ಪ್ರಚಾರದ ನೆಪದಲ್ಲಿ ಮಂಚಕ್ಕೆ ಕರೆದ ಆರೋಪ: ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವಿರುದ್ದ ಸಿಡಿದೆದ್ದ ಮಹಿಳೆಯರು

ತುಮಕೂರು, ಏಪ್ರಿಲ್‌, 16: ಈಗಾಗಲೇ ರಾಜ್ಯ ವಿಧಾನಸಭೆ ಚುನವಣಾ ಕಣ ರಂಗೇರಿದ್ದು, ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌, ಎಎಪಿ ಈ ಎಲ್ಲಾ ಪಕ್ಷಗಳ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ಹಾಗೆಯೆ ಪ್ರಚಾರದ ನೆಪದಲ್ಲಿ ಜೆಡಿಎಸ್‌ ಕಾಮುಕ ಅಭ್ಯರ್ಥಿಯೊಬ್ಬ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆದಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ಜೆಡಿಎಸ್‌ ಅಭ್ಯರ್ಥಿ ಗೋವಿಂದರಾಜು ಅವರು ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನು ಕರೆಸುವ ನೆಪದಲ್ಲಿ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ, ತುಮಕೂರಿನ ನಗರ ವೃತ್ತದಲ್ಲಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆ ಕಾಮುಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 Tumakuru JDS Candidate: Allegation of being called to bed under the pretext of Campaigning

ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ

ಜೆಡಿಎಸ್‌ಗೆ ಮಹಿಳೆಯರ ಮೇಲೆ ಗೌರವವಿದ್ದರೆ ಕ್ರಮ ತೆಗೆದುಕೊಳ್ಳಲಿ. ಅಲ್ಲದೆ ಅವರಿಗೆ ಬಿ ಫಾರಂ ಕೊಡದೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು. ಇಂತಹ ವ್ಯಕ್ತಿತ್ವ ಉಳ್ಳವರು ಶಾಸಕರಾದರೆ ಕ್ಷೇತ್ರದ ಮಹಿಳೆಯರು ಹಗಲು ಹೊತ್ತಿನಲ್ಲಿ ಭಯದಿಂದ ಓಡಾಡುವ ವಾತಾವರಣ ಸೃಷ್ಟಿ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗೆ ಮಹಿಳೆಯೊಬ್ಬರನ್ನು ಪ್ರಚಾರಕ್ಕೆ ಕರೆಯುವ ನೆಪದಲ್ಲಿ ಗೋವಿಂದರಾಜು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಮತ್ತು ಇವರ 8 ಅಶ್ಲೀಲ ಪದ ಬಳಕೆಯ ಆಡಿಯೋ ಬಿಡುಗಡೆ ಆಗಿದ್ದು, ಇದಕ್ಕೆ ಎಲ್ಲೆಡೆ ಆಕ್ರೋಶಗಳು ಭುಗಿಲೆದ್ದಿವೆ.

ವಸತಿ ನಿಲಯ ಉಸ್ತುವಾರಿಗೆ ಬಿತ್ತು ಗೂಸಾ

ಇತ್ತೀಚೆಗಷ್ಟೇ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಸತಿನಿಲಯ ಉಸ್ತುವಾರಿಗೆ ಹಿಗ್ಗಾ-ಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಕಟ್ಟೇರಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ರಾಷ್ಟ್ರೀಯ ಅಭಿಯಾನ ಶಿಕ್ಷಣ ಯೋಜನೆ ವತಿಯಿಂದ ನಡೆಯುತ್ತಿರುವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮುಖ್ಯಶಿಕ್ಷಕ ಹಾಗೂ ಉಸ್ತುವಾರಿ ಆಗಿರುವ ಚಿನ್ಮಯಾನಂದಸ್ವಾಮಿ ಎಂಬಾತನೇ ವಿದ್ಯಾರ್ಥಿನಿಯರಿಂದ ಧರ್ಮದೇಟು ತಿಂದವನಾಗಿದ್ದನು.

ಬಾಲಕಿಯರಿಗೆ ಲೈಂಗಿಕ ಕಿರುಕುಳ

ವಸತಿ ನಿಲಯದಲ್ಲಿ ಉಸ್ತುವಾರಿಯಾಗಿದ್ದ ಚಿನ್ಮಯಾನಂದಸ್ವಾಮಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದನ್ನು ರೂಢಿಸಿಕೊಂಡಿದ್ದ. ಈ ಬಗ್ಗೆ ವಾರ್ಡನ್‌ಗೆ ತಿಳಿಸಿದ್ದರೂ ಸಹ ಅವರನ್ನೂ ಬೆದರಿಸಿ ಯಾವುದೇ ವಿಚಾರವೂ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದ. ವಿದ್ಯಾರ್ಥಿನಿಯೊಬ್ಬಳನ್ನು ರೂಮಿಗೆ ಕರೆದು ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದನೆಂದು ತಿಳಿದುಬಂದಿತ್ತು.

ಈ ಕಾಮುಕ ಬಾಲಕಿಗೆ ಮುತ್ತು ಕೊಡಲು ಹೋಗಿದ್ದನಂತೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಾಲಕಿ ತನ್ನ ಸ್ನೇಹಿತರನ್ನು ಕರೆದು ಈ ಬಗ್ಗೆ ಹೇಳಿಕೊಂಡಿದ್ದಳು. ಇದರಿಂದ ಉದ್ರಿಕ್ತಗೊಂಡ ಎಲ್ಲ ಮಕ್ಕಳೂ ಒಟ್ಟಿಗೆ ಸೇರಿ ಚಿನ್ಮಯಾನಂದಸ್ವಾಮಿಗೆ ತರಾಟೆ ತೆಗೆದುಕೊಂಡಿದ್ದರು. ಬಳಿಕ ಆತನೂ ಎಚ್ಚರಿಕೆ ನೀಡಿದ್ದರಿಂದ ಮತ್ತಷ್ಟು ಕುಪಿತಗೊಂಡ ವಿದ್ಯಾರ್ಥಿನಿಯರು ಕೈಗೆ ಸಿಕ್ಕ ಕೋಲು, ದೊಣ್ಣೆಗಳನ್ನು ಹಿಡಿದು ಚಿನ್ಮಯಾನಂದಸ್ವಾಮಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದರು.

ಕಾಮುಕ ಮುಖ್ಯಶಿಕ್ಷಕನಿಗೆ ಗೂಸಾ

ಈ ದೃಶ್ಯವನ್ನು ವೀಡಿಯೋ ಮಾಡುತ್ತಿದ್ದನ್ನು ಕಂಡ ಚಿನ್ಮಯಾನಂದಸ್ವಾಮಿ ನಿಬ್ಬೆರಗಾಗಿದ್ದಾನೆ. ಆದರೂ ವೀಡಿಯೋ ಮಾಡುತ್ತಿದ್ದುದ್ದನ್ನು ಕಂಡರೂ ಕೂಡ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಸುದ್ಧಿ ತಿಳಿದ ತಕ್ಷಣ ಗ್ರಾಮಸ್ಥರು, ಪೋಷಕರು ಸ್ಥಳಕ್ಕೆ ಆಗಮಿಸಿ ಚಿನ್ಮಯಾನಂದಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಸೂಕ್ತ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಸಾಗರ ಇನ್ಸ್‌ಪೆಕ್ಟರ್ ಪುನೀತ್ ಮತ್ತು ಪಿಎಸ್‌ಐ ಲಿಂಗರಾಜು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಕಾಮುಕ ಚಿದಾನದಸ್ವಾಮಿಯನ್ನು ವಶಕ್ಕೆ ಪಡೆದಿದ್ದರು.

ವಾರ್ಡನ್ ನಮಿತ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪೆಡದ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು ಎನ್ನುವ ಮಾಹಿತಿ ತಿಳಿದುಬಂದಿತ್ತು. ಹಲವು ತಿಂಗಳುಗಳಿಂದಲೂ ಆರೋಪಿ ಚಿನ್ಮಯಾನಂದಸ್ವಾಮಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಪೋಷಕರು ಮತ್ತು ಯಾರಿಗಾದರೂ ಹೇಳಿದರೆ ಪರೀಕ್ಷೆ ಬರೆಯಲು ಆವಕಾಶ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳನ್ನು ಬೆದರಿಸುತ್ತಿದ್ದ ಎನ್ನುವ ಭಯಾನಕ ಸತ್ಯವೊಂದು ಬಯಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+