Mohammed Siraj: ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವಾಗ ಭಾವುಕರಾದ ಬಗ್ಗೆ ಮೊಹ್ಮದ್ ಸಿರಾಜ್ ಕೊಟ್ಟ ಸ್ಪಷ್ಟನೆ ಏನು?
Mohammed Siraj: ಐಪಿಎಲ್ 2025ರ ಆವೃತ್ತಿಯ 14ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿದೆ. ಗುಜರಾತ್ ಪರ ಮೊಹ್ಮದ್ ಸಿರಾಜ್ ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿರು. ಇನ್ನು ವಿರಾಟ್ ಕೊಹ್ಲಿ ಅವರು ಸ್ಟ್ರೈಕ್‌ನಲ್ಲಿ ಬ್ಯಾಟ್ ಹಿಡಿದು ನಿಂತಾಗ ಬೌಲಿಂಗ್ ಅರ್ಧಕ್ಕೆ ನಿಲ್ಲಿಸಿ ಸಿರಾಜ್ ಭಾವುಕರಾದ ಘಟನೆ ನಡೆದಿದೆ. ಅಲ್ಲದೆ, ಪಂದ್ಯ ಮುಗಿದ ಬಳಿಕ ಈ ಬಗ್ಗೆ ಅವರು ಏನು ಹೇಳಿದ್ದಾರೆಂದು ಇಲ್ಲಿ ತಿಳಿಯಿರಿ.
ಗುಜರಾತ್ ಟೈಟಾನ್ಸ್ ತಂಡವು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಸಾಧಾರಣ 169 ರನ್‌ಗಳನ್ನು ಬಾರಿಸಿತು. ಈ ಮೂಲಕ ಗುಜರಾತ್‌ಗೆ 170 ಸಾಧಾರಣ ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಗುಜರಾತ್ 17.5 ಓವರ್‌ನಲ್ಲಿ 170 ರನ್‌ಗಳನ್ನು ಬಾರಿಸಿ ಗೆಲುವು ಸಾಧಿಸಿತು.

ಈ ಪಂದ್ಯವು ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಈ ಇಬ್ಬರು ಗುರು-ಶಿಷ್ಯರ ಮುಖಾಮುಖಿಯೊಂದಿದೆ ನಡೆದಿದ್ದು ವಿಶೇಷ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡು ಮೊದಲ ಓವರ್ ಎಸೆಯಲು ಮೊಹಮ್ಮದ್ ಸಿರಾಜ್ಗೆ ಬಾಲ್ ನೀಡಿದರು.
ಮೊದಲ ಓವರ್ ಮಾಡಿದ ಮೊಹಮ್ಮದ್ ಸಿರಾಜ್ ಮೊದಲ ಎಸೆತವನ್ನು ಫಿಲ್ ಸಾಲ್ಟ್ ಅವರಿಗೆ ಎಸೆದರು. ಆಗ ಒಂದು ರನ್ ಕಲೆಹಾಕುವ ಮೂಲಕ ವಿರಾಟ್ ಕೊಹ್ಲಿಗೆ ಸ್ಟ್ರೈಕ್ ನೀಡಿದರು. ಆದರೆ, 2ನೇ ಎಸೆತ ಎಸೆಯುವ ಮುನ್ನ ಮೊಹಮ್ಮದ್ ಸಿರಾಜ್ ಭಾವುಕರಾಗಿ ಕಂಡು ಬಂದರು. ಮತ್ತೊಂದೆಡೆ ಬ್ಯಾಟ್ ಹಿಡಿದು ನಿಂತಿದ್ದ ಕೊಹ್ಲಿ ಸಹ ಹಿಂದೆ ಸರಿದ ಘಟನೆ ನಡೆಯಿತು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಮೊದಲು ಏಳು ವರ್ಷಗಳಿಂದಲೂ ಆರ್‌ಸಿಬಿ ಪರ ಆಡಿದ್ದ ಸಿರಾಜ್ ಈ ಆವೃತ್ತಿಯಲ್ಲಿ ಗುಜರಾತ್ ಪಾಲಾಗಿದ್ದಾರೆ. ನಿನ್ನೆ ಆರ್‌ಸಿಬಿ ತಂಡದ ವಿರುದ್ಧ ಗುಜರಾತ್ ಸೆಣಸಾಡಿದೆ. ಈ ವೇಳೆ ಗುರು-ಶಿಶ್ಯರ ಮುಖಾಮುಖಿಯಾಗಿದೆ. ಈ ಮೂಲಕ ಮೊಹಮ್ಮದ್ ಸಿರಾಜ್ ಇದೇ ಮೊದಲ ಬಾರಿ ತನ್ನ ಗುರು ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಲು ಸಿದ್ಧರಾದಾಗ ಭಾವುಕರಾದ ಘಟನೆ ನಡೆದಿದೆ. ಈ ವಿಡಿಯೋ ಕೊಹ್ಲಿ ಹಾಗೂ ಸಿರಾಜ್ ನಡುವಿನ ಇದ್ದ ಸ್ನೇಹ ಎಂತಹದ್ದು ಎಂದು ಸಾಭಿತುಪಡಿಸಿದೆ.
ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 7 ವರ್ಷಗಳ ಕಾಲ ಆಡಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಸಿರಾಜ್ ಬೆಂಬಲಕ್ಕೆ ನಿಂತವರಾಗುದ್ದರು. ಕೊಹ್ಲಿಯ ಸಂಪೂರ್ಣ ಬೆಂಬಲದೊಂದಿಗೆ ನಾನು ಈ ಮಟ್ಟಕ್ಕೆ ತಲುಪಿದ್ದೇನೆ ಎಂದು ಹಲವು ಬಾರಿ ಸಿರಾಜ್ ಹೇಳಿಕೊಂಡಿದ್ದರು. ಹಾಗೆಯೇ ಈಗಲೂ ಕೂಡ ಗುಜರಾತ್ ಪರ ಆಡಿದರೂ ಆರ್‌ಸಿಬಿಯನ್ನು ನೆನಪಿಸಿಕೊಂಡಿದ್ದಾರೆ.
ಇದೀಗ 7 ವರ್ಷಗಳ ಬಳಿಕ ಸಿರಾಜ್ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿದ್ದು, ಸಿರಾಜ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್ ವಿಕೆಟ್ ಕೀಳುವ ಮೂಲಕ ಮೊಹಮ್ಮದ್ ಸಿರಾಜ್ ಆರ್ಸಿಬಿಗೆ ಆರಂಭಿಕ ಆಘಾತ ನೀಡಿದ್ದರು. ಅಲ್ಲದೆ, 4 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 3 ವಿಕೆಟ್ ಕಬಳಿಸಿ ಗುಜರಾತ್ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಆರ್‌ಸಿಬಿಯ ಮೂರು ವಿಕೆಟ್ ಕಬಳಿಸುವ ಮೂಲಕ ಮೊಹ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದಾದ ಬಳಿಕ ಮಾತನಾಡಿದ ಅವರು, "ನಾನು ಸ್ವಲ್ಪ ಭಾವುಕನಾಗಿದ್ದೆ, 7 ವರ್ಷ ಆರ್‌ಸಿಬಿಯಲ್ಲಿ ಇದ್ದೆ. ಇದೀಗ ಕೆಂಪು ಜೆರ್ಸಿಯಿಂದ ನೀಲಿ ಜೆರ್ಸಿಗೆ ಬದಲಾಗಿದ್ದೇನೆ. ಪಂದ್ಯದ ಆರಂಭಕ್ಕೂ ಮುಂಚೆ ಸ್ವಲ್ಪ ಆತಂಕವಿತ್ತು. ಆದರೆ ಕೈಗೆ ಚೆಂಡು ಸಿಕ್ಕ ತಕ್ಷಣವೇ ಬೌಲಿಂಗ್‌ನತ್ತ ಪೂರ್ಣ ಗಮನವನ್ನು ಹರಿಸಿದೆ," ಎಂದು ಹೇಳಿದರು.












Click it and Unblock the Notifications