ಬೈಂದೂರಿನಲ್ಲಿ ಈಜಲು ತೆರಳಿದ್ದ ಇಬ್ಬರು ಮಕ್ಕಳು ನೀರುಪಾಲು

ಉಡುಪಿ, ಅಕ್ಟೋಬರ್ 17: ದಸರಾ ರಜೆಯ ಮಜಾದಲ್ಲಿದ್ದ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಕಂಬದಕೋಣೆ ಬಳಿ ನಡೆದಿದೆ. ಕಂಬದಕೋಣೆಯ ಎಡಮಾವಿನ ಹೊಳೆ ಬೊನ್ನರ್ಯನ ಗುಂಡಿಯಲ್ಲಿ ಮಕ್ಕಳು ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ವಂಶಿತ್ ಶೆಟ್ಟಿ (12) ಮತ್ತು ರಿತೇಶ್ ಶೆಟ್ಟಿ ( 12) ನೀರುಪಾಲಾದ ಮಕ್ಕಳು. ಇವರು ಸ್ಥಳೀಯ ಸಂದೀಪನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ‌ ಏಳನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.

ಒಟ್ಟು 4 ಜನ ವಿದ್ಯಾರ್ಥಿಗಳು ಬೊಬ್ಬರ್ಯನ ಗುಂಡಿಗೆ ಈಜಲು ತೆರಳಿದ್ದರು. ಅದೃಷ್ಟವಶಾತ್ ಪ್ರದ್ವಿತ್ ಶೆಟ್ಟಿ ಮತ್ತು ವಿಜಯೇಂದ್ರ ಶೆಟ್ಟಿ ಈಜಲು ಬರುವ ಹಿನ್ನಲೆಯಲ್ಲಿ ಬಚಾವಾಗಿದ್ದಾರೆ. ಘಟನೆ ನಡೆದ ಬಳಿಕ ಕಾಳ್ಗಿಚ್ಚಿನಂತೆ ಸುದ್ದಿ ತಲುಪಿ, ವಿದ್ಯಾರ್ಥಿಗಳ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರಿಂದ ಹುಡುಕಾಟ ಕಾರ್ಯಾಚರಣೆ ಈಗಲೂ ಮುಂದುವರೆದಿದೆ.

Two Students Died While Swimming In Bainduru

ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಲ ಗ್ರಾಮಗಳ ಜನರು ಮಕ್ಕಳು ನೀರು ಪಾಲಾದ ಸ್ಥಳದಲ್ಲಿ ಜಮಾಯಿಸಿದ್ದು, ಹೆತ್ತವರ ಶೋಕ ಮುಗಿಲುಮುಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+