ಬೆಂಗಳೂರು ಅಭಿಮಾನಿಗಳ ಜೊತೆ ವಿಶೇಷ ನಂಟು; ಶ್ರೇಯಾಂಕಾ ಪಾಟೀಲ್ ಹೇಳಿದ್ದೇನು?
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದ ಆರ್ ಸಿಬಿ ತಂಡದ ಸ್ಮೃತಿ ಮಂಧಾನ, ರಿಚಾ ಘೋಷ್, ಆಶಾ ಶೋಭನಾ ಮತ್ತು ಶ್ರೇಯಾಂಕಾ ಪಾಟೀಲ್ ಸದ್ಯ ಭಾರತ ತಂಡದಲ್ಲಿ ಆಡುತ್ತಿದ್ದು, ಬೆಂಗಳೂರಿನಲ್ಲಿ ಅಪಾರ ಜನ ಬೆಂಬಲ ಸಿಕ್ಕಿದೆ.

ಮೊದಲ ಎರಡು ಪಂದ್ಯಗಳಲ್ಲಿ ಅವಕಾಶ ಪಡೆಯದ ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದರು. 10 ಓವರ್ ಗಳಲ್ಲಿ 35 ರನ್ ನೀಡಿ ಒಂದು ವಿಕೆಟ್ ಪಡೆದರು.
ಮಹಿಳಾ ತಂಡಕ್ಕೆ ಭಾರಿ ಬೆಂಬಲ
ಮಹಿಳಾ ಕ್ರಿಕೆಟ್‌ಗೆ ಅದರಲ್ಲೂ ಏಕದಿನ ಪಂದ್ಯವನ್ನು ಯಾರು ನೋಡ್ತಾರೆ ಎನ್ನುವ ಪ್ರಶ್ನೆಗೆ ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳು ಉತ್ತರ ಕೊಟ್ಟಿದ್ದಾರೆ. ಭಾನುವಾರ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಮೈದಾನದಲ್ಲಿ ಸೇರಿದ್ದರು.
ವಿಶೇಷವಾಗಿ ಶ್ರೇಯಾಂಕಾ ಪಾಟೀಲ್ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಸಾಕಷ್ಟು ಬೆಂಬಲ ಸಿಕ್ಕಿತು. ತಮ್ಮ ಸರಣಿ ಗೆಲುವಿನ ನಂತರ, ಜೆಮಿಮಾ ರೋಡ್ರಿಗಸ್, ಶ್ರೇಯಾಂಕಾ ಪಾಟೀಲ್ ಮತ್ತು ಪ್ರಿಯಾ ಪುನಿಯಾ ಬೆಂಗಳೂರಿನ ಪ್ರೇಕ್ಷಕರ ಬೆಂಬಲದ ಬಗ್ಗೆ ಮಾತನಾಡಿದರು.
ಡಬ್ಲ್ಯುಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುತ್ತಿರುವ ಶ್ರೇಯಾಂಕಾ ಪಾಟೀಲ್ ಭಾನುವಾರದ ಅಂತಿಮ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಪ್ರೇಕ್ಷಕರು ತಮ್ಮ ಹೆಸರನ್ನು ಕೂಗಿದ್ದುಸಾಕಷ್ಟು ವಿಶೇಷವಾಗಿದೆ ಎಂದು ಹೇಳಿದರು.
Grabbing opportunities, cherishing the chants and celebrating a series win 🏆🥳@JemiRodrigues interviews crowd favourite @shreyanka_patil & @PriyaPunia6 👌👌 - By @mihirlee_58
— BCCI Women (@BCCIWomen) June 24, 2024
Watch The Full Video 🎥🔽 #TeamIndia | #INDvSA | @IDFCFIRSTBank https://t.co/Er0y2Q6Sln pic.twitter.com/XvZ9LkyjSH
ವಿಶೇಷ ದಾಖಲೆ ಬರೆದ ಮಂಧಾನ
ಆರ್ ಸಿಬಿ ತಂಡದ ನಾಯಕಿ, ಸ್ಮೃತಿ ಮಂಧಾನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮಿಂಚಿದರು. ಮೊದಲ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ ಅವರು, ಮೂರನೇ ಪಂದ್ಯದಲ್ಲಿ ಕೂಡ ಶತಕದ ಸನಿಹ ಬಂದು ಔಟಾದರು. 90 ರನ್ ಗಳಿಸಿದರೂ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 114.33 ಸರಾಸರಿಯಲ್ಲಿ 343 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡರು.
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಗೆದ್ದ ಬಳಿಕ ಭಾರತ ತಂಡ ಚೆನ್ನೈನಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಟೆಸ್ಟ್ ಮುಗಿದ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ಕೂಡ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.












Click it and Unblock the Notifications