ಉಡುಪಿ: ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ್ ಬಂಧನ

ಉಡುಪಿ, ಜೂನ್.07 : ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ್ ಅವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಹಾಗೂ ಕುಂದಾಪುರ ಕೋರ್ಟ್ ನಲ್ಲಿ ವಿಚಾರಣೆ ಎದುರಿಸಲು ಆಗಮಿಸಿದ್ದ ವೇಳೆ ಏಕಾಏಕಿ ಈ ಬಂಧನ ನಡೆದಿದೆ.

ಈಗಾಗಲೇ ಸರ್ಕಾರದ ಮುಂದೆ ಶರಣಾಗಿರುವ ನೀಲಗುಳಿ ಪದ್ಮನಾಭ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಕಳೆದ ಮೂರು ದಿನಗಳಿಂದ ಉಡುಪಿಯಲ್ಲೇ ತಂಗಿದ್ದರು. ಉಡುಪಿ ಕೋರ್ಟ್ ನಲ್ಲಿ ವಿಚಾರಣೆ ಎದುರಿಸಿ ಹೊರಬರುವಾಗ ವಶಕ್ಕೆ ಪಡೆದಿದ್ದು, ಬಂಧನದ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ.

2004 ನೇ ಇಸವಿಯಲ್ಲಿ ಕುಂದಾಪುರದ ಅಮಾಸೆಬೈಲು ಠಾಣಾ ವ್ಯಾಪ್ತಿಯ ಪ್ರಕರಣವೊಂದರ ಸಂಬಂಧ ಈ ಬಂಧನ ನಡೆದಿದೆ. ಮಡಾಮಕ್ಕಿ ಠಾಣೆ ವ್ಯಾಪ್ತಿಯಲ್ಲಿ ಕಾಲುಸಂಕ ಧ್ವಂಸ ಮಾಡಿದ ಪ್ರಕರಣ ಸಂಬಂಧ ಈ ಕಾರ್ಯಾಚರಣೆ ನಡೆದಿದೆ .

Former Naxal Nelaguli Padmanabh was arrested

ಈ ಬಗ್ಗೆ ಸಮನ್ಸ್ ಜಾರಿಯಾದರೂ, ಪದ್ಮನಾಭ್ ಕೋರ್ಟ್ ಗೆ ಹಾಜರಾಗಿರಲಿಲ್ಲ ಎಂದು ತಿಳಿದುಬಂದಿದೆ. ಇಂದು ಅಪರಾಹ್ನ ಕುಂದಾಪುರ ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+