ಕಾಲಿಗೆ ಸರಪಳಿ ಸುತ್ತಿಕೊಂಡು ಈಜಿ ದಾಖಲೆ ಮಾಡಿದ ಗಂಗಾಧರ
ಉಡುಪಿ, ಜನವರಿ 24: ಉಡುಪಿಯ ರಾಷ್ಟ್ರಪ್ರಶಸ್ತಿ ವಿಜೇತ ಈಜುಪಟು ಗಂಗಾಧರ ಜಿ. ಅವರು ಮತ್ತೊಂದು ದಾಖಲೆ ಮಾಡಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಪದ್ಮಾಸನ ಹಾಕಿ ಈಜುವ ಮೂಲಕ ಅವರು ಇಂಡಿಯ ಬುಕ್ ಅಫ್ ರೆಕಾರ್ಡ್ಸ್ ಸೇರಿದ್ದಾರೆ.
65 ವರ್ಷದ ಗಂಗಾಧರ ಜಿ. ಕಡೆಕಾರ್ ಭಾನುವಾರ ನೂತನ ದಾಖಲೆಯನ್ನು ಮಾಡಿದರು. ಉಡುಪಿ ಜಿಲ್ಲೆ ಮಲ್ಪೆ ಸಮೀಪದ ಪಡುಕೆರೆಯಲ್ಲಿ ಅರಬ್ಬೀ ಸಮುದ್ರದಲ್ಲಿ ವಿಶಿಷ್ಟವಾಗಿ ಈಜುವ ಮೂಲಕ ದಾಖಲೆ ನಿರ್ಮಿಸಿದರು.
ಉಡುಪಿ; ಸ್ವರ್ಣೆಗೆ ಆರತಿ ಬೆಳಗಿದ ಪೇಜಾವರ ಶ್ರೀಗಳು
ಅಲೆಗಳ ಅಬ್ಬರಗಳಿಗೆ ಎದೆವೊಡ್ಡಿ ಪದ್ಮಾಸನದ ಭಂಗಿಯಲ್ಲಿ ಗಂಗಾಧರ ಈಜಿದ್ದಾರೆ. ಈ ವೇಳೆ ಅವರ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಲಾಗಿತ್ತು. 1.4 ಕಿ. ಮೀ. ದೂರ ಈಜಿ ಸಾಹಸ ಮಾಡಿದ ಗಂಗಾಧರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದರು.
ಸಮುದ್ರದಲ್ಲಿ 12 ಕಿ.ಮೀ ಒಬ್ಬಂಟಿಯಾಗಿ ಕಯಾಕ್ ಮಾಡಿ ಸಾಹಸ ಮೆರೆದ ಪತ್ರಕರ್ತ!
ಒಟ್ಟು 1 ಗಂಟೆ 13 ನಿಮಿಷ ಏಳು ಸೆಕೆಂಡ್‌ಗಳ ಕಾಲ ಈಜಿ ಗಂಗಾಧರ ದಾಖಲೆ ಮಾಡಿದರು. ಬೆಳಗ್ಗೆ 8.36 ಸಮುದ್ರಕ್ಕೆ ಧುಮುಕಿ ಈಜಲು ಆರಂಭಿಸಿದರು. 9.40ಕ್ಕೆ ದಡ ಸೇರಿದರು.
ಗಂಗಾಧರ ಜಿ. ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಇದುವರೆಗೂ ಗಳಿಸಿದ್ದಾರೆ. 65ನೇ ವಯಸ್ಸಿನಲ್ಲಿ ಕಾಲಿಗೆ ಸರಪಳಿ ಬಿಗಿದುಕೊಂಡು ಈಜುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. 2009ರಿಂದ 2019ರವರೆಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ 31 ಚಿನ್ನ, 16 ಬೆಳ್ಳಿ, ಎಂಟು ಕಂಚಿನ ಪದಕಗಳನ್ನು ಪಡೆದಿದ್ದಾರೆ.