ಹಲ್ಲೆಗೆ ಪ್ರತೀಕಾರ:ಉಡುಪಿಯಲ್ಲಿ ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಕೊಲೆ
ಉಡುಪಿ, ಏಪ್ರಿಲ್ 29:ಹಲ್ಲೆ ಪ್ರಕರಣವೊಂದರ ಪ್ರತೀಕಾರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಉಡುಪಿ ಹೊರವಲಯದ ಮಲ್ಪೆ ಬೀಚ್ ಸಮೀಪ ಮಲಗಿದ್ದ ಯುವಕನಿಗೆ ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿದ ಆರೋಪಿಯನ್ನು ದುಷ್ಕರ್ಮಿಗಳ ತಂಡ ಅದೇ ದೊಣ್ಣೆಯಿಂದ ಹೊಡೆದು ಕೊಲೆಗೈದ ಘಟನೆ ನಡೆದಿದೆ.
ಮಲ್ಪೆ ಕೊಳದ ವಿಠೋಭಾ ಭಜನಾ ಮಂದಿರದ ಬಳಿ ಈ ಘಟನೆ ನಡೆದಿದೆ.ಘಟನೆಯಲ್ಲಿ ಕೊಲೆಯಾದ ವ್ಯಕ್ತಿಯನ್ನು ಹೈದರಾಬಾದ್ ನಿವಾಸಿ ಗುರುವೇಲು(35) ಎಂದು ಗುರುತಿಸಲಾಗಿದೆ. ಗುರುವೇಲು ಇತ್ತೀಚೆಗೆ (ಏಪ್ರಿಲ್ 27) ಮಲ್ಪೆ ಕಡಲ ಕಿನಾರೆ ಬಳಿ ಮಲಗಿದ್ದ ಅಮಿತ್ (27) ಎಂಬುವವರ ಮೇಲೆ ದೊಣ್ಣೆಯಿಂದ ತೀವ್ರ ಹಲ್ಲೆ ನಡೆಸಿದ್ದರು.
ಈ ಘಟನೆಯಲ್ಲಿ ಅಮಿತ್ ತೀವ್ರವಾಗಿ ಗಾಯಗೊಂಡಿದ್ದು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಳಿಕ ವಿಠೋಭಾ ಭಜನಾ ಮಂದಿರದ ಬಳಿ ಗುರುವೇಲು ಕೈಯ್ಯಲ್ಲಿ ದೊಣ್ಣೆ ಹಿಡಿದು ನಿಂತಿದ್ದನ್ನು ಗಮನಿಸಿದ್ದ ಯುವಕರ ತಂಡ ಗುರುವೇಲು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗುರುವೇಲು ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವ ಮಲ್ಪೆ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.












Click it and Unblock the Notifications