3 ತಲಾಖ್ ಅಮಾನುಷ ಕಾನೂನು ಕೊನೆಗೆ ಅಂತ್ಯವಾಗಿದೆ: ಶೋಭಾ

Posted By:
Subscribe to Oneindia Kannada

ಉಡುಪಿ, ಆಗಸ್ಟ್ 23: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 71 ವರ್ಷಗಳ ಬಳಿಕ ಮುಸ್ಲಿಂ ಮಹಿಳೆಯರಿಗೆ ಸ್ವಾತಂತ್ರ್ಯದ ಜತೆಗೆ 1400 ವರ್ಷಗಳ ಸಾಮಾಜಿಕ ಪೀಳಿಗೆಗೆ ಪೂರ್ಣ ವಿರಾಮ ಬಿದ್ದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಶೋಭಾ ಅಕ್ಕಿ ಭಿಕ್ಷೆಗಾಗಿ ದಿನವೂ ತೆರಳಲಿ : ಸಚಿವ ಯು.ಟಿ ಖಾದರ್ ವ್ಯಂಗ್ಯ

ತಲಾಖ್ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯಿಸಿರುವ ಅವರು. " ಮೂರು ತಲಾಖ್ ನಿಂದ ಪತ್ನಿಯನ್ನು ಅನಾಥವಾಗಿ ಮಾಡುವ ಅಮಾನುಷ ಕಾನೂನು ಕೊನೆಗೆ ಅಂತ್ಯವಾಗಿದೆ" ಎಂದರು.

Udupi MP Shobha karandlaje happy about SC verdict on triple talaq

ದೇಶದ ಸುಪ್ರೀಂ ಕೋರ್ಟಿನ ಈ ಐತಿಹಾಸಿಕ ಚಾರಿತ್ರಿಕ ನಿರ್ಧಾರವು ದೇಶದ 125 ಕೋಟಿ ಜನರ ಗೌರವವನ್ನು ಎತ್ತಿ ಹಿಡಿದಿದೆ. ಕೆಲವು ಮೂಲಭೂತವಾದಿ ಮುಸ್ಲಿಮರನ್ನು ಬಿಟ್ಟರೆ ನಾಗರಿಕ ಸಮಾಜ ಈ ರೀತಿಯ ವಿವಾಹ ವಿಚ್ಛೇದನವನ್ನು ಬೆಂಬಲಿಸಲು ಸಾಧ್ಯವಿಲ್ಲ.

ಏನಿದು ತ್ರಿವಳಿ ತಲಾಖ್? ಏಕೆ ಇದರ ಬಗ್ಗೆ ಚರ್ಚೆ?

ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಎಲ್ಲ ಮುಸ್ಲಿಂ ಮಹಿಳೆಯರ ರಕ್ಷಣೆಗೆ ಸುಪ್ರೀಂ ಕೋರ್ಟಿನ ಆದೇಶದಂತೆ ಆರು ತಿಂಗಳಲ್ಲಿ ಕಾನೂನು ಮಾಡಲು ನಾವೆಲ್ಲ ಸೇರಿ ಶಕ್ತಿ ತುಂಬಬೇಕಾಗಿದೆ.

ನರೇಂದ್ರ ಮೋದಿ ಅವರು ಮುಸ್ಲಿಂ ಮಹಿಳೆಯರ ರಕ್ಷಣೆಗೆ ನಾನು ಬದ್ಧ ಮತ್ತು ತ್ರಿವಳಿ ತಲಾಖ್ ನಂತಹ ಸಾಮಾಜಿಕ ಪಿಡುಗು ತೊಲಗ ಬೇಕಾಗಿದೆ ಎಂದು ಈಗಾಗಲೇ ಘೋಷಿಸಿದ್ದು, ಮುಸ್ಲಿಂ ಮಹಿಳೆಯರ ಶಾಪ ವಿಮೋಚನೆ ಮಾಡಿದ ಸುಪ್ರೀಂಕೋರ್ಟಿಗೆ ಸಂಸದೆ ಶೋಭಾ ಕರಂದ್ಲಾಜೆ ಅಭಿನಂದನೆ ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Udupi MP Shobha Karandlaje shares her happiness to Oneindia kannada about Supreme court verdict on triple talaq.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ