟಿ ಕುಡಿಯುವ ಗೋಜಿಗೂ ಅವನು ಹೋಗುವುದಿಲ್ಲ. ಒಂದು ಕ್ವಾರ್ಟರ್ ರಮ್ ಅಥಪಾ ವಿಸ್ಕಿ ಸಿಕ್ಕರೆ ಲಬಕ್ ಅಂತ ಕುಡಿದು ತನ್ನಂತೆ ಕೆಲಸಮಾಡದ ಸ್ನೇಹಿತರನ್ನು ಹುಡುಕಿಕೊಂಡು ಹೋಗುವನು. ಅವರ ಜತೆ ಬುರುಡೆ ಹೊಡೆಯುತ್ತಾ ಕಾಲ ಕಳೆದು ಮತ್ತೆ ರಾತ್ರಿ ಕುಡಿದು ಮನೆಗೆ ಬಂದು ಬಿದ್ದುಕೊಳ್ಳುವುದು ಅವನ ಡೈಲಿ ರೊಟೀನು.
ಹಾಗಂತ ಅವನು ತೀರಾ ಕೆಲಸಕ್ಕೇ ಬಾರದ ಆಸಾಮಿಯೇನೂ ಅಲ್ಲ. ಸಖತ್ ಡೈಲಾಗುಗಳನ್ನು ಹೊಡೆಯುತ್ತಾನೆ. ಸಮಾಜದ ಬಗ್ಗೆ ಇದಮಿತ್ಥಂ ಎಂಬಂಥ ಫಿಲಸಾಫಿಕಲ್ ಒಪೀನಿಯನ್ನುಗಳನ್ನು ಬೇಜಾನ್ ಕೊಡಬಲ್ಲ. ಚುಟುಕಾದ ಹಾಸ್ಯ ಪ್ರಸಂಗಳನ್ನು ಸೃಷ್ಟಿಸಿ ಜನರನ್ನು ಕ್ಷಣ ನಗಿಸಬಲ್ಲ ವಿದ್ಯೆಯೂ ಅವನಿಗೆ ಕರಗತವಾಗಿದೆ.
ಅವನ ಹೆಸರು ಮಂಜುನಾಥ. ಮಂಜ ಮಂಜ ಎಂದು ಜನ ಅವನನ್ನು ಕರೆಯುವರು. ಇಸ್ಪೀಟು ಆಡುವುದು, ಕುಡಿಯುವುದು, ಜನರಿಂದ ಸಾಲ ಕೀಳುವುದು ಅವನಿಗೆ ನೀರು ಕುಡಿದಷ್ಟು ಸುಲಭ. ಇಂಥ ಅನೇಕರನ್ನು ನೀವು ನೋಡಿರಬಹುದು. ಆದರೆ, ನಮ್ಮ ಮಂಜ ಇದಾನಲ್ಲಾ, ಅವನಿಗೆ ಅವನೇ ಸಾಟಿ. ಇಂಥ ಉಗ್ರ ಪ್ರತಾಪಿ ಮಂಜನಿಗೆ ಮದುವೇ ಬೇರೆ ಕೇಡು ಎಂದು ನೀವು ರಿಯಾಕ್ಟ್ ಮಾಡುವ ಹಾಗಿಲ್ಲ. ಯಾಕೆಂದರೆ ಆಗಲೇ ಅವನಿಗೆ ಮದುವೆ ಆಗಿದೆ.
ವಿಡಿಯೋ: ಎದ್ದೇಳು ಮಂಜುನಾಥ ಟ್ರೈಲರ್
ಹೆಂಡತಿಯನ್ನು ಗೋಳುಹುಯ್ದುಕೊಳ್ಳುವುದು, ಅವಳ ಕಣ್ಣಲ್ಲಿ ಸದಾ ನೀರು ತರಿಸುವುದೇ ಅವನ ಹಾಬಿ. ಇಂಥ ಮಂಜನ ಹೆಂಡತಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡ ಕಲಾವಿದೆ ಯಜ್ಞಾಶೆಟ್ಟಿ. ಜಗ್ಗೇಶ್ ಮಂಜನಾಗಿಯೂ, ಯಜ್ಞಾಶೆಟ್ಟಿ ಅವನ ಅರ್ಧಾಂಗಿಯಾಗಿಯೂ ನಟಿಸಿದ ಎದ್ದೇಳು ಮಂಜುನಾಥ ಚಿತ್ರದ ಎರಡು ಶೋ ಅಮೆರಿಕಾದಲ್ಲಿ ಏರ್ಪಾಟಾಗಿದೆ. ಬೇ ಏರಿಯಾದ ಕನ್ನಡ ಮಂದಿ ಈ ವಾರಾಂತ್ಯ ನೋಡಿ ಆನಂದಿಸಬಹುದು. ಮಹಿಳಾ ದಿನಾಚರಣೆ ಸಂದರ್ಭ ಅಂದುಕೊಂಡು ಈ ಸಿನಿಮಾ ನೋಡಿ ನಾಕು ಹನಿ ಕಣ್ಣೀರು ಹಾಕಿದರೆ ಅಲ್ಲಿಗೆ ಹೆಂಗಸರು ಮತ್ತು ಗಂಡಸರ ಜೀವನ ಈ ವಾರ ಸಾರ್ಥಕವಾಗುವುದು.
6 ನೆ ತಾರೀಕು ಶನಿವಾರ ಎರಡು ಶೋ, 7 ಭಾನುವಾರ ಒಂದು ಶೋ.
"EDDELU MANJUNATHA" (Kannada) DTS SOUND
Cast:Jaggesh, Yagna Shetty, Tabala Naani, V. Manohar, A.S. Murthy and others:
Producer: V Sanat Kumar productions
Music: Anoop Seelin
Directed By: Guru Prasad
Ticket Price, Adult:$ 8.0
Ticket Price, Child :$ 5.0
ಟಿಕೇಟುಗಳಿಗೆ ಇಲ್ಲಿ ನೋಡಿ: http://www.serratheatres.com/home.do?param=5











Click it and Unblock the Notifications