ದೇಶದ ಸೈನಿಕರು ಮೋದಿ ಆಡಳಿತ ಮೆಚ್ಚಿದ್ದಾರೆ:ಶೋಭಾ ಕರಂದ್ಲಾಜೆ
ಉಡುಪಿ, ಮಾರ್ಚ್ 08: ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಪುಲ್ವಾಮಾ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಮ್ಯಾಚ್ ಫಿಕ್ಸಿಂಗ್ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಕೀಳು ರಾಜಕಾರಣಕ್ಕೆ ಕಾಂಗ್ರೆಸ್ ಇಳಿದಿದೆ. ಮ್ಯಾಚ್ ಫಿಕ್ಸಿಂಗ್ ಹೇಳಿಕೆ ನೀಡುವ ಮೂಲಕ ಬಿಕೆ ಹರಿಪ್ರಸಾದ್ ಸೈನಿಕರ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರೇವಣ್ಣ ಸುಮಲತಾ ಅವರ ಕ್ಷಮೆಯಾಚಿಸಲಿ: ಶೋಭಾ ಕರಂದ್ಲಾಜೆ
ಅಧಿಕಾರಕ್ಕೆ ಬರೋದಿಲ್ಲ ಅಂತ ಗೊತ್ತಿದ್ದು ನಾಯಕರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಎರಡು ದಿನದಲ್ಲಿ ಚುನಾವಣೆ ಘೋಷಣೆ ಆಗಲಿದೆ. ಏಪ್ರಿಲ್ ಮೂರನೇ ವಾರ ಕರ್ನಾಟಕದಲ್ಲಿ ಚುನಾವಣೆ. ಐದು ವರ್ಷದ ಹಿಂದೆ ಪ್ರವಾಸ ಸಂದರ್ಭದಲ್ಲಿ ಭರವಸೆ ನೀಡಿದ್ದೆವು. ಭ್ರಷ್ಟಾಚಾರ ರಹಿತ,ಅಭಿವೃದ್ಧಿ, ಸ್ವಚ್ಛತೆ, ವಿದೇಶಾಂಗ ನೀತಿ, ರಕ್ಷಣೆ ಒತ್ತು ಕೊಡಲಾಗಿದೆ. ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಎಂಬುದು ಸಾಬೀತಾಗಿದೆ ಎಂದು ಶೋಭಾ ತಿಳಿಸಿದರು.
ದೇಶದ ಸೈನಿಕರು ಮೋದಿ ಸರಕಾರದ ಆಡಳಿತ ಮೆಚ್ಚಿದ್ದಾರೆ. ವನ್ ರಾಂಕ್ ವನ್ ಪೆನ್ಶನ್ ನಂತರ ಸೈನಿಕರು ಖುಷಿಯಲ್ಲಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ಅನುದಾನ ಬಿಡುಗಡೆಯೇ ಮಾಡಿಲ್ಲ.
ಹರಿಪ್ರಸಾದ್ ಪುಲ್ವಾಮಾ ಮ್ಯಾಚ್ ಫಿಕ್ಸಿಂಗ್ ಹೇಳಿಕೆಗೆ ಶ್ರೀನಿವಾಸ ಪೂಜಾರಿ ಆಕ್ರೋಶ
ಟೆಂಡರ್ ಕರೆಯದೆ ಕೋಟಿ ಕೋಟಿ ಹಣ ನೆನೆಗುದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿ ಅತಿ ಹೆಚ್ಚು ಅನುದಾನ ಉಡುಪಿ- ಚಿಕ್ಕಮಗಳೂರಿಗೆ ಬಂದಿದೆ. ರಸ್ತೆ, ಪಾಸ್ ಪೋರ್ಟ್, ಸಖಿ ಸೆಂಟರ್ ಸ್ಥಾಪನೆಯಾಗಿದೆ ಎಂದು ಹೇಳಿದರು.