ಉಡುಪಿ-ಚಿಕ್ಕಮಗಳೂರು ಕ್ಷೇತ್ರ:ಜಯಪ್ರಕಾಶ್ ಪರ ಟ್ವೀಟ್, ಯಾರಿಗೆ ಸಿಗಲಿದೆ ಬಿಜೆಪಿ ಟಿಕೆಟ್?
ಉಡುಪಿ, ಮಾರ್ಚ್ 17:ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಈಗ ಕುತೂಹಲ ಕೆರಳಿಸಿದ್ದು, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕೆ.ಜಯಪ್ರಕಾಶ್ ಹೆಗ್ಡೆ ಆಯ್ಕೆ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಆಕಾಂಕ್ಷಿಗಳ ಪಟ್ಟಿಯಲ್ಲಿ ಶೋಭಾ ಕರಂದ್ಲಾಜೆ, ಜಯಪ್ರಕಾಶ ಹೆಗ್ಡೆ ಮಾತ್ರವಲ್ಲದೇ ಜಿಜೆಪಿ ಯುವ ಮುಖಂಡ ಯಶ್ ಪಾಲ್ ಸುವರ್ಣ ಮತ್ತು ಮಾಜಿ ಶಾಸಕ ಜೀವರಾಜ್ ಟಿಕೆಟ್ ರೇಸ್ ನಲ್ಲಿದ್ದಾರೆ. ಈ ನಡುವೆ ಜಯಪ್ರಕಾಶ್ ಹೆಗ್ಡೆ ಪರ ದಿನದಿಂದ ದಿನಕ್ಕೆ ಒಲವು ಹೆಚ್ಚುತ್ತಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಜಯಪ್ರಕಾಶ್ ಹೆಗ್ಡೆ ಪರ #JPH4udupichikamagalur2019 ಟ್ವೀಟ್ ಗಳ ಟ್ರೆಂಡ್ ಆರಂಭವಾಗಿದ್ದು, ಟ್ವಿಟ್ಟರ್ ನಲ್ಲಿ ಆರನೇ ಸಾಲಿನಲ್ಲಿ ಟ್ರೆಂಡಿಂಗ್ ಆಗುತ್ತಿರುವ ಜಯಪ್ರಕಾಶ್ ಹೆಗ್ಡೆ ಪರ ಕೂಗು ಗಟ್ಟಿಗೊಳ್ಳುತ್ತಿದೆ.

ಇಂದು ಭಾನುವಾರ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ಹಿನ್ನೆಲೆಯಲ್ಲಿ ಈಗಾಗಲೇ ಐದು ಸಾವಿರಕ್ಕೂ ಅಧಿಕ ಟ್ವೀಟ್ ದಾಖಲಾಗಿವೆ. ಇದು ಜಯಪ್ರಕಾಶ ಹೆಗ್ಡೆ ಯವರಿಗೆ ವರದಾನವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.












Click it and Unblock the Notifications