ಕುಂದಾಪುರ ತಾಪಂ ಜೂನಿಯರ್ ಇಂಜಿನಿಯರ್ ಎಸಿಬಿ ಬಲೆಗೆ

Posted By: ಕುಂದಾಪುರ ಪ್ರತಿನಿಧಿ
Subscribe to Oneindia Kannada

ಉಡುಪಿ, ಏಪ್ರಿಲ್ 11: ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಧಿಕಾರಿಗಳು ಹಲವಾರು ಕಡೆ ದಾಳಿ ನಡೆಸುವುದು ಆರಂಭವಾಗಿದೆ. ಇತ್ತೀಚೆಗೆ ಉಡುಪಿ ಅಬಕಾರಿ ಇಲಾಖೆಯ ಅಧಿಕಾರಿ ಮನೆಗೆ ಎಸಿಬಿ ದಾಳಿ ನಡೆಸಿತ್ತು. ಇದೀಗ ಇನ್ನೊಬ್ಬ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದು, ಕರಾವಳಿ ಭಾಗದಲ್ಲಿ ಎಸಿಬಿ ಶಾಕ್ ನೀಡುತ್ತಿದೆ.

ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಸಿಕ್ತು ಕೊಟ್ಯಂತರ ಹಣ-ಆಸ್ತಿ

ಬೆಳ್ಳಂಬೆಳಗ್ಗೆಯೇ ದಾಳಿ!
ಏ. 10ರಂದು ಬೆಳ್ಳಂಬೆಳಗ್ಗೆ ಉಡುಪಿಯ ಕುಂದಾಪುರ ತಾಲೂಕು ಪಂಚಾಯತ್ ಜೂನಿಯರ್ ಇಂಜಿನಿಯರ್'ಗೆ ಎಸಿಬಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ದಾಳಿ ನಡೆಸಲಾಗಿದ್ದು, ಕುಂದಾಪುರದ ನಾನ ಸಾಹೇಬ್ ರಸ್ತೆಯಲ್ಲಿರುವ ಮನೆ ಹಾಗೂ ಕಚೇರಿ ದಾಳಿ ನಡೆಸಿದ ಅಧಿಕಾರಿಗಳು ಕಡತ ಪರಿಶೀಲನೆ ನಡೆಸಿದ್ದಾರೆ.

ACB raids in Karvali

ಎಸಿಬಿ ಎಸ್ಪಿ ಶೃತಿ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಈ ಹಿಂದೆ ಶೃತಿ ನೇತೃತ್ವದಲ್ಲಿ ಹಲವು ಕಡೆ ದಾಳಿ ನಡೆದಿದ್ದು, ತನಿಖೆಯಲ್ಲಿ ಯಾವುದೇ ಮಾಹಿತಿ ಲಭಿಸಿಲ್ಲ. ಕಾರ್ಯಾಚರಣೆಗೆ ಚಿಕ್ಕಮಗಳೂರು, ಉಡುಪಿ ಎಸಿಬಿ ಅಧಿಕಾರಿಗಳು ಸಾಥ್ ನೀಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Anti-Corruption Bureau sleuths conducted raids at kundapur Taluk Panchayat Junior Engineer house on Tuesday. The raid commenced early morning. ACB teams raided the house and property and verified files. The operation was carried out by SP Shruthi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ