ನಾಲ್ಕೂರು ಗ್ರಾ.ಪಂ ಪಿಡಿಒ ಕಚೇರಿಯಲ್ಲೇ 'ಅನಂತ'ನ ಅವಾಂತರ
ಕುಂದಾಪುರ (ಉಡುಪಿ ಜಿಲ್ಲೆ), ಏಪ್ರಿಲ್ 11: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ರಾಸಲೀಲೆ ಪ್ರಕರಣವೊಂದು ಬಯಲಾಗಿದೆ. ಕುಂದಾಪುರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯಿತಿ ಪಿಡಿಒ ಅನಂತ ಪದ್ಮನಾಭ್ ನಾಯಕ್ ಎಂಬಾತ ಮಹಿಳಾ ಸಿಬ್ಬಂದಿಯ ಜೊತೆ ರಾಸಲೀಲೆ ನಡೆಸಿದ ದೃಶ್ಯಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.
ಅನಂತ ಪದ್ಮನಾಭ ನಾಯಕ್ ಒಂದು ವರ್ಷದಿಂದ ನಾಲ್ಕೂರು ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಕರ್ತವ್ಯದ ವೇಳೆ ಸರಕಾರಿ ಕಚೇರಿಯಲ್ಲೇ ಕಾಮದಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ.
ಮಹಿಳಾ ಸಿಬ್ಬಂದಿಯ ಜೊತೆ ಅಸಭ್ಯ ವರ್ತನೆ ನಡೆಸಿರುವುದಲ್ಲದೆ ಕಾನೂನು ಬಾಹಿರ ಚಟುವಟಿಕೆ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪ ಕೂಡ ಈತನ ಮೇಲಿದೆ. ನಿವೃತ್ತ ಸೈನಿಕ ಅಗಿರುವ ಈತ ಸರಕಾರಿ ಕಚೇರಿಯಲ್ಲಿ ಮಹಿಳೆಯನ್ನು ತನ್ನ ತೃಷೆ ಬಳಸಿಕೊಂಡಿರುವುದನ್ನು ಸಮತಾ ಸೈನಿಕ ದಳ ಖಂಡಿಸಿದೆ.

ಪಿಡಿಒ ಅನಂತ ಪದ್ಮನಾಭ ನಾಯಕ್ ವಿರುದ್ಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದೆ. ಯುವತಿಯ ಮೇಲೆ ಆತ್ಯಾಚಾರ ಹಾಗೂ ಕರ್ತವ್ಯ ಲೋಪ ಆರೋಪದ ಮೇಲೆ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಕೆಲಸದಿಂದ ವಜಾ ಮಾಡಬೇಕು ಎಂದು ಸಮತಾ ಸೈನಿಕ ದಳ ಒತ್ತಾಯಿಸಿದೆ.












Click it and Unblock the Notifications