ಉಡುಪಿಯಲ್ಲಿ ಕಾನೂನು ವಿದ್ಯಾರ್ಥಿಯ ಕಿಡ್ನ್ಯಾಪ್ ಗೆ ಯತ್ನ
ಉಡುಪಿ, ಸೆಪ್ಟೆಂಬರ್ 01 : ಉಡುಪಿಯ ಕುಂಜಿಬೆಟ್ಟಿನ ಕಾನೂನು ವಿದ್ಯಾರ್ಥಿಯನ್ನು ಅಪರಿಚಿತರ ತಂಡವೊಂದು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಕುಂದಾಪುರ ವಿಜಯ ಶೆಟ್ಟಿ ಎಂಬ ವಿದ್ಯಾರ್ಥಿಯನ್ನು ಕುಂಜಿಬೆಟ್ಟಿನ ಬಳಿ ವಾಸವಾಗಿದ್ದ ಬಾಡಿಗೆ ಮನೆಗೆ ಹುಡುಕಿಕೊಂಡು ಬಂದ ಅಪರಿಚಿತರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ವಿಜಯ್ ಶೆಟ್ಟಿಯನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರುವುದನ್ನು ಅರಿತ ಅಪಹರಣಕಾರರು ವಿಜಯ್ ಶೆಟ್ಟಿಯನ್ನು ಕಟ್ಪಾಡಿ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಕೂಡಲೇ ಪೊಲೀಸರು ತೆರಳಿ ವಿದ್ಯಾರ್ಥಿಯನ್ನು ಉಡುಪಿ ಪೊಲೀಸ್ ಠಾಣೆಗೆ ಕರೆ ತಂದಿದ್ದು ಮಾಹಿತಿ ಪಡೆದುಕೊಂಡಿದ್ದಾರೆ.
ಫೈನಾನ್ಸ್ ವಿಚಾರದಲ್ಲಿ ಈ ಅಪಹರಣ ನಡೆದಿದೆ ಎಂದು ಹೇಳಲಾಗಿದೆ. ಕಾನೂನು ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ವಿಜಯ್ 2004ರಿಂದ 14ವರೆಗೆ ಬೆಳಗಾವಿನಲ್ಲಿ ಉದ್ಯಮ ನಡೆಸಿ ನಷ್ಟ ಹೊಂದಿದ್ದ ಹಿನ್ನೆಲೆಯಲ್ಲಿ ಚೆಕ್ ಬೌನ್ಸ್ ಕೇಸ್ ದಾಖಲಾಗಿತ್ತು.
ಈ ನೆಲೆಯಲ್ಲಿ ಹಣ ವಸೂಲಿ ಮಾಡಿಕೊಡುವಂತೆ ರೌಡಿ ಗ್ಯಾಂಗಿಗೆ ಬೆಳಗಾವಿಯಲ್ಲಿರುವವರೆ ಸುಪಾರಿ ಕೊಟ್ಟಿರಬಹುದು ಎಂಬ ಶಂಕೆ ಈಗ ವ್ಯಕ್ತವಾಗಿದೆ.
ಇನ್ನು ತನ್ನನ್ನು ಅಪಹರಿಸಿದ್ದು ಉಡುಪಿಯ ವಿಕ್ಕಿ ಕುಮಾರ್ ಎಂಬ ತಂಡ ಎಂದು ಅಪಹರಣಕ್ಕೊಳಗಾದ ವಿಜಯ್ ಕುಮಾರ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.












Click it and Unblock the Notifications