
T20 WC: ಮಾರ್ಕಸ್ ಸ್ಟೋಯ್ನಿಸ್ 'Hulk' ಎಂದು ಟ್ವಿಟ್ಟಿಗರು ಹೊಗಳಿದ್ದೇಕೆ?
ಆಸ್ಟ್ರೇಲಿಯಾದಲ್ಲಿ ನಡೆದಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ದಿಗ್ಗಜ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಇನ್ನೂ ಕಾಡುತ್ತಿದೆ. ಇದೇ ರೀತಿ ಸಿಡಿಲಬ್ಬರ ಬ್ಯಾಟಿಂಗ್ ಆಸ್ಟ್ರೇಲಿಯಾದ ಆಟಗಾರನಿಂದ ಕಂಡು ಬಂದಿದ್ದು, ಕ್ರಿಕೆಟ್ ಪ್ರೇಮಿಗಳು ಥ್ರಿಲ್ ಆಗಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮಾದರಿಯಲ್ಲಿ ಒಳ್ಳೆ ಮ್ಯಾಚ್ ಫಿನಿಷರ್ ಎಂದೆನಿಸಿಕೊಳ್ಳಬೇಕು ಎಂದಿರುವ ಮಾರ್ಕಸ್ ಸ್ಟೋಯ್ನಿಸ್ ರನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ. ತಮ್ಮ ಸೂಪರ್ ಬ್ಯಾಟಿಂಗ್ ಮೂಲಕ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ ತಂದು ಕೊಟ್ಟ ಮಾರ್ಕಸ್ ರನ್ನು 'Hulk' ಎಂದು ಅನೇಕರು ಕರೆದಿದ್ದಾರೆ.
ಮಾರ್ವೆಲ್ ಸ್ಟುಡಿಯೋ ಸೂಪರ್ ಹೀರೋಸ್ ಸರಣಿಯ ಪಾತ್ರವಾದ ಹಲ್ಕ್ ಚಿರಪರಿಚಿತವಾಗಿದ್ದು, ಹಲ್ಕ್ ಮಾದರಿಯಲ್ಲಿ ದೈತ್ಯ ಬ್ಯಾಟಿಂಗ್ ಪ್ರದರ್ಶನವನ್ನು ಮಾರ್ಕಸ್ ಇನ್ನಿಂಗ್ಸ್ ನಲ್ಲಿ ಕಂಡೆವು ಎಂದು ಅಭಿಮಾನಿಗಳು ಹೊಗಳಿದ್ದಾರೆ.
Marcus Stoinis this game 😄 #AUSvSL #T20worldcup22 pic.twitter.com/DOsI38qrOl
— Wasim Jaffer (@WasimJaffer14) October 25, 2022
ಒಂದು ಕಡೆ ಆಸೀಸ್ ನಾಯಕ ಅರೋನ್ ಫಿಂಚ್, ಗ್ಲೆನ್ ಮ್ಯಾಕ್ಸ್ ವೆಲ್ ತಿಣುಕಾಡುತ್ತಾ ಬ್ಯಾಟ್ ಬೀಸುತ್ತಾ ರನ್ ಗಳಿಸಲು ಪರದಾಡುತ್ತಿದ್ದ ಸಂದರ್ಭದಲ್ಲಿ ಮಾರ್ಕಸ್ ಮಿಂಚಿನ ಇನ್ನಿಂಗ್ಸ್ ಆಸ್ಟ್ರೇಲಿಯಾ ತಂಡದಲ್ಲಿ ಸಂಚಲನ ಮೂಡಿಸಿತು.
ತ್ವರಿತ ಗತಿ ಅರ್ಧಶತಕ
ಕೇವಲ 18 ಎಸೆತಗಳಲ್ಲಿ 59ರನ್ ಚೆಚ್ಚಿದ ಆಸ್ಟ್ರೇಲಿಯಾದ ಆಲ್ ರೌಂಡರ್ ಸ್ಫೋಟಕ್ ಬ್ಯಾಟಿಂಗ್ ಕಂಡವರು 'ಒನ್ ಮ್ಯಾನ್ ಶೋ' ಎಂದಿದ್ದಾರೆ. ಸರಿ ಸುಮಾರು 327 ಸ್ಟ್ರೈಕ್ ರೇಟ್ ನಂತೆ ರನ್ ಗಳಿಸಿದರೆ ಯಾರು ತಾನೆ ಮೆಚ್ಚದೆ ಇರಲ್ಲ.
Stoinis sends it into the stratosphere!
— ICC (@ICC) October 25, 2022
We can reveal that this 6 from Stoinis is one of the moments that could be featured in your @0xFanCraze Crictos of the Game packs from #AUSvSL. Grab your pack from https://t.co/8TpUHbQikC to own iconic moments from every game. pic.twitter.com/cJAzghKSrL
ಮಾರ್ಕಸ್ ಬ್ಯಾಟ್ ಮಾಡಲು ಬಂದಾಗ ಆಸ್ಟ್ರೇಲಿಯಾದ ಪರಿಸ್ಥಿತಿ ಉತ್ತಮವಾಗಿರಲಿಲ್ಲ. 12.2 ಓವರ್ ಗಳಲ್ಲಿ 89ರನ್ ಗಳಿಸಿ 3 ವಿಕೆಟ್ ಕಳೆದುಕೊಂಡಿತ್ತು. ಇನ್ನೊಂದು ತುದಿಯಲ್ಲಿ ಫಿಂಚ್ ರನ್ ಗಳಿಸಲು ಕಷ್ಟಪಡುತ್ತಿದ್ದರು. ಲಂಕಾದ ಸ್ಪಿನ್, ವೇಗದ ಬೌಲರ್ಸ್ ಆಸೀಸ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಿದ್ದರು.
ಟಿ20 ವಿಶ್ವಕಪ್‌ನಲ್ಲಿ ಭಾರತದ ಯುವರಾಜ್ ಸಿಂಗ್(12 ಎಸೆತಗಳಲ್ಲಿ ಇಂಗ್ಲೆಂಡ್ ವಿರುದ್ಧ 2007) ಬಳಿಕ ಮಾರ್ಕಸ್ ಸ್ಟೋಯ್ನಿಸ್ ಎರಡನೇ ಅತಿ ವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಆದರೆ, ಆಸ್ಟ್ರೇಲಿಯನ್ನರ ಪೈಕಿ ಮಾರ್ಕಸ್ ಮುಂದಿದ್ದಾರೆ.
ಮಾರ್ಕಸ್‌ಗೂ ಮುನ್ನ ನೆದರ್ಲ್ಯಾಂಡ್ಸ್‌ನ ಸ್ಟೀಫನ್ ಮೈಬರ್ಗ್ 2014ರ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ 17 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು.
ಈಗ ಶ್ರೀಲಂಕಾ ವಿರುದ್ಧ 2022ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮಾರ್ಕಸ್ ಕೂಡಾ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಮಾರ್ಕಸ್ ಇನ್ನಿಂಗ್ಸ್ ನೋಡಿ ನಾಯಕ ಫಿಂಚ್ ಕೂಡಾ ತಲೆಬಾಗಿದರು.
ಶ್ರೀಲಂಕಾ ಒಡ್ಡಿದ್ದ 158ರನ್ ಗಳ ಗುರಿಯನ್ನು ಆಸ್ಟ್ರೇಲಿಯಾ ಇನ್ನೂ 21 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿ 7 ವಿಕೆಟ್ ಗಳ ಅರ್ಹ ಜಯ ದಾಖಲಿಸಿ 2 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಕಾಣಿಸಿಕೊಂಡಿದೆ.