ತುಮಕೂರಿನಲ್ಲಿ ಬೀದಿ ನಾಯಿಗಳ ದಾಳಿಗೆ 10 ವರ್ಷದ ಬಾಲಕಿ ಬಲಿ

ತುಮಕೂರು, ಸೆಪ್ಟೆಂಬರ್ 09 : ಬೀದಿನಾಯಿಗಳ ದಾಳಿಯಿಂದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಕುಣಿಗಲ್‌ನಲ್ಲಿ ನಡೆದಿದೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ದಾಖಲಾಗಿದೆ.

ಮೃತಪಟ್ಟ ಬಾಲಕಿಯನ್ನು 10 ವರ್ಷದ ತೇಜಸ್ವಿನಿ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಅಣಬೆ ತರಲು ಬಾಲಕಿ ಹೋದಾಗ ಬೀದಿನಾಯಿಗಳು ಆಕೆಯ ಮೇಲೆ ದಾಳಿ ಮಾಡಿದ್ದವು.

ಬಾಲಕಿ ಎರಡೂ ಕೈಗಳ ಮಾಂಸವನ್ನು ಸಂಪೂರ್ಣವಾಗಿ ತಿಂದಿದ್ದವು. ಒಂದು ಕಾಲಿನ ಮಾಂಸವನ್ನು ಕಿತ್ತು ಹಾಕಿದ್ದವು. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

10-year-old girl dies after dog attack in Tumakuru

ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ. ಕುಣಿಗಲ್‌ ಬಳಿಯ ಅರಸರಪಾಳ್ಯದಲ್ಲಿ ಈ ಘಟನೆ ನಡೆದಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಾವು ಕಚ್ಚಿ ಬಾಲಕ ಸಾವು : ಹಾವು ಕಡಿದು 12 ವರ್ಷದ ಬಾಲಕ ವಿಶ್ವನಾಥ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಭಾನುವಾರ ಮನೆ ಸಮೀಪದ ಕಳೆ ರಾಶಿಯನ್ನು ಮತ್ತೊಂದು ಕಡೆ ಹಾಕುವಾಗ ಹಾವು ಕಚ್ಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+