'ತುಮಕೂರಿನ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ವ್ಯಭಿಚಾರ ರಾಜಕಾರಣ'
ತುಮಕೂರು, ಮಾರ್ಚ್ 7 : ತುಮಕೂರು ನಗರ ಕ್ಷೇತ್ರದ ಜೆಡಿಎಸ್ ನ ಘೋಷಿತ ಅಭ್ಯರ್ಥಿ ಗೋವಿಂದರಾಜು ವ್ಯಭಿಚಾರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ಗಂಭೀರ ಆರೋಪ ಮಾಡಿದರು.
ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತುಮಕೂರು ನಗರ ಕ್ಷೇತ್ರದ ಜೆಡಿಎಸ್ ನ ಘೋಷಿತ ಅಭ್ಯರ್ಥಿ ಗೋವಿಂದರಾಜು ಕಿಟ್ಟಿ ಪಾರ್ಟಿ ಮಾಡುವ ಮಹಿಳೆಯರಿಗೆ, ಹಮಾಲಿಗಳ ಸಂಘದವರಿಗೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಣದ ಆಮಿಷ ಒಡ್ಡಿ, ಓಲೈಕೆಗೆ ಮುಂದಾಗಿದ್ದಾರೆ. ಗೋವಿಂದರಾಜು ವ್ಯಭಿಚಾರ ಮಾಡುವುದಕ್ಕೆ ಲಾಯಕ್ ವಿನಾ ರಾಜಕಾರಣ ಮಾಡುವುದಕ್ಕೆ ನಾಲಾಯಕ್ ಎಂದು ವಾಗ್ದಾಳಿ ನಡೆಸಿದರು.
ಇವರು ಭೇಟಿ ನೀಡಿ, ಆಣೆ- ಪ್ರಮಾಣ ಮಾಡಿಸಿದ ದೇವಾಲಯಗಳನ್ನು ಶುದ್ಧಿ ಮಾಡಿಸಬೇಕು. ರೇಪಿಸ್ಟ್ ಗಳು ಹಾಗೂ ಗೂಂಡಾಗಳನ್ನು ಮುಂದಿಟ್ಟುಕೊಂಡು ಹಣ ಹಂಚುತ್ತಿದ್ದಾರೆ. ಮಾರ್ಕೆಟ್ ಹಮಾಲಿಗಳನ್ನು ದೇವರಾಯನದುರ್ಗಕ್ಕೆ ಕರೆದುಕೊಂಡು ಹೋಗಿ ಬಾಡೂಟ ಹಾಕಿಸಿದ್ದಾರೆ ಎಂದು ಆರೋಪ ಮಾಡಿದರು.

ಜೆಡಿಎಸ್ ವರಿಷ್ಟರು ಈತನ ವಿರುದ್ದ ಕ್ರಮ ಜರುಗಿಸದಿದ್ದರೆ ಆ ಪಕ್ಷಕ್ಕೆ ಕಳಂಕ. ತುಮಕೂರಿನ ಪ್ರಜ್ಞಾವಂತ ಜನರು ಇಂತಹವರನ್ನು ತಿರಸ್ಕಾರ ಮಾಡಬೇಕು. ಈತ ಚುನಾವಣೆ ಮುಂದಿಟ್ಟಕೊಂಡು ನಡೆಸುತ್ತಿರುವ ಅವ್ಯವಹಾರವನ್ನು ದಾಖಲೆ ಸಮೇತ ಚುನಾವಣೆ ಆಯೋಗಕ್ಕೆ ದೂರು ನೀಡುವುದಾಗಿ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.












Click it and Unblock the Notifications