ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ : ಅತ್ತೂರ್ ಚರ್ಚ್ ಇನ್ನು ಮುಂದೆ ಮೈನರ್ ಬೆಸಿಲಿಕಾ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಕಾರ್ಕಳ, ಆಗಸ್ಟ್ 02 : ಕಾರ್ಕಳದ ಅತ್ತೂರು ಸಂತ ಲಾರೆನ್ಸ್‌ ಪುಣ್ಯ ಕ್ಷೇತ್ರವನ್ನು ಸೋಮವಾರ ಕಿರಿಯ (ಮೈನರ್‌) ಬೆಸಿಲಿಕಾ ಎಂದು ಘೋಷಣೆ ಮಾಡಲಾಯಿತು. 25 ಸಾವಿರಕ್ಕೂ ಅಧಿಕ ಭಕ್ತಾದಿಗಳು ಈ ಐತಿಹಾಸಕ ಕ್ಷಣಕ್ಕೆ ಸಾಕ್ಷಿಯಾದರು.

ಕಳೆದ ಮೂರು ತಿಂಗಳಿಂದ ಈ ದಿನಕ್ಕಾಗಿ ಬಹಳ ವಿಶೇಷ ರೀತಿಯಲ್ಲಿ ತಯಾರಿ ನಡೆಸಲಾಗುತ್ತಿತ್ತು. ಅತ್ತೂರ್ ಚರ್ಚ್‌ ಅನ್ನು ಅನೇಕ ಧರ್ಮಾಧ್ಯಕ್ಷರ ಸಮ್ಮುಖದಲ್ಲಿ ಮೈನರ್ ಬೆಸಿಲಿಕಾ ದೇವಾಲಯ ಎಂದು ಉನ್ನತೀಕರಿಸಲಾಯಿತು.[ನದಿಯಲ್ಲಿ ನೋರೋನ್ಹಾ, ಸಂತ ಲಾರೆನ್ಸರ ಪ್ರತಿಮೆ ಪತ್ತೆ]

Saint of Miracles

ಈ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನರು ಪಾಲ್ಗೊಂಡಿದ್ದರು. ಚರ್ಚ್‌ನ ಆವರಣದ ಸುತ್ತಮುತ್ತಲೂ ಎಲ್ಇಡಿ ಪರದೆಯನ್ನು ಹಾಕಿ ಭಕ್ತರಿಗೆ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.[ಫಾ.ಚಸರಾ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ, ಸಾಧುಕೋಕಿಲ ಹೇಳಿದ್ದೇನು?]

ಕಿರಿಯ ಬೆಸಿಲಿಕಾ ಎಂಬುದಾಗಿ ಆಯ್ದ ಕೆಲವು ಕ್ರೈಸ್ತ ಚರ್ಚ್‌ಗಳನ್ನು ಮಾತ್ರ ಘೋಷಣೆ ಮಾಡಲಾಗುತ್ತದೆ. ಚರ್ಚ್‌ನಲ್ಲಿ ನಡೆಯುವ ಆರಾಧನಾ ವಿಧಿಗಳು ಮತ್ತು ವಿವಿಧ ಸಂಸ್ಕಾರಗಳ ಮಾನದಂಡಗಳನ್ನು ಆಧರಿಸಿ ಶಿಸ್ತು ಪಾಲನಾ ಮಂಡಳಿ ಸಲ್ಲಿಸುವ ಶಿಫಾರಸುಗಳನ್ನು ಪರಿಗಣಿಸಿ ಕೆಥೋಲಿಕರ ಪರಮೋತ್ಛ ಗುರು ಪೋಪ್‌ ಅವರು ಇದನ್ನು ಘೋಷಿಸುತ್ತಾರೆ.[ಮಂಗಳೂರು : ಕಡಿಮೆ ಸಂಬಳ ಕೊಟ್ಟರೆಂದು ಚರ್ಚಿಗೆ ಕಲ್ಲೆಸದ]

Minor Basilica
English summary
More than 25,000 devotees witnessed the historic celebrations of the proclamation of the Karkala, Udupi shrine of St Lawrence as Minor Basilica.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X